ETV Bharat / sports

'ಆರ್​ಸಿಬಿ ತಂಡದ ಮೇಲೆ ಹಲವರಿಗೆ ನಂಬಿಕೆಯೇ ಇಲ್ಲ': ಗೆಲುವಿನ ನಂತರ ವಿರಾಟ್ ಹೇಳಿಕೆ - ಕೋಲ್ಕತ್ತಾ ವಿರುದ್ಧ ಆರ್​ಸಿಬಿಗೆ ಜಯ

ನೀವು ವಿಶ್ವದ ಅತ್ಯುತ್ತಮ ಆಟಗಾರರನ್ನು ಹೊಂದಿರಬಹುದು. ಆದರೆ ನಿಮಗೆ ಅವರ ಮೇಲೆ ನಂಬಿಕೆ ಇಲ್ಲದಿದ್ದರೆ ಯಾವುದೇ ಪ್ರಯೋಜನವಿಲ್ಲ ಎಂದು ಆರ್​ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

Virat Kohli
ವಿರಾಟ್ ಕೊಹ್ಲಿ
author img

By

Published : Oct 22, 2020, 8:03 AM IST

ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲೆ ಹಲವರಿಗೆ ನಂಬಿಕೆಯೇ ಇಲ್ಲ ಎಂದು ಆರ್​ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಎಂಟು ವಿಕೆಟ್‌ಗಳ ಗೆಲುವು ಸಾಧಿಸಿದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಮಾತನಾಡಿ, ಅನೇಕ ಜನರಿಗೆ ತಂಡದ ಸಾಮರ್ಥ್ಯಗಳ ಬಗ್ಗೆ ನಂಬಿಕೆ ಇಲ್ಲ. ಆದರೆ ಎಲ್ಲಾ ಆಟಗಾರರು ವಿಶ್ವಾಸ ಹೊಂದಿದ್ದಾರೆ ಎಂದಿದ್ದಾರೆ.

Virat Kohli
ವಿರಾಟ್ ಕೊಹ್ಲಿ

ಪಂದ್ಯ ಮುಗಿದ ಬಳಿಕ ಮಾತನಾಡಿದ ವಿರಾಟ್, "ಸಿರಾಜ್‌ಗೆ 2ನೇ ಓವರ್ ಬೌಲಿಂಗ್ ನೀಡಲು ತುಂಬಾ ತಡವಾಗಿ ನಿರ್ಧಾರ ಮಾಡಿದ್ವಿ, ಅದನ್ನು ವಾಷಿಂಗ್ಟನ್ ಸುಂದರ್‌ಗೆ ನೀಡುವ ಬಗ್ಗೆ ಯೋಚಿಸುತ್ತಿದ್ದೆ. ನಮ್ಮ ತಂಡದ ಮ್ಯಾನೇಜ್​​​ಮೆಂಟ್​​​ ಸರಿಯಾದ ಸಂಸ್ಕೃತಿಯನ್ನು ತಂದಿದೆ. ನಮಲ್ಲಿ ಪ್ಲ್ಯಾನ್ ಎ ಮತ್ತು ಪ್ಲ್ಯಾನ್ ಬಿ ಇದೆ. ಆಟಗಾರರು ಅದನ್ನು ಕಾರ್ಯಗತಗೊಳಿಸುತ್ತಿದ್ದಾರೆ. ಅದಕ್ಕಾಗಿಯೇ ಉತ್ತಮ ಫಲಿತಾಂಶ ದೊರಕಿದೆ" ಎಂದಿದ್ದಾರೆ.

mohammed siraj
ಮೊಹಮ್ಮದ್ ಸಿರಾಜ್

ಅಲ್ಲದೆ "ಆರ್​ಸಿಬಿ ತಂಡದ ಸಾಮರ್ಥ್ಯದ ಮೇಲೆ ಹಲವರಿಗೆ ನಂಬಿಕೆ ಇಲ್ಲ. ಆದರೆ ನಮ್ಮ ಡ್ರೆಸ್ಸಿಂಗ್​ ರೂಮ್​ನಲ್ಲಿ ಸದಸ್ಯರಿಗೆ ಆ ನಂಬಿಕೆ ಇದೆ. ಇದೇ ಮುಖ್ಯವಾದದ್ದು. ನೀವು ವಿಶ್ವದ ಅತ್ಯುತ್ತಮ ಆಟಗಾರರನ್ನು ಹೊಂದಿರಬಹುದು. ಆದರೆ ನಿಮಗೆ ಅವರ ಮೇಲೆ ನಂಬಿಕೆ ಇಲ್ಲದಿದ್ದರೆ ಯಾವುದೇ ಪ್ರಯೋಜನವಿಲ್ಲ" ಎಂದಿದ್ದಾರೆ.

ಕೆಕೆಆರ್​ ವಿರುದ್ಧ ಮಾರಕ ದಾಳಿ ನಡೆಸಿದ ಆರ್​ಸಿಬಿ ಬೌಲರ್​ಗಳು 84 ರನ್​ಗಳಿಕೆ ಕೋಲ್ಕತ್ತಾ ತಂಡವನ್ನು ನಿಯಂತ್ರಿಸಿದ್ರು. 85 ರನ್​ಗಳ ಸುಲಭದ ಗುರಿ ಬೆನ್ನಟ್ಟಿದ್ದ ಆರ್​ಸಿಬಿ ತಂಡ 13.3 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.