ದುಬೈ: ರಾಜಸ್ಥಾನ ರಾಯಲ್ಸ್ ತಂಡವು ಬೆನ್ ಸ್ಟೋಕ್ಸ್ ಮತ್ತು ಜೋಸ್ ಬಟ್ಲರ್ ನೀಡಿದ ಉತ್ತಮ ಆರಂಭದ ನಂತರ ಸಾಮ್ಸನ್ ಹೊರತಾಗಿ ಯಾವ ಆಟಗಾರರೂ ಹೆಚ್ಚು ರನ್ಗಳ ಜೊತೆಯಾಟವಾಡಲು ಅಸಮರ್ಥರಾದೆವು ಎಂದು ರಾಜಸ್ಥಾನ ತಂಡದ ನಾಯಕ ಸ್ಟೀವ್ ಸ್ಮಿತ್ ಹೇಳಿದ್ದಾರೆ.
ಪಂದ್ಯ ಮುಗಿದ ಬಳಿಕ ಮಾತನಾಡಿದ ಸ್ಮಿತ್, "ಬಟ್ಲರ್ ಮತ್ತು ಸ್ಟೋಕ್ಸ್ ಉತ್ತಮ ಆರಂಭ ಒದಗಿಸಿದರು. ನಂತರ ನಾವು ಒಂದೆರಡು ವಿಕೆಟ್‌ಗಳನ್ನು ಕಳೆದುಕೊಂಡೆವು. 3ನೇ ವಿಕೆಟ್‌ಗೆ ಜೊತೆಯಾದ ಸ್ಟೋಕ್ಸ್ ಮತ್ತು ಸಾಮ್ಸನ್ ಉತ್ತಮ ಜೊತೆಯಾಟ ಆಡಿದರು. ಆ ನಂತರ ವಿಕೆಟ್ ಕಳೆದುಕೊಳ್ಳುತ್ತಲೇ ಹೋದೆವು. ಸ್ಲೋ ಪಿಚ್ನಲ್ಲಿ ಅಂತಿಮ ಹಂತದಲ್ಲಿ ರನ್ ಗಳಿಸುವುದು ತುಂಬಾ ಕಠಿಣ" ಎಂದಿದ್ದಾರೆ.

ಮೊದಲ ನಾಲ್ಕು ಓವರ್‌ಗಳಲ್ಲಿ ಸ್ಟೋಕ್ಸ್ ಮತ್ತು ಬಟ್ಲರ್ 37 ರನ್ ಗಳಿಸಿದರು. ನಂತರ ಸಂಜು ಸಾಮ್ಸನ್ ಮೂರನೇ ವಿಕೆಟ್‌ಗೆ ಸ್ಟೋಕ್ಸ್ ಜೊತೆ ಸೇರಿ 46 ರನ್ ಜೊತೆಯಾಟ ಆಡಿದ್ರು. ರಾಬಿನ್ ಉತ್ತಪ್ಪ ಮತ್ತು ರಾಹುಲ್ ತಿವಾಟಿಯಾ ಆರನೇ ವಿಕೆಟ್‌ಗೆ 25 ರನ್ ಗಳಿಸಿದ್ದು ನಂತರದ ಉತ್ತಮ ಜೊತೆಯಾಟವಾಗಿದೆ.

"ನಮ್ಮ ಕೆಲವು ಬ್ಯಾಟ್ಸ್ಮನ್ಗಳು ಇನ್ನಿಂಗ್ಸ್ ಅನ್ನು ಮುಂದೆ ಕೊಂಡೊಯ್ಯಬಹುದಿತ್ತು. ಆದರೆ ಅದನ್ನು ಮಾಡಲು ನಮಗೆ ಸಾಧ್ಯವಾಗಲಿಲ್ಲ. ನಾವು ಉತ್ತಮವಾಗಿ ಬೌಲಿಂಗ್ ಮಾಡಿದ್ದೇವೆ. ಡೆಲ್ಲಿ ತಂಡವನ್ನು 160 ರನ್ಗಳಿಗೆ ನಿಯಂತ್ರಿಸಿದೆವು. ಆದರೆ ಬ್ಯಾಟಿಂಗ್ನಲ್ಲಿ ಉತ್ತಮ ಜೊತೆಯಾಟವಾಡಲಿಲ್ಲ. ಬ್ಯಾಟ್ಸ್ಮನ್ಗಳು ಮೈದಾನಕ್ಕೆ ಇಳಿಯುತಿದ್ದಂತೆ ಔಟ್ ಆಗಿ ಹೊರ ಬರುತ್ತಿದ್ದರು. 50ರಿಂದ 60 ರನ್ ಗಳಿಸಿ ಇನ್ನಿಂಗ್ಸ್ ಕಟ್ಟಲು ಸಾಧ್ಯವಾಗಲಿಲ್ಲ" ಎಂದಿದ್ದಾರೆ.

"ನಾವು ಈ ಸಮಯದಲ್ಲಿ ಶ್ರೇಷ್ಠ ಸ್ಥಾನದಲ್ಲಿಲ್ಲ. ಇಲ್ಲಿಂದ ನಾವು ಮುಂದೆ ಸಾಗಬೇಕಿದೆ. ಮುದಿನ ಪಂದ್ಯಕ್ಕೆ 3 ದಿನಗಳ ಸಮಯವಿದ್ದು, ಉತ್ತಮ ಪ್ರದರ್ಶನದೊಂದಿಗೆ ಕಂಬ್ಯಾಕ್ ಮಾಡುವ ವಿಶ್ವಾಸ ಇದೆ" ಎಂದಿದ್ದಾರೆ.