ಚೆನ್ನೈ: ಸತತ 2 ಪಂದ್ಯಗಳ ಸೋಲಿನಿಂದ ತತ್ತರಿಸಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಚೆನ್ನೈ ವಿರುದ್ಧ ಟಾಸ್ ಗೆದ್ದು ಚೇಸಿಂಗ್ ಮಾಡಲು ನಿರ್ಧರಿಸಿದ್ದಾರೆ. ವಾಂಖೆಡೆ ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿರುವುದರಿಂದ ಇಯಾನ್ ಮಾರ್ಗನ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್ ಮತ್ತು ಆರ್ಸಿಬಿ ವಿರುದ್ಧ ಸೋಲು ಕಂಡಿರುವ ಕೆಕೆಆರ್ ಇಂದಿನ ಪಂದ್ಯದಲ್ಲಿ ಗೆಲುವಿನ ಹಳಿಗೆ ಮರಳುವ ನಿರೀಕ್ಷೆಯಲ್ಲಿದ್ದು, ಕೆಲವು ಬದಲಾವಣೆ ಮಾಡಿಕೊಂಡಿದೆ. ಆಲ್ರೌಂಡರ್ ಶಕಿಬ್ ಅಲ್ ಹಸನ್ ಮತ್ತು ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಬದಲಿಗೆ ಸುನೀಲ್ ನರೈನ್ ಮತ್ತು ಕಮಲೇಶ್ ನಾಗರಕೋಟಿಗೆ ಅವಕಾಶ ನೀಡಿದೆ.
-
#KKR have won the toss and they will bowl first against #CSK.
— IndianPremierLeague (@IPL) April 21, 2021 " class="align-text-top noRightClick twitterSection" data="
Follow the game here - https://t.co/37BCFLnlqR #KKRvCSK #VIVOIPL pic.twitter.com/OUtk4wYV4x
">#KKR have won the toss and they will bowl first against #CSK.
— IndianPremierLeague (@IPL) April 21, 2021
Follow the game here - https://t.co/37BCFLnlqR #KKRvCSK #VIVOIPL pic.twitter.com/OUtk4wYV4x#KKR have won the toss and they will bowl first against #CSK.
— IndianPremierLeague (@IPL) April 21, 2021
Follow the game here - https://t.co/37BCFLnlqR #KKRvCSK #VIVOIPL pic.twitter.com/OUtk4wYV4x
ಸತತ ಎರಡು ಗೆಲುವಿನ ಆತ್ಮವಿಶ್ವಾಸದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಹಿರಿಯ ಆಲ್ರೌಂಡರ್ ಡ್ವೇನ್ ಬ್ರಾವೋಗೆ ವಿಶ್ರಾಂತಿ ನೀಡಿ ದ. ಆಫ್ರಿಕಾದ ಸ್ಟಾರ್ ಲುಂಗಿ ಎಂಗಿಡಿಗೆ ಅವಕಾಶ ನೀಡಿದೆ.
ಕೋಲ್ಕತ್ತಾ ನೈಟ್ ರೈಡರ್ಸ್: ನಿತೀಶ್ ರಾಣಾ, ಶುಬ್ಮನ್ ಗಿಲ್, ರಾಹುಲ್ ತ್ರಿಪಾಠಿ, ಇಯಾನ್ ಮೋರ್ಗಾನ್ (ನಾಯಕ), ಸುನಿಲ್ ನರೈನ್, ದಿನೇಶ್ ಕಾರ್ತಿಕ್ (ವಿಕೀ), ಆಂಡ್ರೆ ರಸೆಲ್, ಪ್ಯಾಟ್ ಕಮ್ಮಿನ್ಸ್, ಕಮಲೇಶ್ ನಾಗರಕೋಟಿ, ಪ್ರಸಿಧ್ ಕೃಷ್ಣ, ವರುಣ್ ಚಕ್ರವರ್ತಿ
ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಎಂ.ಎಸ್. ಧೋನಿ, ಸ್ಯಾಮ್ ಕರ್ರನ್, ಶಾರ್ದುಲ್ ಠಾಕೂರ್, ಲುಂಗಿ ಎಂಗಿಡಿ, ದೀಪಕ್ ಚಹರ್