ETV Bharat / sports

ಒತ್ತಡದಲ್ಲಿರುವ ಕೊಹ್ಲಿಯನ್ನು ಲೀಗ್​​ ಮಧ್ಯದಲ್ಲೇ ಆರ್​ಸಿಬಿ ನಾಯಕತ್ವದಿಂದ ಕೆಳಗಿಳಿಸುವ ಸಾಧ್ಯತೆ!

author img

By

Published : Sep 22, 2021, 4:04 PM IST

Updated : Sep 22, 2021, 4:19 PM IST

ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಅವರು ಆಡಿದ ರೀತಿ ನೋಡಿದರೆ, ಅವರು ತುಂಬಾ ದೊಡ್ಡ ಸಮಸ್ಯೆ ಅನುಭವಿಸುತ್ತಿದ್ದಾರೆ ಎನಿಸುತ್ತದೆ. ಹಾಗಾಗಿ, ಆವೃತ್ತಿಯ ಮಧ್ಯದಲ್ಲೇ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ಸಾಧ್ಯತೆಯಿದೆ. ಸೀಸನ್​ ಮಧ್ಯೆ ನಾಯಕತ್ವ ಬದಲಾವಣೆ ಹೊಸದೇನಲ್ಲ. ಈಗಾಗಲೇ ಕೆಕೆಆರ್​ ತಂಡ ದಿನೇಶ್​ ಕಾರ್ತಿಕ್ ಅವರನ್ನು ಕೆಳಗಿಳಿಸಿ ಮಾರ್ಗನ್‌ಗೆ, ಸನ್​ರೈಸರ್ಸ್ ಹೈದರಾಬಾದ್​ ಡೇವಿಡ್​ ವಾರ್ನರ್​ರನ್ನು ಕೆಳಗಿಳಿಸಿ ಕೇನ್ ವಿಲಿಯಮ್ಸನ್​ರನ್ನು ನಾಯಕನನ್ನಾಗಿ ನೇಮಿಸಿದ್ದವು..

virat kohli
ವಿರಾಟ್ ಕೊಹ್ಲಿ

ದುಬೈ : 2021ರ ಐಪಿಎಲ್​ ಮುಗಿಯುತ್ತಿದ್ದಂತೆ ಆರ್​ಸಿಬಿ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿರುವ ವಿರಾಟ್​ ಕೊಹ್ಲಿಯನ್ನು ಲೀಗ್​ ಮಧ್ಯದಲ್ಲೇ ನಾಯಕತ್ವದಿಂದ ಕೆಳಗಿಳಿಸುವ ಸಾಧ್ಯತೆ ಇದೆ ಎಂದು ಭಾರತದ ಮಾಜಿ ಕ್ರಿಕೆಟಿಗರೊಬ್ಬರು ಹೇಳಿದ್ದಾರೆ.

ಸೋಮವಾರ ನಡೆದ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧದ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಮತ್ತು ತಂಡ ಸಂಪೂರ್ಣವಾಗಿ ವೈಫಲ್ಯ ಅನುಭವಿಸಿ, ಹೀನಾಯ ಸೋಲು ಕಂಡಿತ್ತು. ಪುನಾರಂಭಗೊಂಡ ಐಪಿಎಲ್​ನಲ್ಲಿ ಕೇವಲ 92 ರನ್​ಗಳಿಗೆ ಆಲೌಟ್ ಆಗುವ ಮೂಲಕ ಕಳಪೆ ಪ್ರದರ್ಶನ ತೋರಿತ್ತು. ಅಲ್ಲದೆ ಇದು ಆರ್​​ಸಿಬಿಯ 6ನೇ ಕಡಿಮೆ ಮೊತ್ತವಾಗಿದೆ. ಇದರಲ್ಲಿ ಕೆಕೆಆರ್​ ವಿರುದ್ಧವೇ 3ನೇ ಅಲ್ಪ ಮೊತ್ತವಾಗಿತ್ತು. ಈ ಮೊತ್ತವನ್ನು ಕೆಕೆಆರ್​ ಕೇವಲ 1 ವಿಕೆಟ್ ಕಳೆದುಕೊಂಡು 10 ಓವರ್​ಗಳಲ್ಲಿ ಗುರಿ ತಲುಪಿತ್ತು.

ಇನ್ನು, ಕೊಹ್ಲಿ ಕೇವಲ 4 ಎಸೆತಗಳಲ್ಲಿ 5 ರನ್​ಗಳಿಸಿ ಪ್ರಸಿಧ್​ ಕೃಷ್ಣ ಅವರ ಬೌಲಿಂಗ್​ನಲ್ಲಿ ಎಲ್​ಬಿಡಬ್ಲ್ಯೂಗೆ ಬಲಿಯಾಗಿದ್ದರು. ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರ ಪ್ರಕಟಿಸುತ್ತಿದ್ದಂತೆ ಪಂದ್ಯದುದ್ದಕ್ಕೂ ವಿರಾಟ್​ ಕೊಹ್ಲಿ ಅವರ ದೇಹ ಭಾಷೆ ಹಿಂದಿನಂತೆ ಕಂಡು ಬರಲಿಲ್ಲ. ಈಗಾಗಲೇ ಮಾಜಿ ಕ್ರಿಕೆಟಿಗ ಗೌತಮ್​ ಗಂಭೀರ್​ ಕೂಡ ಕೊಹ್ಲಿ ಈ ಸಂದರ್ಭದಲ್ಲಿ ನಾಯಕತ್ವ ತ್ಯಜಿಸಿದ್ದು ಸರಿಯಲ್ಲ, ಇದರಿಂದ ತಂಡದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದರು. ಅದು ಮೊದಲ ಪಂದ್ಯದಲ್ಲೇ ನಿಜವಾಗಿತ್ತು.

