ಮುಂಬೈ: ಸನ್ರೈಸರ್ಸ್ ಹೈದರಾಬಾದ್ ತಂಡದ ಆಲ್ರೌಂಡ್ ಪ್ರದರ್ಶನದ ಮುಂದೆ ಮಂಕಾದ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ 2022ರಲ್ಲಿ 4ನೇ ಸೋಲು ಕಂಡಿದ್ದು, ವಿಲಿಯಮ್ಸನ್ ಬಳಗ ಟೂರ್ನಿಯಲ್ಲಿ ಮೊದಲ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ.
ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಸನ್ರೈಸರ್ಸ್ ಹೈದರಾಬಾದ್ ತಂಡ ಸಿಎಸ್ಕೆಗೆ ಬ್ಯಾಟಿಂಗ್ ಆಹ್ವಾನಿಸಿತು. ಆದರೆ, ಇಂದಿನ ಪಂದ್ಯದಲ್ಲೂ ಸಿಎಸ್ಕೆ ತನ್ನ ಚಾಂಪಿಯನ್ ಆಟವನ್ನು ಪ್ರದರ್ಶಿಸುವಲ್ಲಿ ವಿಫಲವಾಯಿತು. ಆರಂಭಿಕರಾದ ರಾಬಿನ್ ಉತ್ತಪ್ಪ 15 ಮತ್ತು ಋತುರಾಜ್ ಗಾಯಕ್ವಾಡ್ 16 ರನ್ಗಳಿಸಿ ಪವರ್ ಪ್ಲೇ ಮುಗಿಯುವುದರೊಳಗೆ ಪೆವಿಲಿಯನ್ಗೆ ಮರಳಿದರು.
ಆದರೆ, 3ನೇ ವಿಕೆಟ್ಗೆ ಅಂಬಾಟಿ ರಾಯುಡು ಮತ್ತು ಮೊಯೀನ್ ಅಲಿ 54 ರನ್ಗಳ ಜೊತೆಯಾಟ ನಡೆಸಿ ತಂಡವನ್ನು ಚೇತರಿಸಿಕೊಳ್ಳುವಂತೆ ಮಾಡಿದ್ರೂ, ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಈ ಜೋಡಿ ವಿಫಲವಾಯಿತು. ಜಡೇಜಾ 27 ಎಸೆತಗಳಲ್ಲಿ 27 ರನ್ಗಳಿಸಿ ವಿಕೆಟ್ ಒಪ್ಪಿಸಿದರೆ, ಅಲಿ 35 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 3 ಬೌಂಡರಿ ಸಹಿತ 48 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಜಡೇಜಾ ಕೊನೆಯಲ್ಲಿ ಒಂದೆರಡು ಅದ್ಭುತ ಬೌಂಡರಿಗಳ ಸಹಿತ 15 ಎಸೆತಗಳಲ್ಲಿ 23 ರನ್ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಸನ್ರೈಸರ್ಸ್ ಹೈದರಾಬಾದ್ ಪರ ವಾಷಿಂಗ್ಟನ್ ಸುಂದರ್ 21ಕ್ಕೆ 2, ಟಿ. ನಟರಾಜನ್ 30ಕ್ಕೆ2, ಐಡೆನ್ ಮಾರ್ಕ್ರಮ್ 8ಕ್ಕೆ1, ಭುವನೇಶ್ವರ್ ಕುಮಾರ್ 36ಕ್ಕೆ1, ಮತ್ತು ಮಾರ್ಕೊ ಜಾನ್ಸನ್ 30ಕ್ಕೆ 1 ವಿಕೆಟ್ ಪಡೆದು ಮಿಂಚಿದರು.
ಅಭಿಷೇಕ್ ಶರ್ಮಾ-ತ್ರಿಪಾಠಿ ಅಬ್ಬರ, ಸನ್ರೈಸರ್ಸ್ಗೆ ಮೊದಲ ಗೆಲುವು
ಸಿಎಸ್ಕೆ ನೀಡಿದ್ದ 155 ರನ್ಗಳ ಗುರಿಯನ್ನು ಬೆನ್ನಟ್ಟಿದ ಸನ್ರೈಸರ್ಸ್ ಹೈದರಾಬಾದ್ ತಂಡ 17.4 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿತು.
ಯುವ ಬ್ಯಾಟರ್ ಅಭಿಷೇಕ್ ಶರ್ಮಾ ಮತ್ತು ನಾಯಕ ಕೇನ್ ವಿಲಿಯಮ್ಸನ್ ಮೊದಲ ವಿಕೆಟ್ಗೆ 89 ರನ್ಗಳ ಭರ್ಜರಿ ಆರಂಭ ನೀಡಿದರು. ವಿಲಿಯಮ್ಸನ್ ರನ್ಗಳಿಸಲು ಪರದಾಡಿದರೂ, ಆದರೆ ಜೊತೆಗಾರ ಅಭಿಷೇಕ್ ಸ್ಪೋಟಕ ಆಟ ನಾಯಕನ ವೈಫಲ್ಯವನ್ನು ಮರೆಮಾಚಿತು. ಕೇನ್ 40 ಎಸೆತಗಳಲ್ಲಿ 32 ರನ್ಗಳಿಸಿದರೆ, ಅಭಿಷೇಕ್ ಶರ್ಮಾ 50 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ಗಳ ಸಹಿತ 75 ರನ್ಗಳಿಸಿದರು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದು ಅಬ್ಬರಿಸಿದ ರಾಹುಲ್ ತ್ರಿಪಾಠಿ ಕೇವಲ 15 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ 39 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.
ಇದನ್ನೂ ಓದಿ:ಐಪಿಎಲ್ನಲ್ಲಿ ಯುವ ಆಟಗಾರರ ದರ್ಬಾರ್.. ಭೀತಿಯಿಲ್ಲದೆ ಬ್ಯಾಟ್ ಬೀಸುವ ಉದಯೋನ್ಮುಖ ಕ್ರಿಕೆಟಿಗರು..