ದುಬೈ: ಐಪಿಎಲ್-2021ರ ನಾಲ್ಕನೇ ಪಂದ್ಯವಾದ ಇಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡವು 8 ವಿಕೆಟ್ಗಳ ಅಂತರದಲ್ಲಿ ಜಯಗಳಿಸಿದೆ. ಹೈದರಾಬಾದ್ ತಂಡ ನೀಡಿದ್ದ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಇನ್ನೂ 13 ಎಸೆತಗಳು ಬಾಕಿ ಇರುವಂತೆ ಜಯ ಗಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಸನ್ ರೈಸರ್ಸ್ 9 ವಿಕೆಟ್ ನಷ್ಟಕ್ಕೆ ಕೇವಲ 134 ರನ್ಗಳನ್ನು ಮಾತ್ರವೇ ಗಳಿಸಲು ಸಾಧ್ಯವಾಯಿತು. ಸನ್ರೈಸರ್ಸ್ನ ಯಾವ ಆಟಗಾರನೂ ಕೂಡಾ 30ರನ್ಗಳ ಗಡಿಯನ್ನು ದಾಟಲು ಸಾಧ್ಯವಾಗಿರಲಿಲ್ಲ. ಡೇವಿಡ್ ವಾರ್ನರ್ ಶೂನ್ಯಕ್ಕೆ ಔಟಾದರೆ, ವೃದ್ಧಿಮಾನ್ ಸಹಾ 18, ಮನೀಶ್ ಪಾಂಡೆ 17, ಕೇದಾರ್ ಜಾಧವ್ 3, ಅಬ್ದುಲ್ ಸಮದ್ 28, ಜಾಸನ್ ಹೋಲ್ಡರ್ 10, ರಶೀದ್ ಖಾನ್ 22, ಭುವನೇಶ್ವರ್ ಕುಮಾರ್ 5, ರನ್ ಗಳಿಸಿದ್ದರು.
ಕೇವಲ 135 ರನ್ಗಳ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ ಕೇವಲ ಎರಡು ವಿಕೆಟ್ ನಷ್ಟಕ್ಕೆ 139 ರನ್ ಗಳಿಸುವ ಮೂಲಕ ಪಂದ್ಯವನ್ನು ತನ್ನದಾಗಿಸಿಕೊಂಡಿದೆ. ಶಿಖರ್ ಧವನ್ 42, ಶ್ರೇಯಸ್ ಅಯ್ಯರ್ 47 (ಅಜೇಯ), ಪೃಥ್ವಿ ಶಾ 11 ರಿಷಬ್ ಪಂತ್ (ಅಜೇಯ) ರನ್ ಗಳಿಸಿ ಪಂದ್ಯದ ಗೆಲುವಿಗೆ ಕಾರಣರಾಗಿದ್ದಾರೆ.