ETV Bharat / sports

ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡ ರಾಜಸ್ಥಾನ್​​.. ಉಭಯ ತಂಡಗಳ ಆಟಗಾರರ ಮಾಹಿತಿ - ಐಪಿಎಲ್ 2020 ಮ್ಯಾಚ್ ಟುಡೇ

ಲೀಗ್ ಹಂತದ ಐಪಿಎಲ್ ಪಂದ್ಯಗಳು ಕೊನೆಯ ಹಂತಕ್ಕೆ ಬಂದಂತೆ ನಾಕ್​ಔಟ್​ ಹಂತಕ್ಕೆ ಯಾವ ತಂಡಗಳು ತಲುಪಲಿವೆ​ ಎಂಬ ಕುತೂಹಲ ಹೆಚ್ಚಾಗುತ್ತಿದೆ. ಅಬುಧಾಬಿಯಲ್ಲಿ ನಡೆಯುತ್ತಿರುವ ಪಂಜಾಬ್ ಮತ್ತು ರಾಜಸ್ಥಾನ ತಂಡಗಳಿಗೆ ಇಂದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

Rajasthan Royals won the toss, Rajasthan Royals won the toss and opt to bowl, IPL 2020, IPL 2020 news, IPL 2020 UAE, Kings Xi Punjab vs Rajasthan Royals, KXIP vs RR today, KXIP vs RR dream 11 team, ipl 2020 match 50, KXIP vs RR squad updates, ಟಾಸ್​ ಗೆದ್ದ ರಾಜಸ್ಥಾನ್​ ರಾಯಲ್ಸ್​, ಟಾಸ್​ ಗೆದ್ದ ರಾಜಸ್ಥಾನ್​ ರಾಯಲ್ಸ್​ ಬೌಲಿಂಗ್​ ಆಯ್ಕೆ, ಐಪಿಎಲ್ 2020, ಐಪಿಎಲ್ 2020 ನ್ಯೂಸ್, ಐಪಿಎಲ್ 2020 ಯುಎಇ, ಕಿಂಗ್ಸ್ ಇಲೆವೆನ್ ಪಂಜಾಬ್ vs ರಾಜಸ್ಥಾನ್ ರಾಯಲ್ಸ್ ರೈಡರ್ಸ್,  ಕಿಂಗ್ಸ್ ಇಲೆವೆನ್ ಪಂಜಾಬ್ vs ರಾಜಸ್ಥಾನ್ ರಾಯಲ್ಸ್ ಡ್ರೀಮ್ 11 ಟೀಮ್, ಐಪಿಎಲ್ 2020 ಮ್ಯಾಚ್ 50, ಐಪಿಎಲ್ 2020 ಮ್ಯಾಚ್ ಟುಡೇ, ಕಿಂಗ್ಸ್ ಇಲೆವೆನ್ ಪಂಜಾಬ್ vs ರಾಜಸ್ಥಾನ್ ರಾಯಲ್ಸ್ ಟೀಮ್ ಅಪ್ಡೇಟ್,
ಸಂಗ್ರಹ ಚಿತ್ರ
author img

By

Published : Oct 30, 2020, 7:04 PM IST

Updated : Oct 30, 2020, 7:12 PM IST

ಅಬುಧಾಬಿ: ಸತತ ಐದು ಗೆಲುವಿನೊಂದಿಗೆ ಪ್ಲೇ ಆಫ್​ ಆಸೆ ಜೀವಂತವಾಗಿರಿಸಿಕೊಂಡಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದಿದೆ. ಟಾಸ್​ ಗೆದ್ದಿರುವ ರಾಜಸ್ಥಾನ್​ ರಾಯಲ್ಸ್​ ತಂಡ ಬೌಲಿಂಗ್​ ಆಯ್ದುಕೊಂಡಿದೆ.

ಸತತ 5 ಸೋಲುಗಳ ಬಳಿಕ 5 ಪಂದ್ಯ ಗೆದ್ದಿರುವ ಪಂಜಾಬ್ ಗೆಲುವಿನ ಲಯ ಮುಂದುವರಿಸುವ ವಿಶ್ವಾಸದಲ್ಲಿದೆ. ಕಳೆದ ಪಂದ್ಯದಲ್ಲಿ ಕೆಕೆಆರ್ ಎದುರು ಪಂಜಾಬ್ ಸುಲಭದ ಜಯ ದಾಖಲಿಸಿತ್ತು. ಕ್ರಿಸ್ ಗೇಲ್ 11ರ ಬಳಗದಲ್ಲಿ ಸ್ಥಾನ ಪಡೆದ ನಂತರ ತಂಡದ ಅದೃಷ್ಟವೇ ಬದಲಾಗಿದೆ. ಮಯಾಂಕ್ ಅಗರ್ವಾಲ್ ಅಲಭ್ಯತೆಯಲ್ಲಿ ಮಂದೀಪ್ ಸಿಂಗ್ ಉತ್ತಮ ಪ್ರದರ್ಶನ ತೋರುತ್ತಿರುವುದು ತಂಡಕ್ಕೆ ಮತ್ತಷ್ಟು ಬಲ ತುಂಬಿದಂತಾಗಿದೆ.

