ಚೆನ್ನೈ: ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ ಬೌಲಿಂಗ್ ದಾಳಿಗೆ ತತ್ತರಿಸಿದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 137 ರನ್ಗಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ಇಂಡಿಯನ್ಸ್ ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಕೇವಲ 9 ರನ್ಗಳಿಸಿ ಡಿಕಾಕ್ ಔಟಾದರೆ. ಭರವಸೆಯ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ 15 ಎಸೆತಗಳಲ್ಲಿ 24 ರನ್ಗಳಿಸಿ ಆವೇಶ್ ಖಾನ್ಗೆ ವಿಕೆಟ್ ಒಪ್ಪಿಸಿದರು. ನಾಯಕ ರೋಹಿತ್ ಶರ್ಮಾ ಸ್ಪೋಟಕ ಆಟಕ್ಕೆ ಮುಂದಾಗಿ ವಿಕೆಟ್ ಕಳೆದುಕೊಂಡರು. ಅವರು 30 ಎಸೆತಗಳಲ್ಲಿ ತಲಾ 3 ಬೌಂಡರಿ ಮತ್ತು ಸಿಕ್ಸರ್ಗಳ ನೆರವಿನಿಂದ 44 ರನ್ಗಳಿಸಿದರು.
-
Innings Break!
— IndianPremierLeague (@IPL) April 20, 2021 " class="align-text-top noRightClick twitterSection" data="
The @DelhiCapitals restrict #MumbaiIndians to a total of 137/9 on the board, courtesy fine bowling figures of 4/24 from @MishiAmit.#MI chase coming up shortly. Stay tuned.https://t.co/9JzXKHJrH8 #DCvMI #VIVOIPL pic.twitter.com/B86fJEEv6w
">Innings Break!
— IndianPremierLeague (@IPL) April 20, 2021
The @DelhiCapitals restrict #MumbaiIndians to a total of 137/9 on the board, courtesy fine bowling figures of 4/24 from @MishiAmit.#MI chase coming up shortly. Stay tuned.https://t.co/9JzXKHJrH8 #DCvMI #VIVOIPL pic.twitter.com/B86fJEEv6wInnings Break!
— IndianPremierLeague (@IPL) April 20, 2021
The @DelhiCapitals restrict #MumbaiIndians to a total of 137/9 on the board, courtesy fine bowling figures of 4/24 from @MishiAmit.#MI chase coming up shortly. Stay tuned.https://t.co/9JzXKHJrH8 #DCvMI #VIVOIPL pic.twitter.com/B86fJEEv6w
ರೋಹಿತ್ ನಂತರ ಬಂದ ಹಾರ್ದಿಕ್ ಮಿಶ್ರಾರ ಅದೇ ಓವರ್ನಲ್ಲಿ ಸ್ಟೀವ್ ಸ್ಮಿತ್ಗೆ ಕ್ಯಾಚ್ ನೀಡಿ ಡಕ್ ಔಟಾದರು. ಇವರ ಸಹೋದರ ಕೃನಾಲ್ 1 ಮತ್ತು ಪೊಲಾರ್ಡ್ 2 ರನ್ಗಳಿಸಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.
ಇಶಾನ್ ಕಿಶನ್ 26 ಮತ್ತು ಜಯಂತ್ ಯಾದವ್ 23 ರನ್ಗಳಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಕೊನೆಯಲ್ಲಿ ಮುಂಬೈ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 137 ರನ್ಗಳಿಸಿತು.
ಡೆಲ್ಲಿ ಕ್ಯಾಪಿಟಲ್ಸ್ ಪರ ಅಮಿತ್ ಮಿಶ್ರಾ 24ಕ್ಕೆ 4, ಆವೇಶ್ ಖಾನ್ 15ಕ್ಕೆ 2, ಲಲಿತ್ ಯಾದವ್ , ಕಗಿಸೋ ರಬಾಡ ಮತ್ತು ಮಾರ್ಕಸ್ ಸ್ಟೋಯ್ನಿಸ್ ತಲಾ ಒಂದು ವಿಕೆಟ್ ಪಡೆದರು.