ಹೈದರಾಬಾದ್: ತಮ್ಮ ಮನೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಳದಿ ಬಣ್ಣ ಹಾಗೂ ಮನೆಯ ತುಂಬೆಲ್ಲಾ ಧೋನಿಯ ಚಿತ್ರ ಬಿಡಿಸುವ ಮೂಲಕ ಸುದ್ದಿಯಾಗಿದ್ದ ತಮಿಳುನಾಡಿನ ಗೋಪಿ ಕೃಷ್ಣನ್ಗೆ ಎಂ.ಎಸ್.ಧೋನಿ ಧನ್ಯವಾದ ತಿಳಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಟ್ವೀಟ್ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಧೋನಿ ಭಾವುಕರಾಗಿದ್ದು, ಅಭಿಮಾನಿಯ ಪ್ರೀತಿಗೆ ಫಿದಾ ಆಗಿದ್ದಾರೆ. "ನಾನು ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋ ನೋಡಿದೆ. ಇದು ಕೇವಲ ನನ್ನ ಮೇಲಿರುವ ಪ್ರೀತಿ ಮಾತ್ರವಲ್ಲ. ಸಿಎಸ್ಕೆ ತಂಡದ ಮೇಲಿನ ಪ್ರೀತಿಯನ್ನೂ ತೋರಿಸುತ್ತದೆ" ಎಂದು ಹೇಳಿದ್ದಾರೆ.
-
Thala Dhoni's sweet reaction to the sweetest tribute! 🦁💛
— Chennai Super Kings (@ChennaiIPL) October 26, 2020 " class="align-text-top noRightClick twitterSection" data="
A big #WhistlePodu for Super Fan Gobikrishnan and his family for all the #yellove, literally. #HomeOfDhoniFan @GulfOilIndia @thenewsminute pic.twitter.com/1wxWVnP00l
">Thala Dhoni's sweet reaction to the sweetest tribute! 🦁💛
— Chennai Super Kings (@ChennaiIPL) October 26, 2020
A big #WhistlePodu for Super Fan Gobikrishnan and his family for all the #yellove, literally. #HomeOfDhoniFan @GulfOilIndia @thenewsminute pic.twitter.com/1wxWVnP00lThala Dhoni's sweet reaction to the sweetest tribute! 🦁💛
— Chennai Super Kings (@ChennaiIPL) October 26, 2020
A big #WhistlePodu for Super Fan Gobikrishnan and his family for all the #yellove, literally. #HomeOfDhoniFan @GulfOilIndia @thenewsminute pic.twitter.com/1wxWVnP00l
"ಅನೇಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ತಂಡದ ಮೇಲಿನ ಪ್ರೀತಿಯನ್ನ ತೋರಿಸುತ್ತಾರೆ. ಆ ಪೋಸ್ಟ್ಗಳ ಅವಧಿ ಒಂದು ದಿನ ಮಾತ್ರ. ಆದರೆ ಈ ಅಭಿಮಾನಿಯ ಪ್ರೀತಿ ಒಂದೇ ದಿನಕ್ಕೆ ಅಳಿಸಿಹೋಗುವಂತದ್ದಲ್ಲ. ನಿಮ್ಮ ಇಡೀ ಕುಟುಂಬಕ್ಕೆ ನಮ್ಮ ತಂಡದ ಕಡೆಯಿಂದ ಧನ್ಯವಾದ" ಎಂದು ಹೇಳಿದ್ದಾರೆ.
ತಮಿಳುನಾಡಿನಲ್ಲಿ ಕಡಲೂರು ನಿವಾಸಿ ಧೋನಿಯ ಕಟ್ಟಾ ಅಭಿಮಾನಿ ಗೋಪಿ ಕೃಷ್ಣನ್ ತನ್ನ ಮನೆಗೆ ಸಂಪೂರ್ಣ ಹಳದಿ ಬಣ್ಣದ ಪೇಂಟ್ ಮಾಡಿಸಿದ್ದು, ಅದಕ್ಕೆ 'ಹೋಮ್ ಆಫ್ ಧೋನಿ ಫ್ಯಾನ್' ಎಂದು ನಾಮಕರಣ ಮಾಡಿ ಎಲ್ಲೆಡೆ ಸುದ್ದಿಯಾಗಿದ್ದರು. ತನ್ನ ಮನೆಯ ಗೋಡೆಗಳ ಮೇಲೆ ಧೋನಿಯ ಭಾವಚಿತ್ರಗಳನ್ನು ಬಿಡಿಸಿದ್ದಾರೆ. ಜೊತೆಗೆ ಸಿಎಸ್ಕೆ ಲೋಗೋ ಮತ್ತು ವಿಸಲ್ ಪೋಡು ಎಂಬ ಟ್ಯಾಗ್ ಲೈನ್ ಕೂಡ ಬರೆಸಿಕೊಂಡಿದ್ದಾರೆ.