ETV Bharat / sports

ಡೆಲ್ಲಿ vs ರಾಜಸ್ಥಾನ್: ಯುವ ನಾಯಕರ ಕಾಳಗದಲ್ಲಿ ಗೆಲ್ಲುವವರ‍್ಯಾರು? - ರಾಜಸ್ಥಾನ್ ಸ್ಕ್ವಾಡ್

ಮೊದಲ ಪಂದ್ಯದಲ್ಲಿ ಪಂತ್ ಪಡೆ ಅನುಭವಿಗಳ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 189 ರನ್​ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿ ಜಯ ಸಾಧಿಸಿತು. ಅದ್ಭುತ ಫಾರ್ಮ್​ನಲ್ಲಿರುವ ಪೃಥ್ವಿ ಶಾ 72 ರನ್​ಗಳಿಸಿದರೆ, ಶಿಖರ್ ಧವನ್​ 85 ರನ್​ಗಳಿಸಿ ಗೆಲುವಿನ ರೂವಾರಿಗಳಾಗಿದ್ದರು.

ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್​

author img

By

Published : Apr 15, 2021, 3:32 PM IST

ಮುಂಬೈ: ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸಂಜು ಸಾಮ್ಸನ್​ ನಾಯಕತ್ವದ ರಾಜಸ್ಥಾನ್​ ರಾಯಲ್ಸ್​ ನಡುವೆ ವಾಂಖೆಡೆಯಲ್ಲಿ 7ನೇ ಪಂದ್ಯ ನಡೆಯಲಿದೆ. ಎರಡು ತಂಡಗಳಿಗೂ ವಿಕೆಟ್ ಕೀಪರ್​ಗಳೇ ನಾಯಕರಾಗಿದ್ದು, ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಕಾದು ನೋಡಬೇಕಿದೆ.

ಮೊದಲ ಪಂದ್ಯದಲ್ಲಿ ಪಂತ್ ಪಡೆ ಅನುಭವಿಗಳ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 189 ರನ್​ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿ ಜಯ ಸಾಧಿಸಿತು. ಅದ್ಭುತ ಫಾರ್ಮ್​ನಲ್ಲಿರುವ ಪೃಥ್ವಿ ಶಾ 72 ರನ್​ಗಳಿಸಿದರೆ, ಶಿಖರ್ ಧವನ್​ 85 ರನ್​ಗಳಿಸಿ ಗೆಲುವಿನ ರೂವಾರಿಗಳಾಗಿದ್ದರು.

ಇದೀಗ ತಂಡಕ್ಕೆ ಕಳೆದ ಬಾರಿಯ ಪರ್ಪಲ್ ಕ್ಯಾಪ್ ವಿಜೇತ ಕಗಿಸೋ ರಬಾಡ ತಂಡ ಸೇರಿಕೊಂಡಿದ್ದು, ತಂಡದ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಿದೆ. ಟಾಮ್​ ಕರ್ರನ್ ಜಾಗದಲ್ಲಿ ರಬಾಡ ಕಣಕ್ಕಿಳಿಯಲಿದ್ದಾರೆ. ಉಳಿದಂತೆ ಡೆಲ್ಲಿ ತಂಡ ಮೊದಲ ಪಂದ್ಯದಲ್ಲಿ ಆಡಿದ ತಂಡವನ್ನೇ ಕಣಕ್ಕಿಳಿಸಲಿದೆ.

ಇನ್ನು ಮೊದಲ ಪಂದ್ಯದಲ್ಲಿ 222ರನ್​ಗಳ ಗುರಿ ಬೆನ್ನಟ್ಟಿ ಪಂಜಾಬ್ ವಿರುದ್ಧ ಕೇವಲ 4 ರನ್​ಗಳಿಂದ ಸೋಲು ಕಂಡಿರುವ ರಾಜಸ್ಥಾನ ರಾಯಲ್ಸ್​ ಡೆಲ್ಲಿ ವಿರುದ್ಧ ಕಮ್​ಬ್ಯಾಕ್ ಮಾಡುವ ತವಕದಲ್ಲಿದೆ. ಆದರೆ, ಆಲ್​ರೌಂಡರ್​ ಬೆನ್​ಸ್ಟೋಕ್ಸ್​ ಗಾಯದಿಂದ ಟೂರ್ನಿಯಿಂದ ಹೊರಬಿದ್ದಿರುವುದರಿಂದ ಡೇವಿಡ್ ಮಿಲ್ಲರ್ ಅಥವಾ ಇಂಗ್ಲೆಂಡ್ ಆಲ್​ರೌಂಡರ್​ ಲಿಯಾಮ್ ಲಿವಿಂಗ್​ಸ್ಟೋನ್ ಕಣಕ್ಕಿಳಿಯಲಿದ್ದಾರೆ.

ಮುಖಾಮುಖಿ

ಐಪಿಎಲ್ ಇತಿಹಾಸದಲ್ಲಿ 22 ಬಾರಿ ಎರಡು ತಂಡಗಳು ಮುಖಾಮುಖಿಯಾಗಿದ್ದು, ಎರಡು ತಂಡಗಳು ತಲಾ 11 ಪಂದ್ಯಗಳಲ್ಲಿ ಗೆಲುವು ದಾಖಲಿಸಿವೆ. ಆದರೆ, 2019ರಿಂದ ಡೆಲ್ಲಿ ತಂಡ ರಾಯಲ್ಸ್​ ವಿರುದ್ಧ ಆಡಿರುವ 4 ಪಂದ್ಯಗಳಲ್ಲೂ ಜಯ ಸಾಧಿಸಿದೆ.

ರಾಜಸ್ಥಾನ್​ ಸಂಭವನೀಯ ತಂಡ: ಜೋಸ್ ಬಟ್ಲರ್, ಮನನ್ ವೊಹ್ರಾ, ಸಂಜು ಸ್ಯಾಮ್ಸನ್ (ನಾಯಕ, ವಿಕೀ), ಡೇವಿಡ್ ಮಿಲ್ಲರ್, ರಿಯಾನ್ ಪರಾಗ್, ರಾಹುಲ್ ತೇವಟಿಯಾ, ಶಿವಮ್ ದುಬೆ, ಶ್ರೇಯಾಸ್ ಗೋಪಾಲ್, ಕ್ರಿಸ್ ಮೋರಿಸ್, ಮುಸ್ತಫಿಜುರ್ ರೆಹಮಾನ್, ಚೇತನ್ ಸಕಾರಿಯಾ

ಡೆಲ್ಲಿ ಸಂಭವನೀಯ ತಂಡ: ಶಿಖರ್ ಧವನ್, ಪೃಥ್ವಿ ಶಾ, ಅಜಿಂಕ್ಯ ರಹಾನೆ, ರಿಷಭ್ ಪಂತ್ (ನಾಯಕ &ವಿಕೀ), ಮಾರ್ಕಸ್ ಸ್ಟೋಯ್ನಿಸ್, ಶಿಮ್ರಾನ್ ಹೆಟ್ಮೇಯರ್, ಕ್ರಿಸ್ ವೋಕ್ಸ್, ರವಿಚಂದ್ರನ್ ಅಶ್ವಿನ್, ಟಾಮ್ ಕುರ್ರನ್, ಅಮಿತ್ ಮಿಶ್ರಾ, ಅವೇಶ್ ಖಾನ್

ಇದನ್ನು ಓದಿ: ವಿರಾಟ್ ಕೊಹ್ಲಿ ಪ್ರತಾಪಕ್ಕೆ ಡಗ್​ಔಟ್‌​ ಚೇರು ಚೆಲ್ಲಾಪಿಲ್ಲಿ: ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.