ಮುಂಬೈ: ಬಲಿಷ್ಠ ಪಂಜಾಬ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ 6 ವಿಕೆಟ್ಗಳ ಸುಲಭ ಗೆಲುವು ದಾಖಲು ಮಾಡುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಪಾಯಿಂಟ್ ಪಟ್ಟಿಯಲ್ಲಿ ಖಾತೆ ಓಪನ್ ಮಾಡಿದೆ.
ಡೆಲ್ಲಿ ವಿರುದ್ಧದ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ಇಂದಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನದ ಮೂಲಕ 6 ವಿಕೆಟ್ಗಳ ಗೆಲುವು ದಾಖಲು ಮಾಡಿದ್ದು, ಬಲಿಷ್ಠ ಪಂಜಾಬ್ ತಂಡಕ್ಕೆ ಸೋಲಿನ ರುಚಿ ತೋರಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ್ದ ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿತು. ಚೆನ್ನೈ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 106ರನ್ ಮಾತ್ರ ಗಳಿಕೆ ಮಾಡಿತು. ತಂಡದ ಪರ ಶಾರೂಕ್ ಖಾನ್ 47ರನ್ಗಳಿಕೆ ಮಾಡಿರುವುದು ಅತ್ಯಧಿಕ ಸ್ಕೋರ್ ಆಗಿತ್ತು. ಉಳಿದಂತೆ ಕ್ಯಾಪ್ಟನ್ ರಾಹುಲ್(5), ಗೇಲ್(10), ದೀಪಕ್ ಹೂಡಾ(10) ಪೂರನ್(0) ಹಾಗೂ ಮಯಾಂಕ್(0) ರನ್ಗಳಿಕೆ ಮಾಡಿ ನಿರಾಸೆ ಮೂಡಿಸಿದರು.
ಚೆನ್ನೈ ಪರ ಮಾರಕ ಬೌಲಿಂಗ್ ಪ್ರದರ್ಶನ ನೀಡಿದ ದೀಪಕ್ ಚಹರ್ 4 ಓವರ್ಗಳಲ್ಲಿ 13 ರನ್ ನೀಡಿ ಪ್ರಮುಖ 4 ವಿಕೆಟ್ ಪಡೆದುಕೊಂಡರೆ, ಸ್ಯಾಮ್ ಕರ್ರನ್, ಮೊಯಿನ್ ಅಲಿ, ಡ್ವೇನ್ ಬ್ರಾವೋ ತಲಾ 1ವಿಕೆಟ್ ಕಬಳಿಸಿ ತಂಡಕ್ಕೆ ಮೆಲುಗೈ ತಂದುಕೊಟ್ಟರು.
-
That's that from Match 8.@ChennaiIPL chase down the target in 15.4 overs and win by 6 wickets.
— IndianPremierLeague (@IPL) April 16, 2021 " class="align-text-top noRightClick twitterSection" data="
Scorecard - https://t.co/L0gFzXxDzS #VIVOIPL #PBKSvCSK pic.twitter.com/RgC75BEw1a
">That's that from Match 8.@ChennaiIPL chase down the target in 15.4 overs and win by 6 wickets.
— IndianPremierLeague (@IPL) April 16, 2021
Scorecard - https://t.co/L0gFzXxDzS #VIVOIPL #PBKSvCSK pic.twitter.com/RgC75BEw1aThat's that from Match 8.@ChennaiIPL chase down the target in 15.4 overs and win by 6 wickets.
— IndianPremierLeague (@IPL) April 16, 2021
Scorecard - https://t.co/L0gFzXxDzS #VIVOIPL #PBKSvCSK pic.twitter.com/RgC75BEw1a
ಇದನ್ನೂ ಓದಿ: ಶಾರೂಕ್ ಖಾನ್ 47ರನ್... ಚೆನ್ನೈ ಗೆಲುವಿಗೆ 107 ರನ್ ಟಾರ್ಗೆಟ್ ನೀಡಿದ ಪಂಜಾಬ್
107 ರನ್ಗಳ ಗುರಿ ಬೆನ್ನತ್ತಿದ್ದ ಚೆನ್ನೈ ಆರಂಭಿಕ ಆಘಾತದ ನಡುವೆ ಕೂಡ ಕೇವಲ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿದೆ. ಆರಂಭದಲ್ಲೇ ಋತುರಾಜ್(5) ರನ್ಗಳಿಕೆ ಮಾಡಿ ಮತ್ತೊಮ್ಮೆ ವೈಫಲ್ಯ ಅನುಭವಿಸಿದ್ರೆ, ಡುಪ್ಲೆಸಿ ಹಾಗೂ ಮೊಯಿನ್ ತಂಡವನ್ನ ಗೆಲುವಿನ ದಡಕ್ಕೆ ತೆಗೆದುಕೊಂಡು ಹೋದರು. ಈ ಜೋಡಿ 80ರನ್ಗಳ ಜೊತೆಯಾಟವಾಡಿತು. 46ರನ್ಗಳಿಕೆ ಮಾಡಿದ್ದ ವೇಳೆ ಮೊಯಿನ್ ಅಲಿ ವಿಕೆಟ್ ಒಪ್ಪಿಸಿದರು.
ಇದಾದ ಬಳಿಕ ಬಂದ ರೈನಾ (8), ರಾಯುಡು(0)ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಆದರೆ ಡುಪ್ಲೆಸಿ ಅಜೇಯ(36)ರನ್, ಕರ್ರನ್ ಅಜೇಯ(5)ರನ್ಗಳಿಕೆ ಮಾಡಿದರು. ತಂಡ ಕೊನೆಯದಾಗಿ 15. 4ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 107ರನ್ಗಳಿಕೆ ಮಾಡಿ ಗೆಲುವಿನ ನಗೆ ಬೀರಿದೆ. ಪಂಜಾಬ್ ತಂಡದ ಪರ ಮೊಹಮ್ಮದ್ ಶಮ್ಮಿ 2 ವಿಕೆಟ್, ಅರ್ಷದೀಪ್ ಹಾಗೂ ಮುರ್ಗನ್ ಅಶ್ವಿನ್ ತಲಾ 1ವಿಕೆಟ್ ಪಡೆದುಕೊಂಡರು.