ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020ರಲ್ಲಿ 3ನೇ ಸ್ಥಾನ ಪಡೆದ ಸನ್ ರೈಸರ್ಸ್ ಹೈದರಾಬಾದ್, ಹರಾಜಿಗೆ ಮುನ್ನ ತಮ್ಮ ತಂಡದಿಂದ ಕೇವಲ ಐದು ಆಟಗಾರರನ್ನು ಹೊರಗಿಟ್ಟಿದೆ. ಕನ್ನಡಿಗ ಮತ್ತು ಭರವಸೆಯ ಆಟಗಾರ ಮನೀಷ್ ಪಾಂಡೆ ಅವರನ್ನು ಉಳಿಸಿಕೊಂಡಿದೆ.
ಇದನ್ನೂ ಓದಿ...ಜೇಸನ್ ರಾಯ್, ಅಲೆಕ್ಸ್ ಕ್ಯಾರಿ ಔಟ್: ಡೆಲ್ಲಿ ಉಳಿಸಿಕೊಂಡ ಯುವ ಆಟಗಾರರ ಪಟ್ಟಿ ಹೀಗಿದೆ
ಡೇವಿಡ್ ವಾರ್ನರ್ ಮುನ್ನಡೆಸಲಿರುವ ಎಸ್ಆರ್ಹೆಚ್ನಲ್ಲಿ ಯಾವುದೇ ದೊಡ್ಡ ಬದಲಾವಣೆಗಳಿಲ್ಲ. ಐಪಿಎಲ್ 2021ರ ಹರಾಜಿಗೂ ಮುನ್ನವೇ ಹೈದರಾಬಾದ್ ಬಿಡುಗಡೆ ಮಾಡಿದ ಐವರು ಆಟಗಾರರಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಬಿಲ್ಲಿ ಸ್ಟ್ಯಾನ್‌ಲೇಕ್ ಒಬ್ಬರು. ಅವರು ಕಳೆದ ಐದು ವರ್ಷಗಳಿಂದ ಫ್ರಾಂಚೈಸಿಯೊಂದಿಗೆ ಇದ್ದರು ಎಂಬುದು ಗಮನಾರ್ಹ. ಆದರೆ 2018ರಲ್ಲಿ ಅವರ ಕೊನೆಯ ಪಂದ್ಯವನ್ನು ಮತ್ತೆ ಆಡಿದ್ದರು.
-
🚨 Attention #OrangeArmy 🚨#RisersRetained for #IPL2021 📑#IPLRetention pic.twitter.com/OsPeoLnDy2
— SunRisers Hyderabad (@SunRisers) January 20, 2021 " class="align-text-top noRightClick twitterSection" data="
">🚨 Attention #OrangeArmy 🚨#RisersRetained for #IPL2021 📑#IPLRetention pic.twitter.com/OsPeoLnDy2
— SunRisers Hyderabad (@SunRisers) January 20, 2021🚨 Attention #OrangeArmy 🚨#RisersRetained for #IPL2021 📑#IPLRetention pic.twitter.com/OsPeoLnDy2
— SunRisers Hyderabad (@SunRisers) January 20, 2021
ಸ್ಟ್ಯಾನ್‌ಲೇಕ್ ಜೊತೆಗೆ ಫ್ಯಾಬಿಯನ್ ಅಲೆನ್, ಭಾರತೀಯರಲ್ಲಿ ವೈ.ಪೃಥ್ವಿರಾಜ್, ಸಂಜಯ್ ಯಾದವ್ ಮತ್ತು ಬಿ.ಸಂದೀಪ್ ಅವರನ್ನು ಕೈಬಿಡಲಾಗಿದೆ. ಟೂರ್ನಿಯ ಆರಂಭದಲ್ಲಿ ಗಾಯಗೊಂಡು ಹೊರಗುಳಿದಿದ್ದ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಉಳಿಸಿಕೊಂಡಿದೆ.
ಇದನ್ನೂ ಓದಿ...ಈ ಬೌಲರ್ ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಬೆಲೆಗೆ ಮಾರಾಟವಾಗ್ತಾರೆ: ಆಕಾಶ್ ಚೊಪ್ರಾ ಭವಿಷ್ಯ
ಉಳಿಸಿಕೊಂಡಿರುವ ತಂಡ: ಡೇವಿಡ್ ವಾರ್ನರ್ (ನಾಯಕ), ಅಭಿಷೇಕ್ ಶರ್ಮಾ, ಬಿಸಿಲ್ ಥಂಪಿ, ಭುವನೇಶ್ವರ್ ಕುಮಾರ್, ಜಾನಿ ಬೇರ್ಸ್ಟೋವ್, ಕೇನ್ ವಿಲಿಯಮ್ಸನ್, ಮನೀಶ್ ಪಾಂಡೆ, ಮೊಹಮ್ಮದ್ ನಬಿ, ರಶೀದ್ ಖಾನ್, ಸಂದೀಪ್ ಶರ್ಮಾ, ಶಹಬಾಜ್ ನದೀಮ್, ಶ್ರೀವಾತ್ಸ್ ಗೋಸ್ವಾಮಿ, ಸಿದ್ದಾರ್ಥ್ ಅಹ್ಮದ್, ಟಿ.ನಟರಾಜನ್, ವಿಜಯ್ ಶಂಕರ್, ವೃದ್ಧಿಮಾನ್ ಸಹಾ, ಅಬ್ದುಲ್ ಸಮದ್, ಮಿಚೆಲ್ ಮಾರ್ಷ್, ಜೇಸನ್ ಹೋಲ್ಡರ್, ಪ್ರಿಯಂ ಗರ್ಗ್, ವಿರಾಟ್ ಸಿಂಗ್.
ಫ್ರಾಂಚೈಸಿ ಉಳಿಸಿಕೊಂಡ ಮೊತ್ತ: ₹10.75 ಕೋಟಿ