ETV Bharat / sports

ಒತ್ತಡ ನಿಭಾಯಿಸುವ ಸಕಾರಿಯಾ ಕೌಶಲ್ಯ ನನ್ನನ್ನು ಹೆಚ್ಚು ಆಕರ್ಷಿಸಿದೆ: ಸಂಗಕ್ಕಾರ ಮೆಚ್ಚುಗೆ - ಚೇತನ್ ಸಕಾರಿಯಾ

ಮೇ 4 ರಂದು 2021ರ ಐಪಿಎಲ್ ಕೋವಿಡ್​ 19 ಕಾರಣದಿಂದ ರದ್ದಾಗಿದೆ. ಈ ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್​ 7 ಪಂದ್ಯಗಳಲ್ಲಿ 6 ಅಂಕ ಸಂಪಾದಿಸಿ 5ನೇ ಸ್ಥಾನ ಪಡೆದುಕೊಂಡಿತ್ತು. ರಾಯಲ್ಸ್ ಪರ 7 ಪಂದ್ಯಗಳನ್ನಾಡಿದ್ದ ಚೇತನ್ ಸಕಾರಿಯಾ 7 ವಿಕೆಟ್ ಪಡೆದಿದ್ದರು. ಅಲ್ಲದೇ ಡೆತ್​ ಬೌಲಿಂಗ್​ನಲ್ಲಿ ಆತನ ಕೌಶಲ್ಯ ಕ್ರಿಕೆಟ್ ಪಂಡಿತರನ್ನು ಮತ್ತು ಅಭಿಮಾನಿಗಳನ್ನು ಆಕರ್ಷಿಸಿತ್ತು.

ಚೇತನ್ ಸಕಾರಿಯಾ
ಚೇತನ್ ಸಕಾರಿಯಾ
author img

By

Published : May 13, 2021, 9:45 PM IST

ನವದೆಹಲಿ: 2021ರ ಐಪಿಎಲ್​ನಲ್ಲಿ ಅದ್ಭುತ ಬೌಲಿಂಗ್ ಮೂಲಕ ಗಮನ ಸೆಳೆದಿದ್ದ ಎಡಗೈ ವೇಗಿ ಚೇತನ್ ಸಕಾರಿಯಾ ಅವರನ್ನು ರಾಜಸ್ಥಾನ್​ ರಾಯಲ್ಸ್ ನಿರ್ದೇಶಕ ಕುಮಾರ್ ಸಂಗಕ್ಕಾರ ಮೆಚ್ಚುಗೆ ವ್ಯಕ್ತಪಡಿಸಿದ್ದು, ಒತ್ತಡ ನಿಭಾಯಿಸುವ ಆತನ ಕೌಶ್ಯಲ್ಯ ಮತ್ತು ಸಾಮರ್ಥ್ಯ ನನ್ನನ್ನು ಹೆಚ್ಚು ಆಕರ್ಷಿಸಿದೆ ಎಂದು ತಿಳಿಸಿದ್ದಾರೆ.

ಮೇ 4 ರಂದು 2021ರ ಐಪಿಎಲ್ ಕೋವಿಡ್​ 19 ಕಾರಣದಿಂದ ರದ್ದಾಗಿದೆ. ಈ ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್​ 7 ಪಂದ್ಯಗಳಲ್ಲಿ 6 ಅಂಕ ಸಂಪಾದಿಸಿ 5ನೇ ಸ್ಥಾನ ಪಡೆದುಕೊಂಡಿತ್ತು. ರಾಯಲ್ಸ್ ಪರ 7 ಪಂದ್ಯಗಳನ್ನಾಡಿದ್ದ ಚೇತನ್ ಸಕಾರಿಯಾ 7 ವಿಕೆಟ್ ಪಡೆದಿದ್ದರು. ಅಲ್ಲದೇ ಡೆತ್​ ಬೌಲಿಂಗ್​ನಲ್ಲಿ ಆತನ ಕೌಶಲ್ಯ ಕ್ರಿಕೆಟ್ ಪಂಡಿತರನ್ನು ಮತ್ತು ಅಭಿಮಾನಿಗಳನ್ನು ಆಕರ್ಷಿಸಿತ್ತು.

ಚೇತನ್​ ಈ ಆವೃತ್ತಿಯಲ್ಲಿ ಬಹಿರಂಗಗೊಂಡ ಒಂದು ಅದ್ಭುತ ಪ್ರತಿಭೆ. ಆತನ ವರ್ತನೆ, ಒತ್ತಡವನ್ನು ನಿಭಾಯಿಸುವ ಅವನ ಸಾಮರ್ಥ್ಯ ಮತ್ತು ಆತನ ಕೌಶಲ್ಯಗಳು ನನ್ನನ್ನು ಹೆಚ್ಚು ಆಕರ್ಷಿಸಿತು. ನಾವು ಅನುಜ್(ರಾವತ್​) ಮತ್ತು ಯಶ್​(ಜೈಸ್ವಾಲ್) ಅವರಂತಹ ಯುವ ಆಟಗಾರರನ್ನು ಹೊಂದಿದ್ದೇವೆ. ಇವರು ಫ್ರಾಂಚೈಸಿಯಲ್ಲಿ ತುಂಬಾ ದೀರ್ಘ ಸಮಯದವರೆಗೆ ಇರಲಿದ್ದಾರೆ. ಈ ಮೂವರು ನನ್ನನ್ನೂ ಟೂರ್ನಿ ಉದ್ದಕ್ಕೂ ಹೆಚ್ಚು ಆಕರ್ಷಿಸಿದರು ಎಂದು ಸಂಗಕ್ಕಾರ ರಾಯಲ್ಸ್ ಆಯೋಜಿಸಿದ್ದ ಸಂವಾದದಲ್ಲಿ ತಿಳಿಸಿದ್ದಾರೆ.

ಈ ಮೂವರು ನಿಜವಾಗಿಯೂ ಮೈದಾನದಲ್ಲಿ ಉತ್ತಮ ಅವಕಾಶ ಪಡೆದಿದ್ದಾರೆ. ದುರದೃಷ್ಟವಶಾತ್, ಅನೂಜ್​ ಒಂದು ಪಂದ್ಯದಲ್ಲಿ ಅವಕಾಶ ಪಡೆದರಾದರೂ ಅವರಿಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಗಲಿಲ್ಲ. ಆದರೆ, ಅವರು ಫೀಲ್ಡಿಂಗ್​ನಲ್ಲಿ ಅತ್ಯುತ್ತಮವಾದ ಶಕ್ತಿಯನ್ನು ತೋರಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ:ರಿಷಭ್ ಪಂತ್​ ಭವಿಷ್ಯದಲ್ಲಿ ಭಾರತದ ನಾಯಕನಾಗಲಿದ್ದಾರೆ: ಸುನೀಲ್ ಗವಾಸ್ಕರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.