ETV Bharat / sports

ಕನ್ನಡಿಗ ಮನೀಶ್ ಪಾಂಡೆ ಮೇಲೆ RCB ಕಣ್ಣು.. ಕೊಹ್ಲಿ ಬದಲಿಗೆ ನಾಯಕನಾಗುವ ಸಾಧ್ಯತೆ

author img

By

Published : Dec 23, 2021, 7:24 PM IST

Updated : Dec 23, 2021, 7:41 PM IST

ಮನೀಶ್ ಪಾಂಡೆ 2009ರಲ್ಲಿ ಬೆಂಗಳೂರು ಫ್ರಾಂಚೈಸಿ ಪರ ಆಡಿ ಫೈನಲ್ ಪ್ರವೇಶಿಸಲು ನಿರ್ಣಾಯಕ ಪಾತ್ರವಹಿಸಿದ್ದರು. ಶ್ರೀಮಂತ ಕ್ರಿಕೆಟ್ ಲೀಗ್​ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ದಾಖಲೆ ಹೊಂದಿರುವ ಮನೀಶ್ ನಂತರ ಪುಣೆ ವಾರಿಯರ್ಸ್, ಕೆಕೆಆರ್​ ಮತ್ತು ಸನ್​ರೈಸರ್ಸ್ ಹೈದರಾಬಾದ್​ ಫ್ರಾಂಚೈಸಿಗಳ ಪರ ಆಡಿದ್ದರು. 2014ರಲ್ಲಿ ಕೆಕೆಆರ್​ ಪರ ಫೈನಲ್​ನಲ್ಲಿ 94 ರನ್​ ಸಿಡಿಸಿ ಫ್ರಾಂಚೈಸಿ ಚಾಂಪಿಯನ್ ಆಗಲು ನೆರವಾಗಿದ್ದರು.

Manish Pandey to reportedly replace Virat Kohli as RCB skipper
ಮನೀಶ್ ಪಾಂಡೆ ಆರ್​ಸಿಬಿ ನಾಯಕ

ಹೈದರಾಬಾದ್​: ಭಾರತದ ಭರವಸೆಯ ಬ್ಯಾಟರ್​ಗಳಲ್ಲಿ ಒಬ್ಬರಾಗಿರುವ ಕನ್ನಡಿಗ ಮನೀಶ್​ ಪಾಂಡೆ 2022ರಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿ ಖರೀದಿಸಲಿರುವ ಟಾಪ್​ ಆಟಗಾರರಲ್ಲಿ ಒಬ್ಬರಾಗಬಹುದು ಎನ್ನಲಾಗುತ್ತಿದ್ದು, ಅವರೇ ವಿರಾಟ್​ ಕೊಹ್ಲಿಯಿಂದ ತೆರವಾಗಿರುವ ನಾಯಕತ್ವದ ಪ್ರಬಲ ಸ್ಪರ್ಧಿ ಎಂದು ಮೂಲಗಳಿಂದ ತಿಳಿದು ಬಂದಿದೆ.

ನಿರಂತರ ಅವಕಾಶಗಳ ಕೊರತೆ, ಸಿಕ್ಕ ಅವಕಾಶಗಳಲ್ಲಿ ಒತ್ತಡಕ್ಕೆ ಸಿಲುಕಿ ಉತ್ತಮ ಪ್ರದರ್ಶನ ತೋರಲು ವಿಫಲರಾಗಿ ಭಾರತ ತಂಡದಿಂದ ಹೊರಬಿದ್ದಿರುವ ಮನೀಶ್ ಪಾಂಡೆ ಇತ್ತೀಚಿನ ದೇಶಿ ಟೂರ್ನಿ ವಿಜಯ ಹಜಾರೆಯಲ್ಲಿ 279 ಮತ್ತು ಸೈಯದ್​ ಮುಷ್ತಾಕ್ ಅಲಿ ಟಿ20ಯಲ್ಲಿ 272 ರನ್​ಗಳಿಸಿ ಮಿಂಚಿದ್ದರು. ಅಲ್ಲದೇ ಕರ್ನಾಟಕ ತಂಡವನ್ನು ಫೈನಲ್​ಗೇರಿಸುವಲ್ಲಿ ಯಶಸ್ವಿಯಾಗಿದ್ದರು.