ಇದೀಗ IANSಗೆ ನೀಡಿದ ಸಂದರ್ಶನವೊಂದರಲ್ಲಿ ಭಾರತದ ಮಾಜಿ ಕ್ರಿಕೆಟಿಗರೊಬ್ಬರು ಆರ್​ಸಿಬಿ ಟೂರ್ನಿಯ ಮಧ್ಯ ಭಾಗದಲ್ಲೇ ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸುವ ಸಾಧ್ಯತೆಯಿದೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಈ ಕುರಿತು ಈಗಾಗಲೇ ಫ್ರಾಂಚೈಸಿ ಚರ್ಚೆ ನಡೆಸಿದ್ದು, ಕೊಹ್ಲಿ ಸ್ಥಾನಕ್ಕೆ ಮತ್ತೋರ್ವ ನಾಯಕನನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಈ ನಿರ್ಧಾರಕ್ಕೆ ಕೊಹ್ಲಿ ಕೂಡ ಒಪ್ಪಿಗೆ ಸೂಚಿಸಲಿದ್ದಾರೆ ಎಂದು ಏಜೆನ್ಸಿಗೆ ತಿಳಿಸಿದ್ದಾರೆ.

ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಅವರು ಆಡಿದ ರೀತಿ ನೋಡಿದರೆ, ಅವರು ತುಂಬಾ ದೊಡ್ಡ ಸಮಸ್ಯೆ ಅನುಭವಿಸುತ್ತಿದ್ದಾರೆ ಎನಿಸುತ್ತದೆ. ಹಾಗಾಗಿ, ಆವೃತ್ತಿಯ ಮಧ್ಯದಲ್ಲೇ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ಸಾಧ್ಯತೆಯಿದೆ. ಸೀಸನ್​ ಮಧ್ಯೆ ನಾಯಕತ್ವ ಬದಲಾವಣೆ ಹೊಸದೇನಲ್ಲ. ಈಗಾಗಲೇ ಕೆಕೆಆರ್​ ತಂಡ ದಿನೇಶ್​ ಕಾರ್ತಿಕ್ ಅವರನ್ನು ಕೆಳಗಿಳಿಸಿ ಮಾರ್ಗನ್‌ಗೆ, ಸನ್​ರೈಸರ್ಸ್ ಹೈದರಾಬಾದ್​ ಡೇವಿಡ್​ ವಾರ್ನರ್​ರನ್ನು ಕೆಳಗಿಳಿಸಿ ಕೇನ್ ವಿಲಿಯಮ್ಸನ್​ರನ್ನು ನಾಯಕನನ್ನಾಗಿ ನೇಮಿಸಿದ್ದವು.

2018ರಲ್ಲಿ ಗೌತಮ್​ ಗಂಭೀರ್ ತಮ್ಮ ಕಳಪೆ ಫಾರ್ಮ್​ನಿಂದ ಬೇಸತ್ತು​ ಸ್ವತಃ ತಾವಾಗಿಯೇ ನಾಯಕತ್ವದಿಂದ ಕೆಳಗಿಳಿದು ಶ್ರೇಯಸ್​ ಅಯ್ಯರ್​ಗೆ ನಾಯಕತ್ವ ನೀಡಿದ್ದರು. ಜೊತೆಗೆ ತಮ್ಮ 2.8 ಕೋಟಿ ಹಣವನ್ನು ಫ್ರಾಂಚೈಸಿಯಿಂದ ತೆಗೆದುಕೊಳ್ಳುವುದಿಲ್ಲ ಎಂದು ಘೋಷಿಸಿಕೊಂಡಿದ್ದರು. ಆರ್​ಸಿಬಿ ಸೆಪ್ಟೆಂಬರ್ 24ರಂದು ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ದ ತನ್ನ 9ನೇ ಪಂದ್ಯವನ್ನಾಡಲಿದೆ. ಈ ಪಂದ್ಯದಲ್ಲಿ ಕೊಹ್ಲಿಯೇ ಮುಂದುವರಿಯಲಿದ್ದಾರೆ ಅಥವಾ ಮತ್ತೊಬ್ಬ ಆಟಗಾರನಿಗೆ ನಾಯಕತ್ವ ಬಿಟ್ಟುಕೊಟ್ಟು ಕೇವಲ ಬ್ಯಾಟ್ಸ್​ಮನ್​ ಆಗಿ ಆಡಲಿದ್ದಾರೆಯೇ ಎಂದು ಕಾದು ನೋಡಬೇಕಿದೆ.

ಇದನ್ನು ಓದಿ:ಈ ಸಾಲಿನ ಐಪಿಎಲ್‌ ಬಳಿಕ ಆರ್‌ಸಿಬಿ ನಾಯಕ ಸ್ಥಾನದಿಂದಲೂ ಕೆಳಗಿಳಿಯಲಿರುವ ಕೊಹ್ಲಿ

Last Updated : Sep 22, 2021, 4:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.