ದುಬೈ: ನಿಗದಿತ ಓವರ್ಗಳ ಕ್ರಿಕೆಟ್ನಲ್ಲಿ ಟೀಂ ಇಂಡಿಯಾದ ಖಾಯಂ ಸದಸ್ಯನಾಗಿದ್ದ ಯಜುವೇಂದ್ರ ಚಹಾಲ್ಗೆ ಈ ಸಲದ ಐಸಿಸಿ ಟಿ-20 ವಿಶ್ವಕಪ್ನಿಂದ ಹೊರಬಿದ್ದಿದ್ದಾರೆ. ಆದರೆ ವಿಶ್ವಕಪ್ ಆರಂಭಕ್ಕೂ ಮುನ್ನ ಯುಎಇನಲ್ಲಿ ಆಯೋಜನೆಗೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ಪರ ಮಿಂಚು ಹರಿಸುವ ಪ್ಲಾನ್ ಹಾಕಿಕೊಂಡಿದ್ದಾರೆ.
14ನೇ ಆವೃತ್ತಿ ಐಪಿಎಲ್ನ ದ್ವಿತೀಯಾರ್ಧದ ಪಂದ್ಯಗಳಲ್ಲಿ ಭಾಗಿಯಾಗಲು ಈಗಾಗಲೇ ದುಬೈಗೆ ತೆರಳಿ ಅಭ್ಯಾಸದಲ್ಲಿ ಭಾಗಿಯಾಗಿರುವ ಚಹಲ್, ಉತ್ತಮ ಪ್ರದರ್ಶನ ನೀಡುವ ಇರಾದೆ ಹೊಂದಿದ್ದಾರೆ.
ಐಪಿಎಲ್ನ ಉಳಿದ ಪಂದ್ಯಗಳನ್ನಾಡಲು ನಾನು ಉತ್ಸುಕನಾಗಿದ್ದೇನೆ. ಅಂಕಪಟ್ಟಿಯಲ್ಲಿ ಈಗಾಗಲೇ ಮೂರನೇ ಸ್ಥಾನದಲ್ಲಿರುವ ನಾವು, ಇದೀಗ ಮತ್ತಷ್ಟು ಉತ್ತಮ ಪ್ರದರ್ಶನ ನೀಡಿದರೆ ಖಂಡಿತವಾಗಿ ಉತ್ತಮವಾದ ಫಲಿತಾಂಶ ಹೊರಬರಲಿದೆ ಎಂದಿದ್ದಾರೆ. ನೆಟ್ನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದಾಗ ನಮ್ಮಲ್ಲಿ ಮತ್ತಷ್ಟು ಉತ್ತಮ ಭಾವನೆ ಮೂಡುತ್ತದೆ. ಇದೀಗ 'old Yuzi is Back' ಎಂದು ತಿಳಿಸಿದ್ದಾರೆ.
ಕೋವಿಡ್ ಕಾರಣದಿಂದಾಗಿ 14ನೇ ಆವೃತ್ತಿ ಐಪಿಎಲ್ ಪಂದ್ಯಗಳು ಮುಂದೂಡಿಕೆಯಾಗಿದ್ದವು. ಇದೀಗ ಸೆಪ್ಟೆಂಬರ್ 19ರಿಂದ ದುಬೈನಲ್ಲಿ ಆರಂಭಗೊಳ್ಳಲಿದೆ. ಆರ್ಸಿಬಿ ಆಡಿರುವ 7 ಪಂದ್ಯಗಳ ಪೈಕಿ 5ರಲ್ಲಿ ಗೆಲುವು ದಾಖಲಿಸಿದ್ದು, 10 ಪಾಯಿಂಟ್ಗಳೊಂದಿಗೆ 3ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: 10 ಸಿಕ್ಸರ್, 7 ಬೌಂಡರಿ, 46 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ ಎಬಿಡಿ: ವಿಡಿಯೋ ನೋಡಿ..
ಸೆಪ್ಟೆಂಬರ್ 20ರಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಸೆಣಸಾಟ ನಡೆಸಲಿರುವ ಆರ್ಸಿಬಿ, ಸೆ. 24ರಂದು ಚೆನ್ನೈ ವಿರುದ್ಧ ಮತ್ತೊಂದು ಪಂದ್ಯದಲ್ಲಿ ಭಾಗಿಯಾಗಲಿದೆ. ಅರಬ್ ನಾಡಿನಲ್ಲಿ ಒಟ್ಟು 31 ಪಂದ್ಯಗಳು ಆಯೋಜನೆಗೊಂಡಿವೆ. ಐಪಿಎಲ್ ಮುಕ್ತಾಯವಾಗುತ್ತಿದ್ದಂತೆ ಐಸಿಸಿ ಟಿ-20 ವಿಶ್ವಕಪ್ ಕೂಡ ಇಲ್ಲೇ ನಡೆಯಲಿದೆ.