ಜೈಪುರ್ : ನ್ಯೂಜಿಲ್ಯಾಂಡ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಗ್ಲೇನ್ ಫಿಲಿಫ್ಸ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಇಂಗ್ಲೆಂಡ್ ಸ್ಟಾರ್ ಜೋಸ್ ಬಟ್ಲರ್ ಬದಲಿ ಆಟಗಾರನಾಗಿ ಸೇರಿಕೊಂಡಿದ್ದಾರೆ.
ಜೋಸ್ ಬಟ್ಲರ್ ಅವರ ಪತ್ನಿ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದರಿಂದ ಐಪಿಎಲ್ನಿಂದ ಹೊರಗುಳಿಯುವುದಾಗಿ ಘೋಷಿಸಿದ್ದಾರೆ. ಜೊತೆಗೆ ಇಂಗ್ಲೆಂಡ್ ತಂಡ ಮತ್ತಿಬ್ಬರು ಸ್ಟಾರ್ಗಳಾದ ಬೆನ್ ಸ್ಟೋಕ್ಸ್ ಕ್ರಿಕೆಟ್ನಿಂದ ಅನಿರ್ದಿಷ್ಟಾವಧಿಗೆ ವಿಶ್ರಾಂತಿ ಪಡೆದಿದ್ದರೆ, ಆರ್ಚರ್ ಗಾಯದಿಂದ ಹೊರ ಬಿದ್ದಿದ್ದಾರೆ.
ಮುಂದಿನ ವಾರದಿಂದ ಆರಂಭವಾಗಲಿರುವ ಸಿಪಿಎಲ್ನಲ್ಲಿ ಬಾರ್ಬಡೋಸ್ ರಾಯಲ್ಸ್ ತಂಡದಲ್ಲಿ ಆಡುತ್ತಿರುವ ಫಿಲಿಫ್ಸ್ರನ್ನು ಬದಲಿ ಆಟಗಾರನಾಗಿ ಐಪಿಎಲ್ಗೂ ಆಯ್ಕೆ ಮಾಡಿರುವುದಾಗಿ ರಾಜಸ್ಥಾನ್ ರಾಯಲ್ಸ್ ಖಚಿತಪಡಿಸಿದೆ.
-
Here we go confirmed! 🤪
— Rajasthan Royals (@rajasthanroyals) August 21, 2021 " class="align-text-top noRightClick twitterSection" data="
See you soon in Pink, Glenn. 💗#HallaBol | #RoyalsFamily | #IPL2021 pic.twitter.com/ZBlV161oJf
">Here we go confirmed! 🤪
— Rajasthan Royals (@rajasthanroyals) August 21, 2021
See you soon in Pink, Glenn. 💗#HallaBol | #RoyalsFamily | #IPL2021 pic.twitter.com/ZBlV161oJfHere we go confirmed! 🤪
— Rajasthan Royals (@rajasthanroyals) August 21, 2021
See you soon in Pink, Glenn. 💗#HallaBol | #RoyalsFamily | #IPL2021 pic.twitter.com/ZBlV161oJf
ಫಿಲಿಫ್ಸ್ ನ್ಯೂಜಿಲ್ಯಾಂಡ್ ಪರ 25 ಟಿ20 ಪಂದ್ಯಗಳನ್ನಾಡಿದ್ದ 149ರ ಸ್ಟ್ರೈಕ್ರೇಟ್ನಲ್ಲಿ 506 ರನ್ ಗಳಿಸಿದ್ದಾರೆ. ಬಹುತೇಕ ಕೆಳ ಕ್ರಮಾಂಕದಲ್ಲಿ ಆಡಿರುವ ಅವರು ಕಳೆದ ನವೆಂಬರ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಕೇವಲ 46 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಫಿಲಿಫ್ಸ್ ಕೆರಿಬಿಯನ್ ಪ್ರೀಮಿಯರ್ ಲೀಗ್, ವೆಟಾಲಿಟಿ ಬ್ಲಾಸ್ಟ್, ದಿ ಹಂಡ್ರೆಡ್ ಲೀಗ್ನಲ್ಲೂ ಆಡಿದ್ದಾರೆ.
2021ರ ಐಪಿಎಲ್ನಲ್ಲಿ ಆಡಿರುವ 7 ಪಂದ್ಯಗಳಲ್ಲಿ 3 ಗೆಲುವು, 4 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ರಾಯಲ್ಸ್ಗೆ ಬಟ್ಲರ್ ಅನುಪಸ್ಥಿತಿ ಖಂಡಿತ ಕಾಡಲಿದೆ. ಅವರು 14ನೇ ಆವೃತ್ತಿಯಲ್ಲಿ 7 ಇನ್ನಿಂಗ್ಸ್ಗಳಲ್ಲಿ ಒಂದು ಶತಕ ಸೇರಿದಂತೆ 254 ರನ್ಗಳಿಸಿದ್ದರು.
ಇದನ್ನು ಓದಿ:ಆರ್ಸಿಬಿಗೆ ಆನೆಬಲ.. ಹಸರಂಗ ಸೇರಿದಂತೆ ಬೆಂಗಳೂರು ತಂಡಕ್ಕೆ ಮೂವರ ಸೇರ್ಪಡೆ..