ದುಬೈ : ಲಂಡನ್ನಿಂದ ನೇರವಾಗಿ ದುಬೈಗೆ ಆಗಮಿಸಿ ಕ್ವಾರಂಟೈನ್ಗೊಳಗಾಗಿದ್ದ ವಿವಿಧ ತಂಡದ ಪ್ಲೇಯರ್ಸ್ ಇದೀಗ ಮೈದಾನಕ್ಕಿಳಿದು ಅಭ್ಯಾಸ ಆರಂಭಿಸಿದರು. ಮೊದಲ ಪಂದ್ಯಗಳಲ್ಲೇ ತಂಡದ ಪರ ಕಣಕ್ಕಿಳಿಯುವ ಸಾಧ್ಯತೆ ಇದೆ.
ಇಂಗ್ಲೆಂಡ್ ವಿರುದ್ಧ ಟೆಸ್ಟ್ನಲ್ಲಿ ಭಾಗಿಯಾಗಲು ಇಂಗ್ಲೆಂಡ್ ಪ್ರಯಾಣ ಕೈಗೊಂಡಿದ್ದ ರಿಷಭ್ ಪಂತ್, ಆರ್ ಅಶ್ವಿನ್, ಅಜಿಂಕ್ಯಾ ರಹಾನೆ, ಇಶಾಂತ್ ಶರ್ಮಾ, ಅಕ್ಸರ್ ಪಟೇಲ್, ಪೃಥ್ವಿ ಶಾ ಹಾಗೂ ಉಮೇಶ್ ಯಾದವ್ ಇದೀಗ ಮೈದಾನಕ್ಕಿಳಿದು ಅಭ್ಯಾಸ ಆರಂಭಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ ತಂಡದಲ್ಲಿರುವ ಕ್ಯಾಪ್ಟನ್ ರಿಷಭ್ ಪಂತ್, ಸ್ಪಿನ್ನರ್ ಆರ್.ಅಶ್ವಿನ್, ಪೃಥ್ವಿ ಶಾ ಹಾಗೂ ರಹಾನೆ ಕ್ವಾರಂಟೈನ್ ಮುಗಿಸಿದ್ದು, ಇಂದಿನಿಂದ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ.
-
About last night 💙
— Delhi Capitals (@DelhiCapitals) September 18, 2021 " class="align-text-top noRightClick twitterSection" data="
A lot of familiar faces are back in the DC Camp 🤩#YehHaiNayiDilli #IPL2021 [2/2] pic.twitter.com/BPHnxg50cg
">About last night 💙
— Delhi Capitals (@DelhiCapitals) September 18, 2021
A lot of familiar faces are back in the DC Camp 🤩#YehHaiNayiDilli #IPL2021 [2/2] pic.twitter.com/BPHnxg50cgAbout last night 💙
— Delhi Capitals (@DelhiCapitals) September 18, 2021
A lot of familiar faces are back in the DC Camp 🤩#YehHaiNayiDilli #IPL2021 [2/2] pic.twitter.com/BPHnxg50cg
ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಸೆಪ್ಟೆಂಬರ್ 22ರಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಸೆಣಸಾಟ ನಡೆಸಲಿದೆ.
ಟೀಂ ಇಂಡಿಯಾದಲ್ಲಿ ಆಯೋಜನೆಗೊಂಡಿದ್ದ 14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ಕೋವಿಡ್ ಪ್ರಕರಣ ಕಾಣಿಸಿದ್ದ ಕಾರಣ ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಹೀಗಾಗಿ, ಉಳಿದ 31 ಪಂದ್ಯಗಳನ್ನ ದುಬೈನಲ್ಲಿ ನಡೆಸಲಾಗುತ್ತಿದೆ. ಸೆಪ್ಟೆಂಬರ್ 19ರಿಂದ ಪಂದ್ಯ ಆರಂಭಗೊಳ್ಳಲಿವೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್-ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆ ಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್ ಸೇರಿ ಅನೇಕರು ಈಗಾಗಲೇ ದುಬೈಗೆ ಆಗಮಿಸಿ ಅಭ್ಯಾಸದಲ್ಲಿ ಭಾಗಿಯಾಗಿದ್ದಾರೆ.