ETV Bharat / sports

ಮೈದಾನದಲ್ಲಿ ಮಾತಿನ ಚಕಮಕಿ ನಡೆಸಿದ ಅಶ್ವಿನ್-ಮಾರ್ಗನ್.. ಕಾರಣ ಆ ಒಂದು ರನ್​..

author img

By

Published : Sep 28, 2021, 9:19 PM IST

ಡೆಲ್ಲಿ ನಾಯಕ ರಿಷಭ್ ಪಂತ್ ಮತ್ತು ಅಶ್ವಿನ್ 19ನೇ ಓವರ್​ 4ನೇ ಎಸೆತದಲ್ಲಿ ಒಂದು ರನ್​ ತೆಗೆದುಕೊಳ್ಳುವ ಜಾಗದಲ್ಲಿ ಕೆಕೆಆರ್ ಫೀಲ್ಡರ್​ ವೆಂಕಟೇಶ್ ಅಯ್ಯರ್ ಜಾರಿ ಬಿದ್ದಿದ್ದರಿಂದ ಡೆಲ್ಲಿ ಜೋಡಿ 2 ರನ್​ ತೆಗೆದುಕೊಂಡಿತು. ಇಲ್ಲಿ ರನ್ ಇರದಿದ್ದರೂ ಅಶ್ವಿನ್, ಪಂತ್​ಗೆ ಸ್ಟ್ರೈಕ್ ನೀಡುವುದಕ್ಕಾಗಿ ಈ ರೀತಿ ಮಾಡಿದ್ದರು..

Ashwin and Morgan engage in war of words
ಅಶ್ವಿನ್ - ಮಾರ್ಗನ್ ಜಟಾಪಟಿ

ಶಾರ್ಜಾ : ಡೆಲ್ಲಿ ಕ್ಯಾಪಿಟಲ್ಸ್ ತಂಡದ ರವಿಚಂದ್ರನ್ ಅಶ್ವಿನ್ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ನಾಯಕ ಇಯಾನ್ ಮಾರ್ಗನ್​ ಮೈದಾನದಲ್ಲಿ ಮಾತಿನ ಚಕಮಕಿ ನಡೆಸಿದ ಘಟನೆ ನಡೆದಿದೆ. ಆದರೆ, ಕೆಕೆಆರ್​ ವಿಕೆಟ್​ ಕೀಪರ್ ದಿನೇಶ್ ಕಾರ್ತಿಕ್​ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಡೆಲ್ಲಿ ನಾಯಕ ರಿಷಭ್ ಪಂತ್ ಮತ್ತು ಅಶ್ವಿನ್ 19ನೇ ಓವರ್​ 4ನೇ ಎಸೆತದಲ್ಲಿ ಒಂದು ರನ್​ ತೆಗೆದುಕೊಳ್ಳುವ ಜಾಗದಲ್ಲಿ ಕೆಕೆಆರ್ ಫೀಲ್ಡರ್​ ವೆಂಕಟೇಶ್ ಅಯ್ಯರ್ ಜಾರಿ ಬಿದ್ದಿದ್ದರಿಂದ ಡೆಲ್ಲಿ ಜೋಡಿ 2 ರನ್​ ತೆಗೆದುಕೊಂಡಿತು. ಇಲ್ಲಿ ರನ್ ಇರದಿದ್ದರೂ ಅಶ್ವಿನ್, ಪಂತ್​ಗೆ ಸ್ಟ್ರೈಕ್ ನೀಡುವುದಕ್ಕಾಗಿ ಈ ರೀತಿ ಮಾಡಿದ್ದರು.

Ravi Ashwin and Eoin Morgan Banter in during the match. #KKRvDC #Ashwin #IPL2O21 #EoinMorgan #timsouthee pic.twitter.com/XbTDylcay1

— 🇮🇳𝐒𝐀𝐉𝐀𝐍🇮🇳 (@Official_Sajan5) September 28, 2021

ಆದರೆ, ನಂತರದ ಓವರ್​ನಲ್ಲಿ ಅಶ್ವಿನ್​ ವಿಕೆಟ್ ಒಪ್ಪಿಸಿದರು. ಈ ವೇಳೆ ಸೌಥಿ ಅಶ್ವಿನ್​ ಕಡೆಗೆ ತಿರುಗಿ ಕಿಚಾಯಿಸಿದ್ದರು. ನಂತರ ಅಶ್ವಿನ್ ಕೋಪಗೊಂಡು ವಾಗ್ವಾದಕ್ಕಿಳಿದರು. ಸೌಥಿ ಜೊತೆಗೆ ಸೇರಿದ ಮಾರ್ಗನ್​ ಚಕಮಕಿಯನ್ನು ಮತ್ತಷ್ಟು ಹೆಚ್ಚಿಸಿದರು. ಆದರೆ, ಮಧ್ಯಪ್ರವೇಶಿಸಿದ ಕೆಕೆಆರ್​ನ ಮಾಜಿ ನಾಯಕ ದಿನೇಶ್ ಕಾರ್ತಿಕ್ ಜಗಳವನ್ನು ನಿಲ್ಲಿಸಿದರು.

