ETV Bharat / sports

IPL 2022: ಮುಂದಿನ ಆವೃತ್ತಿಯಲ್ಲಿ 10 ತಂಡ, 4 ಪ್ಲೇಯರ್ಸ್​ ಮಾತ್ರ ಉಳಿಸಿಕೊಳ್ಳಲು ಅವಕಾಶ

author img

By

Published : Jul 5, 2021, 8:00 PM IST

ಮುಂದಿನ ವರ್ಷದ ಇಂಡಿಯನ್​ ಪ್ರೀಮಿಯರ್ ಲೀಗ್​ಗೆ ಭಾರತೀಯ ಕ್ರಿಕೆಟ್ ಮಂಡಳಿ ಹೊಸ ಯೋಜನೆ ರೂಪಿಸಿಕೊಂಡಿದ್ದು,ಅದಕ್ಕಾಗಿ ದೊಡ್ಡ ಮಟ್ಟದ ಹರಾಜು ಪ್ರಕ್ರಿಯೆ ನಡೆಸಲು ಮುಂದಾಗಿದೆ.

IPL 2022
IPL 2022

ಮುಂಬೈ: ಮುಂದಿನ ವರ್ಷ ನಡೆಯಲಿರುವ ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ಮಹತ್ವದ ಬದಲಾವಣೆ ಆಗಲಿದ್ದು, 10 ತಂಡಗಳು ಕಣಕ್ಕಿಳಿಯುವುದು ಬಹುತೇಕ ಖಚಿತ. ಹೊಸ ಸೀಸನ್‌ನಲ್ಲಿ ಹೊಸ ಬದಲಾವಣೆಗಳೊಂದಿಗೆ ಟೂರ್ನಿ ಆರಂಭಿಸಲು ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಐ) ಮುಂದಾಗಿದೆ ಎಂದು ವರದಿಯಾಗಿದೆ.

2022ರ ಐಪಿಎಲ್​​ನಲ್ಲಿ ಎರಡು ಹೊಸ ಫ್ರಾಂಚೈಸಿಗಳು ಸೇರಿಕೊಳ್ಳಲಿವೆ. ಅದಕ್ಕಾಗಿ ಬಿಸಿಸಿಐ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಇದರ ಜತೆಗೆ ತಂಡದಲ್ಲಿ ಕೇವಲ ನಾಲ್ವರು ಪ್ಲೇಯರ್ಸ್ ಉಳಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ಉಳಿದಂತೆ ಎಲ್ಲ ಆಟಗಾರರನ್ನು ಬಿಟ್ಟುಕೊಡಬೇಕಾಗಿದೆ. ಅದಕ್ಕಾಗಿ ದೊಡ್ಡ ಮಟ್ಟದಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಸಲು ಯೋಜನೆ​ ರೂಪುಗೊಂಡಿದೆ.

2021ರ ಆಗಸ್ಟ್​ ವೇಳೆಗೆ ಈಗಾಗಲೇ ತಂಡ ಸೇರ್ಪಡೆಗೆ ನೀಡಿರುವ ಟೆಂಡರ್​ ಮುಕ್ತಾಯಗೊಳ್ಳಲಿದೆ. ನಂತರ ಹೊಸದಾಗಿ ಸೇರಿಕೊಳ್ಳಲಿರುವ ಎರಡು ಫ್ರಾಂಚೈಸಿಗಳ ಬಗ್ಗೆ ಬಿಸಿಸಿಐ ಮಾಹಿತಿ ನೀಡಲಿದೆ. ಈ ಎಲ್ಲ ಕಾರ್ಯ 2022ರ ಜನವರಿ ಹೊತ್ತಿಗೆ ಫೈನಲ್​ ಆಗಲಿದ್ದು, ಮುಂದಿನ ವರ್ಷ ಫೆಬ್ರವರಿಯಲ್ಲಿ ದೊಡ್ಡ ಮಟ್ಟದ ಹರಾಜು ಪ್ರಕ್ರಿಯೆ ನಡೆಯಲಿದೆ.

ಫ್ರಾಂಚೈಸಿಗಳು ಕೇವಲ ನಾಲ್ವರು ಆಟಗಾರರಿಗೆ ಉಳಿಸಿಕೊಳ್ಳಬೇಕಾಗಿರುವ ಕಾರಣ, ಎಲ್ಲ ತಂಡಗಳಿಗೆ ಆಟಗಾರರ ಖರೀದಿಗೆ 90 ಕೋಟಿ ರೂ. ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಸದ್ಯ 85 ಕೋಟಿ ರೂ. ನಿಗದಿಪಡಿಸಲಾಗಿದೆ. ಪ್ರಾಂಚೈಸಿಗಳು ಇದೀಗ ಇಬ್ಬರು ದೇಶಿ ಹಾಗೂ ಮತ್ತಿಬ್ಬರು ವಿದೇಶಿ ಆಟಗಾರರನ್ನ ಉಳಿಸಿಕೊಳ್ಳಬೇಕಾಗಿದೆ. ಅಥವಾ ಮೂವರು ದೇಶಿ ಪ್ಲೇಯರ್ಸ್ ಹಾಗೂ ಓರ್ವ ವಿದೇಶಿ ಆಟಗಾರನಿಗೆ ತಂಡದಲ್ಲಿ ಇಟ್ಟುಕೊಳ್ಳಲು ಅವಕಾಶವಿದೆ.

ಇದನ್ನೂ ಓದಿರಿ: Tokyo Olympics: ಭಾರತದ ಧ್ವಜ ಹಿಡಿದುಕೊಳ್ಳಲಿದ್ದಾರೆ ಮೇರಿ ಕೋಮ್​, ಮನಪ್ರೀತ್​ ಸಿಂಗ್​

ಲಭ್ಯವಾಗಿರುವ ಮಾಹಿತಿ ಪ್ರಕಾರ, ಕೋಲ್ಕತ್ತಾ ಮೂಲದ ಆರ್​​​ಪಿ ಸಂಜೀವ್​​ ಗೋಯೆಕಾ ಗ್ರೂಪ್​, ಅಹಮದಾಬಾದ್​ನ ಅದಾನಿ ಗ್ರೂಪ್​, ಹೈದರಾಬಾದ್​ನ ಔರ್​ಬಿಂದೂ ಫಾರ್ಮಾ ಗ್ರೂಪ್​ ಹಾಗೂ ಗುಜರಾತ್​ನ ಟೊರೆಟ್​ ಕಂಪನಿ ಹೊಸ ಫ್ರಾಂಚೈಸಿ ಖರೀದಿ ಮಾಡಲು ಮುಂದಾಗಿವೆ ಎಂದು ತಿಳಿದು ಬಂದಿದೆ.

ಕೊರೊನಾ ವೈರಸ್​ ಕಾರಣ ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್ ಲೀಗ್​ ಟೂರ್ನಿ ಅರ್ಧಕ್ಕೆ ಮೊಟಕುಗೊಂಡಿದ್ದು, ಇದೀಗ ಬರುವ ಸೆಪ್ಟೆಂಬರ್ ತಿಂಗಳಲ್ಲಿ ಯುಎಇನಲ್ಲಿ ಆಯೋಜನೆ ಮಾಡಲು ಬಿಸಿಸಿಐ ನಿರ್ಧರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.