ETV Bharat / sports

ತಂಡದ ಗೆಲುವಿನ ಸಂಪೂರ್ಣ ಶ್ರೇಯ ಕೋಚ್​ ಮೆಕಲಮ್​ಗೆ ಸಲ್ಲಬೇಕು : ಕೆಕೆಆರ್ ಕ್ಯಾಪ್ಟನ್​ ಮಾರ್ಗನ್​ - KKR skipper Morgan

ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ 3 ವಿಕೆಟ್​ಗಳಿಂದ ಗೆಲುವು ದಾಖಲು ಮಾಡಿರುವ ಕೋಲ್ಕತ್ತಾ ನೈಟ್​ ರೈಡರ್ಸ್ ಸದ್ಯ 10 ಪಾಯಿಂಟ್​ಗಳೊಂದಿಗೆ 4ನೇ ಸ್ಥಾನದಲ್ಲಿದೆ..

KKR
KKR
author img

By

Published : Sep 28, 2021, 8:33 PM IST

Updated : Sep 28, 2021, 8:44 PM IST

ಶಾರ್ಜಾ(ಯುಎಇ): ಇಂಡಿಯನ್​​ ಪ್ರೀಮಿಯರ್​ ಲೀಗ್​ನ ದ್ವೀತಿಯಾರ್ಧದ ಪಂದ್ಯಗಳಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಈಗಾಗಲೇ ಮೂರು ಪಂದ್ಯಗಳಲ್ಲಿ ಜಯದ ನಗೆ ಬೀರಿದೆ. ಈ ಗೆಲುವಿನ ಸಂಪೂರ್ಣ ಶ್ರೇಯ ತಂಡದ ಕೋಚ್​​ ಬ್ರೆಂಡಮ್​ ಮೆಕಲಮ್​ಗೆ ಸಲ್ಲಬೇಕು ಎಂದು ಕ್ಯಾಪ್ಟನ್​ ಇಯಾನ್​​ ಮಾರ್ಗನ್ ಹೇಳಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ 3 ವಿಕೆಟ್​ಗಳ ಗೆಲುವು ದಾಖಲು ಮಾಡಿರುವ ಕೋಲ್ಕತ್ತಾ ನೈಟ್​ ರೈಡರ್ಸ್ ಸದ್ಯ 10 ಪಾಯಿಂಟ್​ಗಳೊಂದಿಗೆ 4ನೇ ಸ್ಥಾನದಲ್ಲಿದೆ. ಜೊತೆಗೆ ಫ್ಲೇ-ಆಫ್​ ರೇಸ್​ ಜೀವಂತವಾಗಿರಿಸಿಕೊಂಡಿರುವ ಕೆಕೆಆರ್​, ಮುಂದಿನ ಮೂರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಇರಾದೆ ಇಟ್ಟುಕೊಂಡಿದೆ.

ಡೆಲ್ಲಿ ವಿರುದ್ಧದ ಪಂದ್ಯ ಮುಗಿದ ಬಳಿಕ ಮಾತನಾಡಿರುವ ಕ್ಯಾಪ್ಟನ್​​ ಮಾರ್ಗನ್​, ಮೂರು ದಿನಗಳ ಅಂತರದಲ್ಲಿ ಎರಡು ಪಂದ್ಯ ಆಡಿರುವುದು ನಿಜಕ್ಕೂ ಕಠಿಣ. ಟಾಸ್​ ಗೆದ್ದು ಕ್ಷೇತ್ರ ರಕ್ಷಣೆ ಮಾಡುವುದು ಇಂತಹ ಸ್ಥಿತಿಗಳಲ್ಲಿ ತುಂಬಾ ಕಠಿಣ.

ಆದರೆ, ಇಂದಿನ ಪಂದ್ಯಕ್ಕಾಗಿ ಕೆಲ ಯೋಜನೆ ಹಾಕಿಕೊಂಡಿದ್ದೆವು. ಎರಡು ತಂಡಗಳಿಂದ ಉತ್ತಮ ಕ್ರಿಕೆಟ್ ಮೂಡಿ ಬಂದಿದೆ. ಗೆಲುವಿನ ಸಂಪೂರ್ಣ ಶ್ರೇಯ ಕೋಚ್​ ಮೆಕಲಮ್​ಗೆ ಸಲ್ಲಬೇಕು ಎಂದಿದ್ದಾರೆ. ತಂಡದಲ್ಲಿ ಅವರು ನಿಜವಾಗಿ ಅದ್ಭುತ ಪ್ರೇರಣೆ ತುಂಬುತ್ತಾರೆ ಎಂದಿದ್ದಾರೆ.

ಸುನಿಲ್ ನರೈನ್​
ಸುನಿಲ್ ನರೈನ್​

ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಕಠಿಣ ಎಂದ ನರೈನ್​

ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸಲು ಕಣಕ್ಕಿಳಿಸಿದ್ದ ಸುನೀಲ್ ನರೈನ್​, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವುದು ಕಠಿಣ ಎಂದಿದ್ದಾರೆ. ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದು ಮಾತನಾಡಿರುವ ಅವರು, ಮೈದಾನದಲ್ಲಿ ಬಾಲ್​ ಸ್ಪಿನ್​ ಆಗುತ್ತಿತ್ತು.

ಹೀಗಾಗಿ, ಬ್ಯಾಟ್ ಮಾಡುವುದು ಕಠಿಣವಾಗುತ್ತಿತ್ತು ಎಂದಿದ್ದಾರೆ. ಇಂದಿನ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ ನರೈನ್​, 10 ಎಸೆತಗಳಲ್ಲಿ 2 ಸಿಕ್ಸರ್​, 1 ಬೌಂಡರಿ ಸೇರಿ 21ರನ್​ಗಳಿಕೆ ಮಾಡಿದರು.

ರಿಷಭ್ ಪಂತ್​
ರಿಷಭ್ ಪಂತ್​

ಸೋಲಿನಿಂದ ಪಾಠ ಕಲಿತು ಮುಂದೆ ಸಾಗುತ್ತೇವೆ : ಪಂತ್​

ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡಿರುವ ಡೆಲ್ಲಿ ಇದೀಗ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಪಂದ್ಯ ಮುಕ್ತಾಯದ ಬಳಿಕ ಮಾತನಾಡಿರುವ ಪಂತ್​, ಈ ಸೋಲಿನಿಂದ ಪಾಠ ಕಲಿತು, ಮುಂದೆ ಸಾಗುತ್ತೇವೆ. ಮೈದಾನದಲ್ಲಿ ನಮ್ಮ ತಂಡದಿಂದ ಆಗಿರುವ ತಪ್ಪು ಸರಿಪಡಿಸಿಕೊಳ್ಳುತ್ತೇವೆ ಎಂದಿದ್ದಾರೆ. ಇಂದಿನ ಪಂದ್ಯದಲ್ಲಿ ಸ್ಪಿನ್ನರ್ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದರು.

Last Updated : Sep 28, 2021, 8:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.