ETV Bharat / sports

ಸೋತು ಹತಾಶವಾಗಿರುವ ಕೆಕೆಆರ್​ ವಿರುದ್ಧ ಗೆಲುವಿನ ಉತ್ಸಾಹದಲ್ಲಿ ಆರ್​ಸಿಬಿ - ಆರ್‌ಸಿಬಿ ಸ್ಕ್ವಾಡ್ ಟುಡೇ

ಆರ್​ಸಿಬಿ ಬಹುಶಃ ಸೋಮವಾರದ ಪಂದ್ಯದಲ್ಲಿ ರಜತ್ ಪಾಟಿದಾರ್ ಬದಲಿಗೆ, ಕೇರಳದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಮೊಹಮ್ಮದ್ ಅಜರುದ್ದೀನ್​​ಗೆ ಅವಕಾಶ ನೀಡುವ ಸಾಧ್ಯತೆಯಿದೆ..

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತಾ ನೈಟ್ ರೈಡರ್ಸ್

author img

By

Published : May 2, 2021, 10:52 PM IST

ಅಹ್ಮದಾಬಾದ್ ​: 14ನೇ ಆವೃತ್ತಿಯಲ್ಲಿ 7 ಪಂದ್ಯಗಳಲ್ಲಿ 2 ಗೆಲುವು ಹಾಗೂ 5 ಸೋಲು ಕಂಡು ಹತಾಶವಾಗಿರುವ ಕೋಲ್ಕತಾ ನೈಟ್​ ರೈಡರ್ಸ್​ ವಿರುದ್ಧ 5 ಗೆಲುವು 2 ಸೋಲುಗಳೊಂದಿಗೆ 3ನೇ ಸ್ಥಾನದಲ್ಲಿರುವ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗುತ್ತಿವೆ.

ಈಗಾಗಲೇ ಎರಡು ತಂಡಗಳು ಲೀಗ್​ನಲ್ಲಿ ಒಮ್ಮೆ ಮುಖಾಮುಖಿಯಾಗಿದ್ದು, ಚೆನ್ನೈ ಎಂಎ ಚಿದಂಬರಂ ಸ್ಟೇಡಿಯಂನಲ್ಲೇ ಮ್ಯಾಕ್ಸ್​ವೆಲ್ ಮತ್ತು ಎಬಿಡಿ ವಿಲಿಯರ್ಸ್​ ಅಬ್ಬರದ ನೆರವಿನಿಂದ 204 ರನ್​ಗಳಿಸಿದ್ದ ಆರ್​ಸಿಬಿ ಕೆಕೆಆರ್ ತಂಡವನ್ನು 166ಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು.

ಇದೀಗ ಹೆಚ್ಚುಕಡಿಮೆ ಅದೇ ರೀತಿಯ ಮೈದಾನದವಾದ ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮತ್ತೊಮ್ಮೆ ಎದುರಾಗುತ್ತಿವೆ. ಈ ಪಂದ್ಯ ಆರ್​ಸಿಬಿಗೆ ಪ್ಲೇ ಆಫ್ ಪ್ರವೇಶಿಸಲು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಪ್ರಮುಖವಾಗಿದ್ದರೆ, ಕೆಕೆಆರ್​ಗೆ ಗೆಲ್ಲದೇ ಹೋದರೆ ಪ್ಲೇ ಆಫ್​ ನಿಜಕ್ಕೂ ಮರೀಚಿಕೆಯಾಗಲಿದೆ.

ಆರ್​ಸಿಬಿ ಬಹುಶಃ ಸೋಮವಾರದ ಪಂದ್ಯದಲ್ಲಿ ರಜತ್ ಪಾಟಿದಾರ್ ಬದಲಿಗೆ, ಕೇರಳದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಮೊಹಮ್ಮದ್ ಅಜರುದ್ದೀನ್​​ಗೆ ಅವಕಾಶ ನೀಡುವ ಸಾಧ್ಯತೆಯಿದೆ.

