ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಎಂಟನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಹೈದರಾಬಾದ್ ತಂಡ ಏಳು ವಿಕೆಟ್ ಅಂತರದಲ್ಲಿ ಸೋಲು ಕಂಡಿದ್ದು, ಸನ್ರೈಸರ್ಸ್ ನಾಯಕ ವಾರ್ನರ್ ಮೊದಲು ಬ್ಯಾಟಿಂಗ್ ನಡೆಸುವ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಟಾಸ್ ಗೆದ್ದ ವಾರ್ನರ್ ಬ್ಯಾಟಿಂಗ್ ಆಯ್ದುಕೊಂಡರು. ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತು. ವಾರ್ನರ್ 36 ರನ್‌ಗಳನ್ನು ಗಳಿಸಿದ್ರೆ, ಮನೀಷ್ ಪಾಂಡೆ ಅರ್ಧಶತಕ ಬಾರಿಸಿ ರಸೆಲ್ಗೆ ಕ್ಯಾಚ್ ನೀಡಿ ಔಟಾದರು.
ಮೊದಲು ಬ್ಯಾಟಿಂಗ್ ನಡೆಸುವ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ವಾರ್ನರ್, ನಾನು ಸರಿಯಾಗಿಯೇ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಭಾವಿಸುತ್ತೇನೆ. ನಮ್ಮ ಶಕ್ತಿ ಡೆತ್ ಬೌಲಿಂಗ್. ರನ್ ವೇಗ ಹೆಚ್ಚಿಸಲು ಇದು ನಿಜವಾಗಿಯೂ ಕಷ್ಟಕರವಾದ ವಿಕೆಟ್ ಎಂದು ನಾನು ಭಾವಿಸಿದೆವು. ನೀವು ಕೊನೆಯವರೆಗೆ ವಿಕೆಟ್ ಉಳಿಸಿಕೊಂಡು ಬಂದರೆ ಪಂದ್ಯ ಗೆಲ್ಲಲು ಸಾಧ್ಯವಾಗುತ್ತದೆ ಎಂಬುದನ್ನು ಕೋಲ್ಕತ್ತಾ ಆಟಗಾರರು ತೋರಿಸಿಕೊಟ್ಟಿದ್ದಾರೆ. ಆಟದ ಆರಂಭದಲ್ಲಿ ನಾನು ತೆಗೆದುಕೊಂಡ ತೀರ್ಮಾನದ ಬಗ್ಗೆ ಯಾವುದೇ ವಿಷಾದವಿಲ್ಲ ಮತ್ತು ನನ್ನ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಹೇಳಿದ್ದಾರೆ ವಾರ್ನರ್.
ಹೈದರಾಬಾದ್ ಅನ್ನು ಕಡಿಮೆ ರನ್ಗಳಿಗೆ ಕಟ್ಟಿ ಹಾಕುವಲ್ಲಿ ಕೆಕೆಆರ್ ಬೌಲರ್‌ಗಳು ಯಶಸ್ವಿಯಾಗಿದ್ದಾರೆ. ಎಲ್ಲಾ ಬೌಲರ್‌ಗಳು ಉತ್ತಮವಾಗಿ ಸ್ಪೆಲ್ ಮಾಡಿದ್ದಾರೆ. ಕಳೆದ ಪಂದ್ಯದಲ್ಲಿ ಅತ್ಯಂತ ದುಬಾರಿಯಾಗಿದ್ದ ಕೆಕೆಆರ್ ವೇಗಿ ಪ್ಯಾಟ್ ಕಮ್ಮಿನ್ಸ್ ತಮ್ಮ ನಾಲ್ಕು ಓವರ್‌ಗಳಲ್ಲಿ ಕೇವಲ 19 ರನ್ ಬಿಟ್ಟುಕೊಟ್ಟು 1 ವಿಕೆಟ್ ಪಡೆದರು.