ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿಂದು ಬಲಿಷ್ಠ ಪಂಜಾಬ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಪೈಪೋಟಿ ನಡೆಸಲಿವೆ. ಉಭಯ ತಂಡಗಳು ಗೆಲುವಿನ ನಿರೀಕ್ಷೆಯೊಂದಿಗೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಕಣಕ್ಕಿಳಿಯಲಿವೆ. ಪಂಜಾಬ್ ತಂಡಕ್ಕೆ ಕನ್ನಡಿಗ ಮಯಾಂಕ್ ಅಗರವಾಲ್ ಸಾರಥ್ಯವಿದ್ದು, ಕೋಲ್ಕತ್ತಾ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸುತ್ತಿದ್ದಾರೆ.
ಈಗಾಗಲೇ ಬೆಂಗಳೂರು ವಿರುದ್ಧ ತಾನಾಡಿರುವ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲು ಮಾಡಿರುವ ಪಂಜಾಬ್ ಕಿಂಗ್ಸ್ ಇಂದಿನ ಪಂದ್ಯದಲ್ಲೂ ಕೋಲ್ಕತ್ತಾ ವಿರುದ್ಧ ಗೆಲುವಿನ ನಗೆ ಬೀರುವ ವಿಶ್ವಾಸದಲ್ಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗೆಲುವು ಸಾಧಿಸಿದ್ದ ಕೋಲ್ಕತ್ತಾ, ಎರಡನೇ ಪಂದ್ಯದಲ್ಲಿ ಬೆಂಗಳೂರು ವಿರುದ್ಧ ಸೋಲು ಕಂಡಿದೆ. ಹೀಗಾಗಿ ಗೆಲುವಿನ ಲಯಕ್ಕೆ ಮರಳುವ ಛಲದಲ್ಲಿದೆ.
ಬಲಿಷ್ಠ ಬ್ಯಾಟಿಂಗ್ ಲೈನಪ್ ಹೊಂದಿರುವ ಪಂಜಾಬ್ ಮೊದಲ ಪಂದ್ಯದಲ್ಲೇ 200ಕ್ಕೂ ಹೆಚ್ಚು ರನ್ಗಳನ್ನುನಿರಾಯಾಸವಾಗಿ ಚೇಸ್ ಮಾಡಿದ್ದು, ಇಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇದೆ. ಬೌಲಿಂಗ್ ವಿಭಾಗ ಕೂಡ ಸಮತೋಲನದಿಂದ ಕೂಡಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಬಲಿಷ್ಠವಾಗಿರುವ ಕೋಲ್ಕತ್ತಾ ತಂಡ ಬೆಂಗಳೂರು ವಿರುದ್ಧ ಬ್ಯಾಟಿಂಗ್ ವೈಫಲ್ಯದಿಂದಾಗಿ ಸೋಲು ಕಂಡಿದೆ. ತಂಡದ ಪರ ಉಮೇಶ್ ಯಾದವ್, ಹರ್ಷದೀಪ್ ಸಿಂಗ್, ರಾಹುಲ್ ಚಹರ್ ಉತ್ತಮ ಲಯದಲ್ಲಿದ್ದಾರೆ.
ಇದನ್ನೂ ಓದಿ: ಕಳೆದು ಹೋದ ಬ್ಯಾಗ್ಗೋಸ್ಕರ ಇಂಡಿಗೋ ವೆಬ್ಸೈಟ್ ಹ್ಯಾಕ್ ಮಾಡಿದೆ ಎಂದ ಟೆಕ್ಕಿ!
ತಂಡಗಳು ಇಂತಿವೆ: ಪಂಜಾಬ್ ಕಿಂಗ್ಸ್: ಮಯಾಂಕ್ ಅಗರವಾಲ್(ಕ್ಯಾಪ್ಟನ್), ಶಿಖ್ ಧವನ್, ಲಿಯಾವ್ ಲಿವಿಂಗ್ಸ್ಟೋನ್, ರಾಜಪಕ್ಸ(ವಿ,ಕೀ), ಶಾರೂಕ್ ಖಾನ್, ಒಡಿಯನ್ ಸ್ಮಿತ್, ರಾಜ್ ಬಾವಾ, ಅರ್ಷದೀಪ್ ಸಿಂಗ್, ಹರಪ್ರೀತ್ ಬ್ರಾರ್, ಸಂದೀಪ್ ಶರ್ಮಾ, ರಾಹುಲ್ ಚಹಾರ್, ಪ್ರಭಸಿಮ್ರನ್ ಸಿಂಗ್, ರಿಷಿ ಧವನ್, ಪ್ರೇರಕ್ ಮಂಕಡ್, ವೈಭವ್ ಅರೋರಾ
ಕೋಲ್ಕತ್ತಾ ನೈಟ್ ರೈಡರ್ಸ್: ಶ್ರೇಯಸ್ ಅಯ್ಯರ್(ಕ್ಯಾಪ್ಟನ್), ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್ಸ್,ಶೇಲ್ಡನ್ ಜಾಕ್ಸನ್(ವಿ,ಕೀ), ಆ್ಯಂಡ್ರೆ ರಸೆಲ್, ಸುನೀಲ್ ನರೈನ್, ಟೀಮ್ ಸೌಥಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ,ಶಿವಂ ಮಾವಿ, ಮೊಹಮ್ಮದ್ ನಬಿ, ಬಾಬಾ ಇಂದ್ರಜೀತ್