ಈ ಪಂದ್ಯದಲ್ಲಿ ಡೆಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ128ರನ್​ಗಳ ಟಾರ್ಗೇಟ್ ನೀಡಿತ್ತು. ಕೆಕೆಆರ್​ 18.2 ಓವರ್​ಗಳಲ್ಲಿ ಗುರಿ ತಲುಪಿ ಗೆಲುವು ಸಾಧಿಸಿತು.

ಇದನ್ನು ಓದಿ:ತಂಡದ ಗೆಲುವಿನ ಸಂಪೂರ್ಣ ಶ್ರೇಯ ತಂಡದ ಕೋಚ್​ ಮೆಕಲಮ್​ಗೆ ಸಲ್ಲಬೇಕು : ಕೆಕೆಆರ್ ಕ್ಯಾಪ್ಟನ್​ ಮಾರ್ಗನ್​

ಶಾರ್ಜಾ : ಡೆಲ್ಲಿ ಕ್ಯಾಪಿಟಲ್ಸ್ ತಂಡದ ರವಿಚಂದ್ರನ್ ಅಶ್ವಿನ್ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ನಾಯಕ ಇಯಾನ್ ಮಾರ್ಗನ್​ ಮೈದಾನದಲ್ಲಿ ಮಾತಿನ ಚಕಮಕಿ ನಡೆಸಿದ ಘಟನೆ ನಡೆದಿದೆ. ಆದರೆ, ಕೆಕೆಆರ್​ ವಿಕೆಟ್​ ಕೀಪರ್ ದಿನೇಶ್ ಕಾರ್ತಿಕ್​ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಡೆಲ್ಲಿ ನಾಯಕ ರಿಷಭ್ ಪಂತ್ ಮತ್ತು ಅಶ್ವಿನ್ 19ನೇ ಓವರ್​ 4ನೇ ಎಸೆತದಲ್ಲಿ ಒಂದು ರನ್​ ತೆಗೆದುಕೊಳ್ಳುವ ಜಾಗದಲ್ಲಿ ಕೆಕೆಆರ್ ಫೀಲ್ಡರ್​ ವೆಂಕಟೇಶ್ ಅಯ್ಯರ್ ಜಾರಿ ಬಿದ್ದಿದ್ದರಿಂದ ಡೆಲ್ಲಿ ಜೋಡಿ 2 ರನ್​ ತೆಗೆದುಕೊಂಡಿತು. ಇಲ್ಲಿ ರನ್ ಇರದಿದ್ದರೂ ಅಶ್ವಿನ್, ಪಂತ್​ಗೆ ಸ್ಟ್ರೈಕ್ ನೀಡುವುದಕ್ಕಾಗಿ ಈ ರೀತಿ ಮಾಡಿದ್ದರು.

ಆದರೆ, ನಂತರದ ಓವರ್​ನಲ್ಲಿ ಅಶ್ವಿನ್​ ವಿಕೆಟ್ ಒಪ್ಪಿಸಿದರು. ಈ ವೇಳೆ ಸೌಥಿ ಅಶ್ವಿನ್​ ಕಡೆಗೆ ತಿರುಗಿ ಕಿಚಾಯಿಸಿದ್ದರು. ನಂತರ ಅಶ್ವಿನ್ ಕೋಪಗೊಂಡು ವಾಗ್ವಾದಕ್ಕಿಳಿದರು. ಸೌಥಿ ಜೊತೆಗೆ ಸೇರಿದ ಮಾರ್ಗನ್​ ಚಕಮಕಿಯನ್ನು ಮತ್ತಷ್ಟು ಹೆಚ್ಚಿಸಿದರು. ಆದರೆ, ಮಧ್ಯಪ್ರವೇಶಿಸಿದ ಕೆಕೆಆರ್​ನ ಮಾಜಿ ನಾಯಕ ದಿನೇಶ್ ಕಾರ್ತಿಕ್ ಜಗಳವನ್ನು ನಿಲ್ಲಿಸಿದರು.

ಈ ಪಂದ್ಯದಲ್ಲಿ ಡೆಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ128ರನ್​ಗಳ ಟಾರ್ಗೇಟ್ ನೀಡಿತ್ತು. ಕೆಕೆಆರ್​ 18.2 ಓವರ್​ಗಳಲ್ಲಿ ಗುರಿ ತಲುಪಿ ಗೆಲುವು ಸಾಧಿಸಿತು.

ಇದನ್ನು ಓದಿ:ತಂಡದ ಗೆಲುವಿನ ಸಂಪೂರ್ಣ ಶ್ರೇಯ ತಂಡದ ಕೋಚ್​ ಮೆಕಲಮ್​ಗೆ ಸಲ್ಲಬೇಕು : ಕೆಕೆಆರ್ ಕ್ಯಾಪ್ಟನ್​ ಮಾರ್ಗನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.