ETV Bharat / sports

ಕ್ಯಾಪ್ಟನ್ಸಿ ಕ್ಯಾಪ್ಟನ್ಸಿ ಕ್ಯಾಪ್ಟನ್ಸಿ.. ಐ ಅವಾಯ್ಡ್​, ಬಟ್​ ಕ್ಯಾಪ್ಟನ್ಸಿ ಲೈಕ್ಸ್​ ಮಿ.. ಐ ಕಾಂಟ್ ಅವಾಯ್ಡ್​​.. ಕೆಜಿಎಫ್​​ ಶೈಲಿಯಲ್ಲಿ ಧೋನಿ ಗುಣಗಾನ - ಐಪಿಎಲ್​ 2022

ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಮಹೇಂದ್ರ ಸಿಂಗ್​ ಧೋನಿಗೆ ನಾಯಕತ್ವ ಮತ್ತೊಮ್ಮೆ ಒಲಿದು ಬಂದಿದ್ದು, ಈ ವಿಷಯವನ್ನಿಟ್ಟುಕೊಂಡು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತರಹೇವಾರಿ ಟ್ವೀಟ್​ ಹಾಕಿಕೊಳ್ಳುವ ಮೂಲಕ ಅವರನ್ನು ಗುಣಗಾನ ಮಾಡಿದ್ದಾರೆ.

MS Dhoni Backs as CSK captain
MS Dhoni Backs as CSK captain
author img

By

Published : Apr 30, 2022, 10:10 PM IST

ಹೈದರಾಬಾದ್​: 2022ರ ಐಪಿಎಲ್​​ ಟೂರ್ನಿ ಆರಂಭಗೊಳ್ಳುವುದಕ್ಕೂ ಕೇವಲ ಎರಡು ದಿನ ಮುಂಚಿತವಾಗಿ ಸಿಎಸ್​ಕೆ ತಂಡದ ನಾಯಕತ್ವವನ್ನ ಮಹೇಂದ್ರ ಸಿಂಗ್​ ಧೋನಿ ಸಹ ಆಟಗಾರ ರವೀಂದ್ರ ಜಡೇಜಾ ಹೆಗಲಿಗೆ ಹಸ್ತಾಂತರ ಮಾಡಿ, ತಾವು ತಂಡದಲ್ಲಿ ಕೇವಲ ಆಟಗಾರನಾಗಿ ಮುಂದುವರೆಯುವುದಾಗಿ ಹೇಳಿದ್ದರು. ಆದರೆ, ಇದೀಗ ನಾಯಕತ್ವ ಅವರನ್ನ ಮತ್ತೊಮ್ಮೆ ಹುಡುಕಿಕೊಂಡು ಬಂದಿದೆ.

40 ವರ್ಷದ ಮಹೇಂದ್ರ ಸಿಂಗ್​ ಧೋನಿಗೆ ಮತ್ತೊಮ್ಮೆ ಚೆನ್ನೈ ತಂಡದ ನಾಯಕತ್ವ ಜವಾಬ್ದಾರಿ ಸಿಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ತರಹೇವಾರಿ ಸಂದೇಶಗಳು ಹರಿದಾಡ್ತಿವೆ. ಅದರಲ್ಲಿ ಕೆಜಿಎಫ್​ ಚಾಪ್ಟರ್​ 2 ಚಿತ್ರದ ಜನಪ್ರಿಯ ಡೈಲಾಗ್​​ವೊಂದು ಸಿಕ್ಕಾಪಟ್ಟೆ ವೈರಲ್​​ ಆಗ್ತಿದೆ.

ಇದನ್ನೂ ಓದಿ: ಧೋನಿಗೆ ಸಿಎಸ್​ಕೆ ನಾಯಕತ್ವ ಬಿಟ್ಟುಕೊಟ್ಟ ಜಡೇಜಾ.. ಕಾರಣ?

ಕೆಜಿಎಫ್​ ಚಾಪ್ಟರ್ 2 ಚಿತ್ರದಲ್ಲಿ ಯಶ್​ ಅವರ ವೈಲೆನ್ಸ್​ ವೈಲೆನ್ಸ್​.. ಡೈಲಾಗ್ ಇದೀಗ ಧೋನಿ ವಿಷಯದಲ್ಲೂ ಬಳಕೆಯಾಗ್ತಿದೆ. ಕೆಲವರು ಧೋನಿ ಚಿತ್ರಕ್ಕೆ 'ಕ್ಯಾಪ್ಟನ್ಸಿ​​ ಕ್ಯಾಪ್ಟನ್ಸಿ ಕ್ಯಾಪ್ಟನ್ಸಿ..ಐ ಅವಾಯ್ಡ್​, ಬಟ್​ ಕ್ಯಾಪ್ಟನ್ಸಿ ಲೈಕ್ಸ್​ ಮಿ.. ಐ ಕಾಂಟ್ ಅವಾಯ್ಡ್​​..' ಎಂಬ ಶೀರ್ಷಿಕೆ ಹಾಕಿಕೊಂಡಿದ್ದಾರೆ. ಮತ್ತೆ ಕೆಲವರು 'ವೆಲ್​ಕಮ್​ ಬ್ಯಾಕ್​ ಕೂಲ್ ಕ್ಯಾಪ್ಟನ್'​ ಎಂದು ಹೇಳಿದ್ದಾರೆ. ಇದರ ಮಧ್ಯೆ ಕೆಲವರು ರವೀಂದ್ರ ಜಡೇಜಾ ತಮ್ಮ ನಾಯಕತ್ವ ಹಸ್ತಾಂತರ ಮಾಡಿದ್ರಾ ಅಥವಾ ಫ್ರಾಂಚೈಸಿ ಅವರನ್ನ ಕೆಳಗಿಸ್ತಾ? ಎಂಬ ಪ್ರಶ್ನೆ ಸಹ ಮಾಡಿದ್ದಾರೆ.

ಟೀಂ ಇಂಡಿಯಾ ಮಾಜಿ ಆಟಗಾರರಾದ ವಾಸೀಂ ಜಾಫರ್​, ಪಾರ್ಥಿವ್ ಪಟೇಲ್​ ಕೂಡ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. 2008ರಿಂದಲೂ 2021ರವರೆಗೆ ಚೆನ್ನೈ ತಂಡದ ನಾಯಕತ್ವ ಜವಾಬ್ದಾರಿ ಹೊತ್ತುಕೊಂಡಿದ್ದ ಧೋನಿ, ಈ ಸಲದ ಟೂರ್ನಿಯಲ್ಲಿ ಆಲ್​ರೌಂಡರ್ ಜಡೇಜಾಗೆ ಈ ಜವಾಬ್ದಾರಿ ನೀಡಿದ್ದರು.

  • The feeling we're all going to experience seeing Dhoni lead CSK again might seem like deja vu, but it's in fact Jadeja vu 😛 #CSK𓃬 #IPL2022

    — Wasim Jaffer (@WasimJaffer14) April 30, 2022 " class="align-text-top noRightClick twitterSection" data=" ">

ETV Bharat Logo

Copyright © 2025 Ushodaya Enterprises Pvt. Ltd., All Rights Reserved.