ಮುಂಬೈ: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಐಪಿಎಲ್ನಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದ್ದು, ಈ ರೆಕಾರ್ಡ್ ಬರೆದಿರುವ ಮೊದಲ ಪ್ಲೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
-
An association that has only gotten stronger. 👏🏾
— IndianPremierLeague (@IPL) April 16, 2021 " class="align-text-top noRightClick twitterSection" data="
Congratulations to @msdhoni, who is playing his 2️⃣0️⃣0️⃣th T20 game for @ChennaiIPL today. https://t.co/P8VzT4XXbb #PBKSvCSK #VIVOIPL pic.twitter.com/SltzFwY3s3
">An association that has only gotten stronger. 👏🏾
— IndianPremierLeague (@IPL) April 16, 2021
Congratulations to @msdhoni, who is playing his 2️⃣0️⃣0️⃣th T20 game for @ChennaiIPL today. https://t.co/P8VzT4XXbb #PBKSvCSK #VIVOIPL pic.twitter.com/SltzFwY3s3An association that has only gotten stronger. 👏🏾
— IndianPremierLeague (@IPL) April 16, 2021
Congratulations to @msdhoni, who is playing his 2️⃣0️⃣0️⃣th T20 game for @ChennaiIPL today. https://t.co/P8VzT4XXbb #PBKSvCSK #VIVOIPL pic.twitter.com/SltzFwY3s3
ಐಪಿಎಲ್ನ ಒಂದೇ ಫ್ರಾಂಚೈಸಿಯಲ್ಲಿ 200 ಪಂದ್ಯಗಳನ್ನಾಡಿರುವ ದಾಖಲೆ ಬರೆದಿರುವ ಧೋನಿ, 176 ಪಂದ್ಯಗಳನ್ನ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಹಾಗೂ ಉಳಿದ 26 ಪಂದ್ಯಗಳನ್ನ ಚಾಂಪಿಯನ್ ಲೀಗ್ ಟಿ-20ಯಲ್ಲಿ ಆಡಿದ್ದಾರೆ. ವಿಶೇಷ ಎಂದರೆ ಧೋನಿಗೆ ಇಂದಿನ ಪಂದ್ಯ ಕ್ಯಾಪ್ಟನ್ ಆಗಿ 199ನೇ ಪಂದ್ಯ ಆಗಿದೆ.
ಇದಾದ ಬಳಿಕ ಸುರೇಶ್ ರೈನಾ 190 ಪಂದ್ಯಗಳೊಂದಿಗೆ ನಂತರದ ಸ್ಥಾನದಲ್ಲಿದ್ದು, ಆಲ್ರೌಂಡರ್ ರವೀಂದ್ರ ಜಡೇಜಾ 132 ಪಂದ್ಯಗಳಲ್ಲಿ ಒಂದೇ ಫ್ರಾಂಚೈಸಿ ಪರ ಆಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಧೋನಿ 206 ಪಂದ್ಯಗಳನ್ನಾಡಿದ್ದು, 30 ಪಂದ್ಯಗಳನ್ನ ರೈಸಿಂಗ್ ಪುಣೆ ಸೂಪರ್ಜೈಂಟ್ಸ್ ಪರ(2016-2017) ಆಡಿದ್ದಾರೆ.
14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ವಾಖೆಂಡೆ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಧೋನಿ ಬಳಿಕ ಬೌಲಿಂಗ್ ಆಯ್ದುಕೊಂಡಿದೆ.