ಅಬುಧಾಬಿ: ಮುಂಬೈ ಇಂಡಿಯನ್ಸ್ ವಿರುದ್ಧ 48 ರನ್ಗಳ ಸೋಲು ಅನುಭವಿಸಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಟೂರ್ನಿಯಲ್ಲಿ ಮತ್ತೆ ಪುಟಿದೇಳಲಿದೆ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ವೇಗಿ ಶೆಲ್ಡಾನ್ ಕಾಟ್ರೆಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
13ನೇ ಸೀಸನ್ನಲ್ಲಿ ಪಂಜಾಬ್ ಇಲ್ಲಿಯವರೆಗೆ ನಾಲ್ಕು ಪಂದ್ಯಗಳನ್ನು ಆಡಿದ್ದು, ಕೇವಲ ಒಂದು ಪಂದ್ಯವನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಆದರೂ ನಮ್ಮ ತಂಡ ಮತ್ತೆ ಪುಟಿಯುವ ಸಾಮರ್ಥ್ಯ ಹೊಂದಿದೆ ಎಂದು ಕಾಟ್ರೆಲ್ ಹೇಳಿದ್ದಾರೆ.
ಪಂದ್ಯ ಮುಗಿದ ಬಳಿಕ ಮಾತನಾಡಿದ ವೇಗಿ ಕಾಟ್ರೆಲ್, ನಮ್ಮಲ್ಲಿ ಉತ್ತಮ ಆಟಗಾರರ ತಂಡವಿದೆ. ಕೋಚಿಂಗ್ ಸಿಬ್ಬಂದಿ, ಅನಿಲ್ ಕುಂಬ್ಳೆ ಅದ್ಭುತ ಮಾರ್ಗದರ್ಶನ ನೀಡುತ್ತಿದ್ದಾರೆ. ನಾವು ಮತ್ತೆ ಪುಟಿಯುತ್ತೇವೆ ಎಂದು ನಂಬುತ್ತೇವೆ. ನಮ್ಮ ತಂಡದ ಕ್ಯಾಪ್ಟನ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಶೇಕಡಾ 110 ರಷ್ಟು ಬೆಂಬಲ ನೀಡುತ್ತೇನೆ ಎಂದಿದ್ದಾರೆ.
ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಮೂರು ಓವರ್ಗಳಲ್ಲಿ 1 ವಿಕೆಟ್ ಪಡೆದು 52 ರನ್ ಬಿಟ್ಟುಕೊಟ್ಟಿದ್ದ ಕೆರಿಬಿಯನ್ ಬೌಲರ್, ಮುಂಬೈ ವಿರುದ್ಧ ನಾಲ್ಕು ಓವರ್ಗಳಲ್ಲಿ 20 ರನ್ ನೀಡಿ ಒಂದು ವಿಕೆಟ್ ಪಡೆದಿದ್ದರು. ನನ್ನ ಕಂಬ್ಯಾಕ್ ಉತ್ತಮವಾಗಿತ್ತು. ನನ್ನ ಪ್ರದರ್ಶನದ ಬಗ್ಗೆ ನನಗೆ ಸಂತೋಷವಾಗಿದೆ ಎಂದಿದ್ದಾರೆ
ನಾನು ಮತ್ತು ನಮ್ಮ ತಂಡದ ಇತರೆ ಬೌಲರ್ಗಳು ಡೆತ್ ಬೌಲಿಂಗ್ಗಾಗಿ ಶ್ರಮ ವಹಿಸುತ್ತಿದ್ದೇವೆ. ನಮ್ಮ ತಪ್ಪುಗಳನ್ನು ಕಂಡುಕೊಂಡು ಕಠಿಣ ಅಭ್ಯಾಸ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.