ದುಬೈ: ಕಳೆದ ಕೆಲ ದಿನಗಳ ಹಿಂದಷ್ಟೇ ಆರ್ಸಿಬಿ ಪರ 200 ಪಂದ್ಯಗಳನ್ನು ಆಡಿದ ವಿಶೇಷ ಸಾಧನೆ ಮಾಡಿದ್ದ ವಿರಾಟ್ ಕೊಹ್ಲಿ, ಮತ್ತೊಂದು ದಾಖಲೆ ಬರೆದಿದ್ದಾರೆ.
ಭಾನುವಾರ ಚೆನ್ನೈ ಸೂಪರ್ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಒಂದು ಸಿಕ್ಸರ್ ಸಿಡಿಸಿದ ವಿರಾಟ್, ಐಪಿಎಲ್ ಇತಿಹಾಸದಲ್ಲಿ 200 ಸಿಕ್ಸರ್ ಸಸಿಡಿಸಿದ ಭಾರತದ ಮೂರನೇ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
-
Another day at office and another milestone unlocked for @imVkohli.
— IndianPremierLeague (@IPL) October 25, 2020 " class="align-text-top noRightClick twitterSection" data="
He is the 5th player in IPL and third Indian to achieve this feat.#Dream11IPL pic.twitter.com/bXqq2lAGsz
">Another day at office and another milestone unlocked for @imVkohli.
— IndianPremierLeague (@IPL) October 25, 2020
He is the 5th player in IPL and third Indian to achieve this feat.#Dream11IPL pic.twitter.com/bXqq2lAGszAnother day at office and another milestone unlocked for @imVkohli.
— IndianPremierLeague (@IPL) October 25, 2020
He is the 5th player in IPL and third Indian to achieve this feat.#Dream11IPL pic.twitter.com/bXqq2lAGsz
ಸಿಎಸ್ಕೆ ವಿರುದ್ಧ ಉತ್ತಮವಾಗಿ ಬ್ಯಾಟ್ ಬೀಸಿದ ವಿರಾಟ್ ಕೊಹ್ಲಿ 43 ಎಸೆತಗಲ್ಲಿ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಾಯದಿಂದ 50 ರನ್ ಗಳಿಸಿದರು. 16.3ನೇ ಓವರ್ನಲ್ಲಿ ಜಡೇಜಾ ಬೌಲಿಂಗ್ನಲ್ಲಿ ಸಿಕ್ಸರ್ ಭಾರಿಸಿದ ವಿರಾಟ್ ಐಪಿಎಲ್ ವೃತ್ತಿಜೀವನದಲ್ಲಿ ಒಟ್ಟು 200 ಸಿಕ್ಸರ್‌ಗಳ ಗಡಿ ಮುಟ್ಟಿದರು. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ (209) ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್.ಧೋನಿ (216) ಬಳಿಕ ಐಪಿಎಲ್‌ನಲ್ಲಿ 200 ಸಿಕ್ಸರ್‌ಗಳನ್ನು ಸಿಡಿಸಿದ ಮೂರನೇ ಭಾರತೀಯ ಆಟಗಾರ ಎಂಬ ಕೀರ್ತಿಗೆ ಪಾತ್ರರಾದ್ರು.
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ದಾಖಲೆ ವಿಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ (336) ಹೆಸರಲ್ಲಿದೆ. ಆರ್ಸಿಬಿ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್ಸ್ (231) ಎರಡನೇ ಸ್ಥಾನದಲ್ಲಿದ್ದಾರೆ. ನಂತರದಲ್ಲಿ ಧೋನಿ, ರೋಹಿತ್ ಮತ್ತು ವಿರಾಟ್ ಕೊಹ್ಲಿ ಮೂರು, ನಾಲ್ಕು ಮತ್ತು ಐದನೇ ಸ್ಥಾನ ಪಡೆದಿದ್ದಾರೆ.