ಮುಂಬೈ: ಪೃಥ್ವಿ ಶಾ ಮತ್ತು ಡೇವಿಡ್ ವಾರ್ನರ್ ಅರ್ಧಶತಕ ಹಾಗೂ ಪಂತ್ ಠಾಕೂರ್ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೆಕೆಆರ್ ಗೆ 216 ರನ್ಗಳ ಬೃಹತ್ ಮೊತ್ತದ ಟಾರ್ಗೆಟ್ ನೀಡಿದೆ.
ಮುಂಬೈನ ಬ್ರಬೌರ್ನ್ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡಕ್ಕೆ ಆರಂಭಿಕರಾದ ಪೃಥ್ವಿ ಶಾ ಮತ್ತು ಡೇವಿಡ್ ವಾರ್ನರ್ ಮೊದಲ ವಿಕೆಟ್ಗೆ 93 ರನ್ಗಳ ಜೊತೆಯಾಟ ನೀಡಿದರು. ಎಂದಿನಂತೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ ಶಾ 29 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ 51 ರನ್ಗಳಿಸಿದರೆ, ಡೇವಿಡ್ ವಾರ್ನರ್ 45 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ 61 ರನ್ಗಳಿಸಿದರು.
ನಾಯಕ ಪಂತ್ 14 ಎಸೆತಗಳಲ್ಲಿ ತಲಾ 2 ಬೌಂಡರಿ ಮತ್ತಿ ಸಿಕ್ಸರ್ಗಳ ಸಹಿತ 27, ಅಕ್ಷರ್ ಪಟೇಲ್ 14 ಎಸೆತಗಳಲ್ಲಿ ಅಜೇಯ 22 ಮತ್ತು ಶಾರ್ದೂಲ್ ಠಾಕೂರ್ 11 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು 3 ಸಿಕ್ಸರ್ಗಳ ಸಹಿತ ಅಜೇಯ 29 ರನ್ ಸಿಡಿಸುವ ಮೂಲಕ ಕೆಕೆಆರ್ಗೆ 216 ರನ್ಗಳ ಬೃಹತ್ ಗುರಿ ನೀಡಲು ನೆರವಾದರು.
-
.@davidwarner31 top scored for the #DelhiCapitals and became the top performer as @DelhiCapitals posted 215/5 on the board. 👌 👌
— IndianPremierLeague (@IPL) April 10, 2022 " class="align-text-top noRightClick twitterSection" data="
A look at the summary of his innings 🔽
Follow the match ▶️ https://t.co/4vNW3LXMWM#TATAIPL | #KKRvDC pic.twitter.com/ICO50iHpaK
">.@davidwarner31 top scored for the #DelhiCapitals and became the top performer as @DelhiCapitals posted 215/5 on the board. 👌 👌
— IndianPremierLeague (@IPL) April 10, 2022
A look at the summary of his innings 🔽
Follow the match ▶️ https://t.co/4vNW3LXMWM#TATAIPL | #KKRvDC pic.twitter.com/ICO50iHpaK.@davidwarner31 top scored for the #DelhiCapitals and became the top performer as @DelhiCapitals posted 215/5 on the board. 👌 👌
— IndianPremierLeague (@IPL) April 10, 2022
A look at the summary of his innings 🔽
Follow the match ▶️ https://t.co/4vNW3LXMWM#TATAIPL | #KKRvDC pic.twitter.com/ICO50iHpaK
ಕೆಕೆಆರ್ ಪರ ಸುನೀಲ್ ನರೇನ್ 21ಕ್ಕೆ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಚಕ್ರವರ್ತಿ 44ಕ್ಕೆ1 ಮತ್ತು ರಸೆಲ್ 16ಕ್ಕೆ1 ವಿಕೆಟ್ ಪಡೆದರೆ, ದುಬಾರಿಯಾದರು. ಉಮೇಶ್ ಯಾದವ್ 48 ಮತ್ತು ಪ್ಯಾಟ್ ಕಮಿನ್ಸ್ 51 ರನ್ ಬಿಟ್ಟುಕೊಟ್ಟು ದುಬಾರಿಯಾದರು.
ಈ ಪಂದ್ಯದಲ್ಲಿ ಕೋಲ್ಕತ್ತಾ ಯಾವುದೇ ಬದಲಾವಣೆಯಿಲ್ಲದೆ ಕಣಕ್ಕಿಳಿದಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ಎನ್ರಿಚ್ ನಾರ್ಕಿಯಾ ಅವರ ಬದಲಾಗಿ ಖಲೀಲ್ ಅಹ್ಮದ್ಗೆ ಅವಕಾಶ ನೀಡಿದೆ.
ಮುಖಾಮುಖಿ: ಎರಡು ತಂಡಗಳು 28 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಕೆಕೆಆರ್ 16-12ರಲ್ಲಿ ಮುನ್ನಡೆ ಸಾಧಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಪೃಥ್ವಿ ಶಾ, ಡೇವಿಡ್ ವಾರ್ನರ್, ರಿಷಬ್ ಪಂತ್(ನಾಯಕ/ವಿಕೆಟ್ ಕೀಪರ್), ರೋವ್‌ಮನ್ ಪೊವೆಲ್, ಸರ್ಫರಾಜ್ ಖಾನ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮುಸ್ತಾಫಿಜುರ್ ರೆಹಮಾನ್, ಖಲೀಲ್ ಅಹ್ಮದ್
ಕೋಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ XI): ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ನಿತೀಶ್ ರಾಣಾ, ಆಂಡ್ರೆ ರಸೆಲ್, ಸುನಿಲ್ ನರೈನ್, ಪ್ಯಾಟ್ ಕಮಿನ್ಸ್, ಉಮೇಶ್ ಯಾದವ್, ರಸಿಖ್ ಸಲಾಂ, ವರುಣ್ ಚಕ್ರವರ್ತಿ
ಇದನ್ನೂ ಓದಿ: ಸಹೋದರಿ ಸಾವು: ಮನೆಗೆ ತೆರಳಿದ ಆರ್‌ಸಿಬಿ ಆಟಗಾರ ಹರ್ಷಲ್ ಪಟೇಲ್