ಮನೀಶ್ ಪಾಂಡೆ 2009ರಲ್ಲಿ ಬೆಂಗಳೂರು ಫ್ರಾಂಚೈಸಿ ಪರ ಆಡಿ ಫೈನಲ್ ಪ್ರವೇಶಿಸಲು ನಿರ್ಣಾಯಕ ಪಾತ್ರವಹಿಸಿದ್ದರು. ಶ್ರೀಮಂತ ಕ್ರಿಕೆಟ್ ಲೀಗ್​ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ದಾಖಲೆ ಹೊಂದಿರುವ ಮನೀಶ್ ನಂತರ ಪುಣೆ ವಾರಿಯರ್ಸ್, ಕೆಕೆಆರ್​ ಮತ್ತು ಸನ್​ರೈಸರ್ಸ್ ಹೈದರಾಬಾದ್​ ಫ್ರಾಂಚೈಸಿಗಳ ಪರ ಆಡಿದ್ದರು. 2014ರಲ್ಲಿ ಕೆಕೆಆರ್​ ಪರ ಫೈನಲ್​ನಲ್ಲಿ 94 ರನ್​ ಸಿಡಿಸಿ ಫ್ರಾಂಚೈಸಿ ಚಾಂಪಿಯನ್ ಆಗಲು ನೆರವಾಗಿದ್ದರು.

ಇನ್ನು ದೇಶಿ ಕ್ರಿಕೆಟ್​ನಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸುತ್ತಿರುವ ಮನೀಶ್​ ಪಾಂಡೆಗೆ 2022ರ ಆವೃತ್ತಿಯಲ್ಲಿ ಆರ್​ಸಿಬಿ ತಂಡದ ನೇತೃತ್ವ ಸಿಗಬಹುದು ಎನ್ನಲಾಗುತ್ತಿದೆ. 2021ರ ಐಪಿಎಲ್​ನ 2ನೇ ಹಂತದಲ್ಲಿ ವಿರಾಟ್​ ಕೊಹ್ಲಿ ತಾವೂ ಆರ್​ಸಿಬಿ ನಾಯಕತ್ವದಿಂದ ಕೆಳಗಿಳಿಯುವುದಾಗಿ ತಿಳಿಸಿದ್ದರು.

ಇನ್ನು ಮನೀಶ್ ಪಾಂಡೆ ಆರ್​ಸಿಬಿ ಸೇರಿಕೊಂಡರೆ ಕೆಲವು ವರ್ಷಗಳಿಂದ ಕೊರತೆಯಾಗಿ ಕಂಡು ಬರುತ್ತಿರುವ 3ನೇ ಕ್ರಮಾಂಕದ ಸಮಸ್ಯೆಯೂ ಕೂಡ ಬಗೆಹರಿಯಲಿದೆ. ಎಲ್ಲಕ್ಕೂ ಮಿಗಿಲಾಗಿ ಪಾಂಡೆ ಟಿ-20 ಕ್ರಿಕೆಟ್​ನಲ್ಲಿ 154 ಐಪಿಎಲ್ ಪಂದ್ಯಗಳನ್ನಾಡಿದ ಅನುಭವವಿದೆ. ಅವರು 30ರ ಸರಾಸರಿಯಲ್ಲಿ 3,560 ರನ್​ ಸಿಡಿಸಿದ್ದಾರೆ.

ಇದನ್ನೂ ಓದಿ:Video: ಪಂದ್ಯ ಗೆಲ್ಲಲು ಕೊನೆ ಬಾಲ್​ನಲ್ಲಿ ಬೇಕಿತ್ತು 6 ರನ್​, ಸಿಕ್ಸರ್​ ಸಿಡಿಸಿ ವಿನ್ ಮಾಡಿಸಿದ ಟ್ರೆಂಟ್ ​​ಬೌಲ್ಟ್​!

ಇದನ್ನೂ ಓದಿ:ಫೆಬ್ರವರಿ 2ನೇ ವಾರ ಬೆಂಗಳೂರಿನಲ್ಲಿ ಐಪಿಎಲ್ ಮೆಗಾ ಹರಾಜು ನಡೆಯುವ ಸಾಧ್ಯತೆ

Last Updated : Dec 23, 2021, 7:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.