ಬೆಂಗಳೂರು: ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಸ್ಫೋಟಕ ಬ್ಯಾಟ್ಸ್ಮನ್ ಎಬಿಡಿ ವಿಲಿಯರ್ಸ್ ಸನ್ ರೈಸರ್ಸ್ ವಿರುದ್ಧದ ಪಂದ್ಯದ ವೇಳೆ ಕೋವಿಡ್-19 ವಿರುದ್ಧ ಹೋರಾಟ ನಡೆಸುತ್ತಿರುವವರ ಹೆಸರಿರುವ ಜರ್ಸಿ ತೊಟ್ಟು ಕಾಣಿಸಿಕೊಂಡಿದ್ದರು. ಇದೀಗ ಚಹಾಲ್ ಕೂಡ ಅಂಥದ್ದೇ ಕಾರ್ಯ ನಡೆಸುತ್ತಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಚಹಾಲ್ ವೈದ್ಯರ ಜೊತೆ ಮಾತುಕತೆ ನಡೆಸಿದ್ದಾರೆ. ಡಾ. ಸಚಿನ್ ನಾಯಕ್ ಎಂಬ ವೈದ್ಯರು ಲಾಕ್ಡೌನ್ ಸಮಯದಲ್ಲಿ ಸಲ್ಲಿಸಿದ ಸೇವೆಗೆ ಚಹಾಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
- " class="align-text-top noRightClick twitterSection" data="">
ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಡಾ. ಸಚಿನ್ ನಾಯಕ್ ಹಲವು ದಿನಗಳವರೆಗೆ ಮನೆಗೆ ಹಿಂದಿರುಗಿಲ್ಲ. ಕೋವಿಡ್ ಕೇರ್ನಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಯಾರೂ ಕೂಡ ಪ್ರತ್ಯೇಕ ರೂಂಗಳನ್ನು ನೀಡಿಲ್ಲ. ಆದರೂ ಹಿಂಜರಿಯದ ಸಚಿನ್ ಹಲವು ದಿನಗಳ ಕಾಲ ಕಾರಿನಲ್ಲೇ ವಾಸ ಮಾಡಿದ್ದಾರೆ.
ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವುದು, ಕೆಲಸದ ಅವಧಿ ಮುಗಿದ ನಂತರ ಕಾರಿನಲ್ಲೇ ವಾಸಿಸುವುದು. ಹೀಗೆ ತಿಂಗಳುಗಳ ಕಾಲ ಮನೆಗೆ ತೆರಳದೆ ಕಾರಿನಲ್ಲೇ ಜೀವನ ಸಾಗಿಸಿ ಹಲವಾರು ರೋಗಿಗಳ ಪ್ರಾಣ ಉಳಿಸಿದ್ದಾರೆ.
ವೈದ್ಯರ ಕರ್ತವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಚಹಾಲ್, ಡಾ. ಸಚಿನ್ ನಾಯಕ್ ಅವರ ಹೆಸರಿರುವ ಜರ್ಸಿ ತೊಟ್ಟು ಮೈದಾನಕ್ಕಿಳಿಯುವ ಮೂಲಕ ವೈದ್ಯರಿಗೆ ಗೌರವ ಸೂಚಿಸಲಿದ್ದಾರೆ.