ಹೈದರಾಬಾದ್: 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಪ್ರಕ್ರಿಯೆಗೆ ಈಗಾಗಲೇ ಮುಹೂರ್ತ ಫಿಕ್ಸ್ ಆಗಿದ್ದು, ಬರುವ ಫೆ. 12, 13ರಂದು ಬೆಂಗಳೂರಿನಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ.
2022ರ ಐಪಿಎಲ್ ಹರಾಜಿನಲ್ಲಿ ಭಾಗಿಯಾಗಲು 1200ಕ್ಕೂ ಅಧಿಕ ಪ್ಲೇಯರ್ಸ್ ತಮ್ಮ ಹೆಸರು ನೋಂದಣಿ ಮಾಡಿದ್ದರು. ಆದರೆ, ಕೊನೆಯದಾಗಿ 590 ಆಟಗಾರರ ಹೆಸರು ಅಂತಿಮ ಮಾಡಲಾಗಿದೆ. ಈ ಆಟಗಾರರ ಪೈಕಿ ಬೆರಳು ಎಣಿಕೆಯಷ್ಟು ಪ್ಲೇಯರ್ಸ್ ಖರೀದಿಸಲು ಎಲ್ಲ ಫ್ರಾಂಚೈಸಿಗಳಿಂದ ತೀವ್ರ ಪೈಪೋಟಿ ಏರ್ಪಡಲಿದೆ.
![IPL 2022 Auction](https://etvbharatimages.akamaized.net/etvbharat/prod-images/14345002_wdfdfd.jpg)
ಪ್ರಮುಖವಾಗಿ ಸ್ಫೋಟಕ ಬ್ಯಾಟರ್ ಡೇವಿಡ್ ವಾರ್ನರ್, ಆಲ್ರೌಂಡರ್ ಆರ್. ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ಯಾಟ್ ಕಮ್ಮಿನ್ಸ್, ಕ್ವಿಂಟನ್ ಡಿ ಕಾಕ್, ಶಿಖರ್ ಧವನ್, ಫಾಫ್ ಡು ಪ್ಲೆಸಿಸ್, ಶ್ರೇಯಸ್ ಅಯ್ಯರ್, ಕಗಿಸೋ ರಬಾಡ ಮತ್ತು ಮೊಹಮ್ಮದ್ ಶಮಿ ದೊಡ್ಡ ಮೊತ್ತಕ್ಕೆ ಸೇಲ್ ಆಗುವ ಸಾಧ್ಯತೆ ಇದೆ. ಈ ಹಿಂದಿನ ಅನೇಕ ಐಪಿಎಲ್ ಆವೃತ್ತಿಗಳಲ್ಲಿ ಈ ಪ್ಲೇಯರ್ಸ್ ತಂಡಕ್ಕೆ ಆಧಾರವಾಗಿ, ಗೆಲುವಿನ ಕಾಣಿಕೆ ನೀಡಿದ್ದಾರೆ. ಹೀಗಾಗಿ, ಫ್ರಾಂಚೈಸಿಗಳು ಹೆಚ್ಚಿನ ಹಣ ನೀಡಿ ಖರೀದಿಸುವ ಸಾಧ್ಯತೆ ಇದೆ. ಇದರ ಜೊತೆಗೆ ಕೆಲ ಅನ್ಕ್ಯಾಪ್ಡ್ ಪ್ಲೇಯರ್ಸ್ ಕೂಡ ದಾಖಲೆಯ ಬೆಲೆಗೆ ಬಿಕರಿಯಾಗುವ ಸಾಧ್ಯತೆ ಇದೆ.
ಈ ಮೇಲೆ ತಿಳಿಸಿರುವ ಪ್ರಮುಖ ಪ್ಲೇಯರ್ಸ್ಗಾಗಿ ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಲಕ್ನೋ ಸೂಪರ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್ರೈಸರ್ಸ್ ಹೈದರಾಬಾದ್ ಮತ್ತು ಅಹಮದಾಬಾದ್ ತಂಡ ಬಿಡ್ ಮಾಡುವ ಸಾಧ್ಯತೆ ದಟ್ಟವಾಗಿದೆ.
-
𝘽𝙞𝙜 𝙉𝙖𝙢𝙚𝙨 𝙖𝙩 𝙩𝙝𝙚 𝙈𝙚𝙜𝙖 𝘼𝙪𝙘𝙩𝙞𝙤𝙣 💪🏻
— IndianPremierLeague (@IPL) February 1, 2022 " class="align-text-top noRightClick twitterSection" data="
A bidding war on the cards 👍🏻 👍🏻
Here are the 1⃣0⃣ Marquee Players at the 2⃣0⃣2⃣2⃣ #IPLAuction 🔽 pic.twitter.com/lOF1hBCp8o
">𝘽𝙞𝙜 𝙉𝙖𝙢𝙚𝙨 𝙖𝙩 𝙩𝙝𝙚 𝙈𝙚𝙜𝙖 𝘼𝙪𝙘𝙩𝙞𝙤𝙣 💪🏻
— IndianPremierLeague (@IPL) February 1, 2022
A bidding war on the cards 👍🏻 👍🏻
Here are the 1⃣0⃣ Marquee Players at the 2⃣0⃣2⃣2⃣ #IPLAuction 🔽 pic.twitter.com/lOF1hBCp8o𝘽𝙞𝙜 𝙉𝙖𝙢𝙚𝙨 𝙖𝙩 𝙩𝙝𝙚 𝙈𝙚𝙜𝙖 𝘼𝙪𝙘𝙩𝙞𝙤𝙣 💪🏻
— IndianPremierLeague (@IPL) February 1, 2022
A bidding war on the cards 👍🏻 👍🏻
Here are the 1⃣0⃣ Marquee Players at the 2⃣0⃣2⃣2⃣ #IPLAuction 🔽 pic.twitter.com/lOF1hBCp8o
ಇದನ್ನೂ ಓದಿರಿ: ವಿಶ್ವದಾದ್ಯಂತ ಲೀಗ್ ಆಡಿದ್ದೇನೆ, ಆದ್ರೆ ಐಪಿಎಲ್ ಲೆವೆಲ್ಗೆ ಯಾವುದು ಇಲ್ಲ: ತಿಸಾರ ಪೆರೆರಾ
ಈ ಸಲದ ಹರಾಜು ಪ್ರಕ್ರಿಯೆಯಲ್ಲಿ 48 ಆಟಗಾರರು ತಮ್ಮ ಮೂಲ ಬೆಲೆ 2 ಕೋಟಿ ರೂ. ಘೋಷಣೆ ಮಾಡಿಕೊಂಡಿದ್ದು, 20 ಪ್ಲೇಯರ್ಸ್ 1.5 ಕೋಟಿ ರೂ. ಹಾಗೂ 34 ಪ್ಲೇಯರ್ಸ್ 1 ಕೋಟಿ ಮೂಲ ಬೆಲೆ ಘೋಷಣೆ ಮಾಡಿದ್ದಾರೆ.ಈ ಸಲದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಿರುವ 590 ಪ್ಲೇಯರ್ಸ್ ಪೈಕಿ 228 ಕ್ಯಾಪ್ಡ್ ಹಾಗೂ 355 ಅನ್ಕ್ಯಾಪ್ಡ್ ಪ್ಲೇಯರ್ಸ್ ಆಗಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