ಅಹ್ಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್‌ನ ನೂತನ ಫ್ರಾಂಚೈಸಿ ಗುಜುರಾತ್ ಟೈಟನ್ಸ್ ತನ್ನ ಲೋಗೋವನ್ನು ಮೆಟಾವರ್ಸ್ ಮೂಲಕ ಬಿಡುಗಡೆ ಮಾಡಿದೆ.
ಈ ಲೋಗೋ 'ಟೈಟನ್ಸ್' ಎಂದು ಕರೆಯಲ್ಪಡುವ ತಮ್ಮ ತಂಡದ ಹೆಸರಿನ ಉತ್ಸಾಹವನ್ನು ಮತ್ತು ಉನ್ನತವಾದ ಗುರಿಗಳನ್ನು ಸಾಧಿಸುತ್ತಾ ಮುನ್ನುಗ್ಗುವಿಕೆಯನ್ನು ಸೂಚಿಸುತ್ತಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಮುಂಬರುವ ಆವೃತ್ತಿಯಲ್ಲಿ ಯಶಸ್ಸಿನ 'ಪರಾಕಾಷ್ಠೆ' ಸಾಧಿಸುವ ತಂಡದ ಆಕಾಂಕ್ಷೆಗಳನ್ನು ಇದು ಸಂಕೇತಿಸುತ್ತದೆ.
ಮೆಟಾವರ್ಸ್ನಲ್ಲಿ ನಾಯಕ ಹಾರ್ದಿಕ್ ಪಾಂಡ್ಯ, ಮುಖ್ಯ ಕೋಚ್ ಆಶಿಷ್ ನೆಹ್ರಾ ಮತ್ತು ಬ್ಯಾಟರ್ ಶುಬ್ಮನ್ ಗಿಲ್ ಸಂವಾದ ನಡೆಸಿದ ನಂತರ ಲೋಗೋವನ್ನು ಬಿಡುಗಡೆ ಮಾಡಿದ್ದಾರೆ. ಗುಜರಾತ್ನಲ್ಲಿ ಉತ್ತರಾಯಣ ಹಬ್ಬದ ಸಂದರ್ಭದಲ್ಲಿ ಗಾಳಿಪಟವನ್ನು ಹಾರಿಸುವ ಮೂಲಕ ಆಚರಿಸಲಾಗುತ್ತದೆ. ಈ ಲೋಗೋದಲ್ಲಿ ಗಾಳಿಪಟ ಆಕೃತಿಯನ್ನು ಹೊಂದಿದ್ದು, ಇದು ರಾಜ್ಯದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುತ್ತಿದೆ.
ಲೋಗೋದಲ್ಲಿ ಮಿಂಚಿನ ಚಿಹ್ನೆ ಕೂಡ ಇದ್ದು, ಇದು ಕತ್ತಲಿನಲ್ಲೂ ಆಕಾಶವನ್ನು ಸೆಕೆಂಡ್ನಲ್ಲಿ ಬೆಳಗಿಸುವ ಅಪಾರ ಶಕ್ತಿಯನ್ನು ಸಂಕೇತಿಸುತ್ತದೆ. ಇದು ಮೈದಾನದಲ್ಲಿ ತಂಡ ಪ್ರತಿಕೂಲತೆಯನ್ನು ವಿಜಯವಾಗಿ ಪರಿವರ್ತಿಸಲು ಸಂಕಲ್ಪ ಮಾಡಲು ಸಿದ್ಧವಿದೆ ಎನ್ನುವುದನ್ನು ಸೂಚಿಸುತ್ತಿದೆ.
ಗುಜರಾತ್ ಟೈಟನ್ಸ್ ಯುವ ಮತ್ತು ಅನುಭವಿಗಳ ಮಿಶ್ರಣ ತಂಡವಾಗಿದೆ. ಹಾರ್ದಿಕ್ ಪಾಂಡ್ಯ, ರಶೀದ್ ಖಾನ್ ಮತ್ತು ಶುಬ್ಮನ್ ಗಿಲ್ ಅವರನ್ನು ಡ್ರಾಪ್ ಮಾಡಿಕೊಂಡರೆ, ಹರಾಜಿನಲ್ಲಿ ಜೇಸನ್ ರಾಯ್, ಮೊಹಮ್ಮದ್ ಶಮಿ, ಲಾಕಿ ಫರ್ಗ್ಯುಸನ್ , ಡೇವಿಡ್ ಮಿಲ್ಲರ್ ಅಂತ ಸ್ಟಾರ್ ಆಟಗಾರರನ್ನು ಖರೀದಿಸಿದೆ.
ಇದನ್ನೂ ಓದಿ:ಭಾರತ ತಂಡದಿಂದ ಕೈಬಿಟ್ಟ ಮಾರನೇ ದಿನವೇ 83 ಎಸೆತಗಳಲ್ಲಿ 91 ರನ್ ಸಿಡಿಸಿದ ಪೂಜಾರ