ETV Bharat / sports

ಶಿಖರ್​ ಧವನ್​ ಉತ್ತಮ ಬ್ಯಾಟಿಂಗ್​... ಗೆಲುವಿನತ್ತ ಡೆಲ್ಲಿ ಕ್ಯಾಪಿಟಲ್ಸ್​​​ ದಾಪುಗಾಲು

ಆಲ್​ರೌಂಡರ್​ ಜೇಸನ್ ಹೋಲ್ಡರ್​ 10 ರನ್​ಗಳಿಸಿ ಅಕ್ಷರ್​ ಪಟೇಲ್​ಗೆ 2ನೇ ಬಲಿಯಾದರು. ಕೊನೆಯಲ್ಲಿ ಅದ್ಬುಲ್​ ಸಮದ್​ 28 ಮತ್ತು ರಶೀದ್ ಖಾನ್ 22 ರನ್​ಗಳಿಸಿ ತಂಡದ ಮೊತ್ತವನ್ನು 100 ಗಡಿ ದಾಟಿಸಿದರು. ಡೆಲ್ಲಿ ಪರ ಕಗಿಸೋ ರಬಡಾ 37ಕ್ಕೆ 3, ಎನ್ರಿಚ್ ನಾರ್ಟ್ಜ್​ 12ಕ್ಕೆ 2, ಅಕ್ಷರ್​ ಪಟೇಲ್ 21ಕ್ಕೆ 2 ವಿಕೆಟ್ ಪಡೆದು ಮಿಂಚಿದರು.

author img

By

Published : Sep 22, 2021, 9:37 PM IST

Updated : Sep 22, 2021, 10:53 PM IST

Delhi capitals restricted SRH to 134/9
ಡೆಲ್ಲಿ ಕ್ಯಾಪಿಟಲ್ಸ್ vs ಸನ್​ರೈಸರ್ಸ್​ ಹೈದರಾಬಾದ್

ದುಬೈ : ಸನ್​ರೈಸರ್ಸ್​ ಹೈದರಾಬಾದ್​ ನೀಡಿರುವ 135ರನ್​ಗಳ ಗುರಿ ಬೆನ್ನತ್ತಿರುವ ಡೆಲ್ಲಿ ಕ್ಯಾಪಿಟಲ್ಸ್​​ ಗೆಲುವಿನತ್ತ ದಾಪುಗಾಲು ಹಾಕಿದ್ದು, ತಂಡದ ಪರ ಆರಂಭಿಕ ಆಟಗಾರ ಶಿಖರ್ ಧವನ್​ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಪೃಥ್ವಿ ಶಾ ಜೊತೆ ಆರಂಭಿಕರಾಗಿ ಕಣಕ್ಕಿಳಿದ ಧವನ್​​ 37 ಎಸೆತಗಳಲ್ಲಿ 1 ಸಿಕ್ಸರ್​​​ 6 ಬೌಂಡರಿ ಸೇರಿದಂತೆ 42ರನ್​ಗಳಿಕೆ ಮಾಡಿದ್ದು, ಇವರಿಗೆ ಶ್ರೇಯಸ್ ಅಯ್ಯರ್ ಉತ್ತಮ ಸಾಥ್​ ನೀಡಿದರು.

ಮೊದಲ 10 ಓವರ್​ಗಳಲ್ಲಿ 1 ವಿಕೆಟ್​ನಷ್ಟಕ್ಕೆ 69ರನ್​ಗಳಿಸಿದ್ದ ಡೆಲ್ಲಿ ಕೊನೆಯ 10 ಓವರ್​ಗಳಲ್ಲಿ ಗೆಲುವಿನ ನಗೆ ಬೀರಲು 66ರನ್​ಗಳ ಅವಶ್ಯಕತೆ ಇತ್ತು.

ಸನ್​ರೈಸರ್ಸ್​ ಬ್ಯಾಟಿಂಗ್​

14ನೇ ಆವೃತ್ತಿಯಲ್ಲಿ ತನ್ನ ನೀರಸ ಪ್ರದರ್ಶನವನ್ನು ಮುಂದುವರಿಸಿದ ಸನ್​ರೈಸರ್ಸ್ ಹೈದರಾಬಾದ್​ ತಂಡ ನಿರ್ಣಾಯಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ಗೆ ಕೇವಲ 135 ರನ್​ಗಳ ಸಾಧಾರಣ ಟಾರ್ಗೆಟ್​ ನೀಡಿದೆ.

ಈ ಮೈದಾನದಲ್ಲಿ ನಡೆದಿದ್ದ ಹಿಂದಿನ 2 ಪಂದ್ಯಗಳಲ್ಲಿ ಮೊದಲು ಬ್ಯಾಟ್​ ಮಾಡಿದ ಪಂದ್ಯಗಳು ಜಯ ಸಾಧಿಸಿದ್ದರಿಂದ ಹೈದರಾಬಾದ್​ ತಂಡದ ನಾಯಕ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

ಆದರೆ, ಮೊದಲ ಓವರ್​ನಲ್ಲೇ ಮಾಜಿ ನಾಯಕ ಡೇವಿಡ್​ ವಾರ್ನರ್​ ಕೇವಲ 3 ಎಸೆತಗಳನ್ನ ಎದುರಿಸಿ ಖಾತೆ ತೆರೆಯದೇ ನಿರ್ಗಮಿಸಿ ಹೈದರಾಬಾದ್​ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದರು.

ನಂತರ ಬಂದ ಕೇನ್​ ವಿಲಿಯಮ್ಸನ್​ ವಿಕೆಟ್ ಕೀಪರ್ ಶಾ ಜೊತೆಗೂಡಿ 2ನೇ ವಿಕೆಟ್​ಗೆ 29 ರನ್​ಗಳ ಜೊತೆಯಾಟ ನೀಡಿದರು. ಶಾ 17 ಎಸೆತಗಳಲ್ಲಿ 18 ರನ್​ಗಳಿಸಿ ನಿರ್ಗಮಿಸಿದರು. ಡೆಲ್ಲಿ ಬೌಲರ್​ಗಳ ದಾಳಿಗೆ ಉತ್ತರಿಸಲಾಗದೆ ಪರದಾಡಿದ ವಿಲಿಯಮ್ಸನ್​ 26 ಎಸೆತಗಳಲ್ಲಿ ಕೇವಲ ಒಂದು ಬೌಂಡರಿ ಸಿಡಿಸಿ 18 ರನ್​ಗಳಿಸಿ ಅಕ್ಷರ್ ಪಟೇಲ್​​ಗೆ ವಿಕೆಟ್ ಒಪ್ಪಿಸಿದರು.

ಮನೀಶ್​ ಪಾಂಡೆ ಆಟ 17 ರನ್​ಗೆ ಸೀಮಿತವಾದರೆ ಮತ್ತು ಕೇದಾರ್ ಜಾಧವ್​(3) ಬಂದ ದಾರಿಯಲ್ಲೇ ವಾಪಸ್​ ತೆರಳಿದರು. ಇವರಿಬ್ಬರನ್ನು ಕ್ರಮವಾಗಿ ದ.ಆಫ್ರಿಕಾದ ರಬಾಡ ಮತ್ತು ನಾರ್ಟ್ಜ್​ ಪೆವಿಲಿಯನ್​ಗಟ್ಟಿದರು.

Last Updated : Sep 22, 2021, 10:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.