ಇತ್ತ ಕೆಕೆಆರ್ ತಂಡದಲ್ಲಿ ವಿದೇಶಿ ಆಟಗಾರರು ಮತ್ತು ಆರಂಭಿಕರಿಂದ ಉತ್ತಮ ಪ್ರದರ್ಶನ ಮೂಡಿ ಬರುತ್ತಿಲ್ಲ. ಹಾಗಾಗಿ, ಆರ್​ಸಿಬಿ ವಿರುದ್ಧ ಪಂದ್ಯದಲ್ಲಿ ನರೈನ್​​ರನ್ನು ಆರಂಭಿಕ ಸ್ಥಾನದಲ್ಲಿ ಕಣಕ್ಕಿಳಿಸಬಹುದು ಅಥವಾ ಅವರ ಸ್ಥಾನದಲ್ಲಿ ಕೀವಿಸ್ ಆರಂಭಿಕ ಬ್ಯಾಟ್ಸ್​ಮನ್ ಸೀಫರ್ಟ್​ ಅಥವಾ ಆಲ್​ರೌಂಡರ್​ ಶಕಿಬ್ ಅಲ್​ ಹಸನ್​ರನ್ನು ಕರೆತಂದರೂ ಅಚ್ಚರಿಯಿಲ್ಲ .

ಮುಖಾಮುಖಿ : ಎರಡು ತಂಡಗಳು ಒಟ್ಟು 27 ಬಾರಿ ಮುಖಾಮುಖಿಯಾಗಿದ್ದು, ಕೆಕೆಆರ್​ 14 ಬಾರಿ ಮತ್ತು ಆರ್​ಸಿಬಿ 13 ಬಾರಿ ಗೆಲುವು ಸಾಧಿಸಿದೆ.

ಸಂಭವನೀಯ ಕೆಕೆಆರ್​ ತಂಡ : ನಿತೀಶ್ ರಾಣಾ ಶುಬ್ಮನ್ ಗಿಲ್, ರಾಹುಲ್ ತ್ರಿಪಾಠಿ, ಇಯಾನ್ ಮಾರ್ಗಾನ್, ದಿನೇಶ್ ಕಾರ್ತಿಕ್, ಆಂಡ್ರೆ ರಸ್ಸೆಲ್, ಪ್ಯಾಟ್ ಕಮ್ಮಿನ್ಸ್, ಸುನಿಲ್ ನರೈನ್ / ಶಕೀಬ್ ಅಲ್ ಹಸನ್, ಶಿವಂ ಮಾವಿ, ವರುಣ್ ಚಕ್ರವರ್ತಿ, ಪ್ರಸಿಧ್ ಕೃಷ್ಣ

ಸಂಭವನೀಯ ಆರ್​ಸಿಬಿ​ ತಂಡ : ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್/ಮೊಹಮ್ಮದ್ ಅಜರುದ್ದೀನ್, ಗ್ಲೆನ್ ಮ್ಯಾಕ್ಸ್ ವೆಲ್, ಎಬಿ ಡಿವಿಲಿಯರ್ಸ್, ಶಹ್ಬಾಜ್ ಅಹ್ಮದ್ / ವಾಷಿಂಗ್ಟನ್ ಸುಂದರ್, ಕೈಲ್ ಜೆಮೀಸನ್, ಡೇನಿಯಲ್ ಸ್ಯಾಮ್ಸ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್

ಇದನ್ನು ಓದಿ: ವಿರಾಟ್ 3ಕ್ಕೆ ಮರಳಲಿ, ದೇವದತ್ ಜೊತೆ ಈತ ಇನ್ನಿಂಗ್ಸ್ ಆರಂಭಿಸಿದ್ರೆ ಆರ್​ಸಿಬಿಗೆ ಉತ್ತಮ: ಸೆಹ್ವಾಗ್ ಸಲಹೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.