ETV Bharat / sports

ಬಟ್ಲರ್, ಹೆಟ್ಮಾಯರ್ ಅಬ್ಬರ: ಆರ್​ಸಿಬಿಗೆ 170 ರನ್​ಗಳಿಗೆ ಸ್ಪರ್ಧಾತ್ಮಕ ಗುರಿ ನೀಡಿದ ರಾಯಲ್ಸ್

ಜೋಶ್ ಬಟ್ಲರ್​ ಅವರ ಅಜೇಯ 70 ರನ್​ ಮತ್ತು ಶಿಮ್ರಾನ್ ಹೆಟ್ಮಾಯರ್​ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್​ ತಂಡ ಆರ್​ಸಿಬಿಗೆ 170ರನ್​ಗಳ ಸ್ಪರ್ಧಾತ್ಮಕ ಗುರಿ ನೀಡುವಲ್ಲಿ ಸಫಲವಾಗಿದೆ.

ರಾಯಲ್​ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ್ ರಾಯಲ್ಸ್​

author img

By

Published : Apr 5, 2022, 9:44 PM IST

ಮುಂಬೈ: ಜೋಶ್ ಬಟ್ಲರ್​ ಅಜೇಯ ಅರ್ಧಶತಕ ಮತ್ತು ಶಿಮ್ರಾನ್ ಹೆಟ್ಮಾಯರ್​ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್​ ತಂಡ ಆರ್​ಸಿಬಿಗೆ 170ರನ್​ಗಳ ಸ್ಪರ್ಧಾತ್ಮಕ ಗುರಿ ನೀಡುವಲ್ಲಿ ಸಫಲವಾಗಿದೆ.

ಮುಂಬೈನ ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಆರ್​ಸಿಬಿ ಎದುರಾಳಿ ರಾಜಸ್ಥಾನ್​ ರಾಯಲ್ಸ್​ಗೆ ಬ್ಯಾಟಿಂಗ್ ಮಾಡುವುದಕ್ಕೆ ಆಹ್ವಾನ ನೀಡಿತು. ಹಾಗೆಯೇ ಯುವ ಬ್ಯಾಟರ್​ ಯಶಸ್ವಿ ಜೈಸ್ವಾಲ್(4) ವಿಕೆಟ್​ ಪಡೆಯುವ ಮೂಲಕ ಆರಂಭಿಕ ಮುನ್ನಡೆ ಪಡೆದುಕೊಂಡಿತು.

ಆದರೆ, 2ನೇ ವಿಕೆಟ್​ ಒಂದಾದ ಮಾಜಿ ಆರ್​ಸಿಬಿ ದಾಂಡಿಗ ದೇವದತ್ ಪಡಿಕ್ಕಲ್ ಮತ್ತು ಬಟ್ಲರ್​ 70 ರನ್​ ಸೇರಿಸಿ ಸ್ವಲ್ಪ ಸಮಯ ಡುಪ್ಲೆಸಿಸ್​ ಬಳಗವನ್ನು ಕಾಡಿದರು. ಆದರೆ, ಈ ಜೋಡಿ ಆರಂಭದಲ್ಲಿ ಅಬ್ಬರಿಸಿದರೂ, ನಂತರ ಹರ್ಷಲ್ ಪಟೇಲ್ ಮತ್ತು ವಿಲ್ಲೆ ಬೌಲಿಂಗ್​ ದಾಳಿಗೆ ರನ್​ಗಳಿಸಲಾಗದೇ ಪರದಾಡಿದರು. 29 ಎಸೆತಗಳಲ್ಲಿ ತಲಾ 2 ಸಿಕ್ಸರ್​-ಬೌಂಡರಿ ಸಹಿತ 37 ರನ್​ಗಳಿಸಿದ್ದ ಪಡಿಕ್ಕಲ್​ರನ್ನು ಪಟೇಲ್ ಪೆವಿಲಿಯನ್​ಗಟ್ಟಿದರೆ, ನಂತರ ಬಂದ ನಾಯಕ ಸಂಜು ಸಾಮ್ಸನ್​ ಕೇವಲ 8 ರನ್​ಗಳಸಿ ಹಸರಂಗ ಬೌಲಿಂಗ್​ನಲ್ಲಿ ಕಾಟ್ ಅಂಡ್ ಬೌಲ್ಡ್​ ಆದರು.

ಒಂದು ಹಂತದಲ್ಲಿ 18 ಓವರ್​ಗಳಲ್ಲಿ ಕೇವಲ 127 ರನ್​ಗಳಿಸಿದ್ದ ರಾಯಲ್ಸ್​ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತ್ತು. ಆದರೆ, ಹೆಟ್ಮಾಯರ್ ಮತ್ತು ಬಟ್ಲರ್ ಜೋಡಿ ಕೊನೆಯ 12 ಎಸೆತಗಳಲ್ಲಿ 42 ರನ್​ ಕದಿಯುವ ಮೂಲಕ ತಂಡದ ಮೊತ್ತವನ್ನು 170ರ ಸನಿಹಕ್ಕೆ ತಂದರು. ಬಟ್ಲರ್​ 47 ಎಸೆತಗಳಲ್ಲಿ 6 ಸಿಕ್ಸರ್​ಗಳ ಸಹಿತ ಅಜೇಯ 70 ರನ್​ಗಳಿಸಿದರೆ, ಹೆಟ್ಮಾಯರ್​ 31 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್​ಗಳ ಸಹಿತ ಅಜೇಯ 42 ರನ್​ಗಳಿಸಿದರು.

ಆರ್​ಸಿಬಿ ಪರ ಹರ್ಷಲ್ ಪಟೇಲ್ 4 ಓವರ್​ಗಳಲ್ಲಿ 18ಕ್ಕೆ1, ಡೇವಿಡ್ ವಿಲ್ಲೆ 29ಕ್ಕೆ1 ಮತ್ತು ಹಸರಂಗ 32ಕ್ಕೆ1 ವಿಕೆಟ್​ ಪಡೆದು ರಾಯಲ್ಸ್ ರನ್​ಗತಿಗೆ ಕಡಿವಾಣ ಹಾಕಿದರೆ, ಸಿರಾಜ್​ ಮತ್ತು ಆಕಾಶ್ ದೀಪ್ ಕ್ರಮವಾಗಿ 43 ಮತ್ತು 44 ರನ್​ ಬಿಟ್ಟುಕೊಡುವ ಮೂಲಕ ದುಬಾರಿಯಾದರು.

ಇದನ್ನೂ ಓದಿ:ಐಪಿಎಲ್ ಪ್ರಸಾರದ ಹಕ್ಕಿನ ಮೇಲೆ ಆ್ಯಪಲ್, ಯೂಟ್ಯೂಬ್ ಸೇರಿದಂತೆ ವಿಶ್ವದ ದಿಗ್ಗಜ ಕಂಪನಿಗಳ ಕಣ್ಣು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.