ಶಾರ್ಜಾ : ಮಹಿಳಾ ಟಿ20 ಚಾಲೆಂಜ್ ಟೂರ್ನಿಯ ಮೂರನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸೂಪರ್‌ನೋವಾಸ್ ಮತ್ತು ಟ್ರೈಲ್‌ಬ್ಲೇಜರ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.

ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಸೂಪರ್‌ನೋವಾಸ್ ತಂಡ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದು ಇಂದಿನ ಪಂದ್ಯವನ್ನು ಗೆದ್ದರೆ ಮಾತ್ರ ಟೂರ್ನಿಯಲ್ಲಿ ಉಳಿಯಲಿದೆ. ಹೀಗಾಗಿ, ಹಾಲಿ ಚಾಂಪಿಯನ್ನರು ಗೆಲ್ಲಲೇಬೇಕಾದ ಒತ್ತಡದಲ್ಲಿದ್ದಾರೆ.
ಟ್ರೈಲ್‌ಬ್ಲೇಜರ್ಸ್ ಮತ್ತು ವೆಲಾಸಿಟಿ ತಂಡಗಳು ಒಂದೊಂದು ಪಂದ್ಯ ಗೆದ್ದಿದ್ದು, ತಲಾ 2 ಅಂಕಗಳಿಸಿ ಪಟ್ಟಿಯಲ್ಲಿ ಕ್ರಮವಾಗಿ ಒಂದು ಮತ್ತು ಎರಡನೇ ಸ್ಥಾನದಲ್ಲಿವೆ. ಟ್ರೈಲ್‌ಬ್ಲೇಜರ್ಸ್ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿದ್ರೆ ಫೈನಲ್ಗೆ ಎಂಟ್ರಿ ಪಡೆಯಲಿದೆ. ಇತ್ತ ಹಾಲಿ ಚಾಂಪಿಯನ್ನರು ಉತ್ತಮ ರನ್ರೇಟ್ನೊಂದಿಗೆ ಪಂದ್ಯದಲ್ಲಿ ಗೆಲುವು ಸಾಧಿಸುವ ವಿಶ್ವಾಸದಲ್ಲಿದ್ದಾರೆ.

ತಂಡಗಳು
ಸೂಪರ್‌ನೋವಾಸ್ : ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರೋಡ್ರಿಗಸ್ (ಉಪ ನಾಯಕಿ) ಚಮರಿ ಅಟಪಟ್ಟು, ಪ್ರಿಯಾ ಪುನಿಯಾ, ಅನುಜಾ ಪಾಟೀಲ್, ರಾಧಾ ಯಾದವ್, ತಾನಿಯಾ ಭಾಟಿಯಾ (ಕೀಪರ್), ಶಶಿಕಲಾ ಸಿರಿವರ್ಧನೆ, ಪೂನಮ್ ಯಾದವ್, ಶಕೇರಾ ಸೆಲ್ಮನ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಕರ್, ಆಯುಶಿ ಸೋನಿ, ಅಯಬೊಂಗಾ ಖಾಕಾ, ಮುಸ್ಕನ್ ಮಲಿಕ್
ಟ್ರೈಲ್‌ಬ್ಲೇಜರ್ಸ್: ಸ್ಮೃತಿ ಮಂಧಾನ (ನಾಯಕಿ), ದೀಪ್ತಿ ಶರ್ಮಾ (ಉಪ ನಾಯಕಿ), ಪುನಮ್ ರಾವತ್, ರಿಚಾ ಘೋಷ್, ಡಿ. ಹೇಮಲತಾ, ನುಜಾತ್ ಪಾರ್ವೀನ್ (ಕೀಪರ್), ರಾಜೇಶ್ವರಿ ಗಾಯಕ್ವಾಡ್, ಹರ್ಲೀನ್ ಡಿಯೋಲ್, ಜುಲಾನ್ ಗೋಸ್ವಾಮಿ, ಸಿಮರನ್ ದಿಲ್ ಬಹದ್ದೂರ್, ಸಲ್ಮಾ ಖತುನ್, ಸೋಫಿ ಎಕ್ಲೆಸ್ಟೋನ್, ನಥಕನ್ ಚಾಂಥಮ್, ದಿಯಾಂಡ್ರಾ ದೊಟ್ಟಿನ್, ಕಾಶ್ವೀ ಗೌತಮ್