ಮೊಹಮ್ಮದ್‌ ಶಮಿ ಮತ್ತು ರವಿ ಬಿಷ್ಣೋಯಿ, ಎಂ.ಅಶ್ವಿನ್, ಅರ್ಷ್​ದೀಪ್ ಸಿಂಗ್, ಕ್ರಿಸ್ ಜೋರ್ಡನ್ ಬೌಲಿಂಗ್​ನಲ್ಲಿ ಕಮಾಲ್ ಮಾಡುತ್ತಿದ್ದು, ಪಂಜಾಬ್​ಗೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜಸ್ಥಾನ ನೀರಸ ಪ್ರದರ್ಶನ...!

ಇತ್ತ ಬಲಿಷ್ಠ ಆಟಗಾರರನ್ನು ಹೊಂದಿದ್ದರೂ ನೀರಸ ಪ್ರದರ್ಶನದಿಂದಾಗಿ ರಾಜಸ್ಥಾನ ತಂಡ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಪ್ಲೇ ಆಫ್ ಹಂತಕ್ಕೇರಲು ಕೂದಲೆಳೆ ಅಂತರದ ಅವಕಾಶ ಹೊಂದಿದೆ. ರಾಜಸ್ಥಾನ ಕಳೆದ ಪಂದ್ಯದಲ್ಲಿ ಮುಂಬೈ ಎದುರು ಭರ್ಜರಿ ಜಯ ದಾಖಲಿಸಿತ್ತು. ಇಂದಿನ ಪಂದ್ಯ ರಾಜಸ್ಥಾನ ತಂಡಕ್ಕೆ ಬಹು ಮುಖ್ಯವಾಗಿದೆ. ಒಂದು ವೇಳೆ ಈ ಪಂದ್ಯ ಸೋತರೆ ಟೂರ್ನಿಯಿಂದ ಹೊರ ಬೀಳುವುದು ಬಹುತೇಕ ಖಚಿತವಾಗಿದೆ. ಬೌಲಿಂಗ್​ನಲ್ಲಿ ರಾಯಲ್ಸ್ ಉತ್ತಮ ಪ್ರದರ್ಶನ ತೋರಿದೆ. ಜೋಫ್ರಾ ಆರ್ಚರ್​, ಶ್ರೇಯಸ್ ಗೋಪಾಲ್, ರಾಹುಲ್ ತೆವಾಟಿಯಾ, ಕಾರ್ತಿಕ್ ತ್ಯಾಗಿ ಉತ್ತಮವಾಗಿ ಸ್ಪೆಲ್ ಮಾಡುತ್ತಿದ್ದಾರೆ. ಆದ್ರೂ ಸಹ ಅದೃಷ್ಟ ಜೊತೆ ರಾಜಸ್ಥಾನ ಆಟವಾಗಿದೆ.

ಇದುವರೆಗೂ ಉಭಯ ತಂಡಗಳು 20 ಬಾರಿ ಮುಖಾಮುಖಿಯಾಗಿದ್ದು, 11 ಪಂದ್ಯಗಳಲ್ಲಿ ರಾಜಸ್ಥಾನ ಗೆಲುವು ಸಾಧಿಸಿದ್ರೆ, 9 ಪಂದ್ಯಗಳಲ್ಲಿ ಪಂಜಾಬ್ ಜಯದ ನಗೆ ಬೀರಿದೆ. ಟಾಪ್ 4 ಹಂತದಲ್ಲಿ ಸ್ಥಾನ ಪಡೆಯುವ ಆಸೆ ಹೊಂದಿರುವ ರಾಜಸ್ಥಾನ ಮತ್ತು ಪಂಜಾಬ್ ತಂಡಗಳಿಗೆ ಇದು ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ. 12 ಪಂದ್ಯಗಳಿಂದ 12 ಅಂಕ ಹೊಂದಿರುವ ಪಂಜಾಬ್ ಪಾಯಿಂಟ್ಸ್ ಟೇಬಲ್​ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ರೆ, ರಾಜಸ್ಥಾನ ತಂಡ 10 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ. ಒಂದು ವೇಳೆ ರಾಜಸ್ಥಾನ ಈ ಪಂದ್ಯ ಗೆದ್ರೆ ನಾಲ್ಕು ಅಥವಾ ಐದನೇ ಸ್ಥಾನಕ್ಕೆ ಜಿಗಿಯಲಿದೆ.

ರಾಜಸ್ಥಾನ ರಾಯಲ್ಸ್​​:

ಬೆನ್​ ಸ್ಟೋಕ್ಸ್​, ಜೊಸ್​ ಬಟ್ಲರ್​​(ವಿ,ಕೀ), ಸ್ಮೀವ್​ ಸ್ಮಿತ್​(ಕ್ಯಾಪ್ಟನ್​), ಸಂಜು ಸ್ಯಾಮ್ಸನ್​, ರಾಬಿನ್​ ಉತ್ತಪ್ಪ, ಪರಾಗ್​, ರಾಹುಲ್​ ತೆವಾಟಿಯಾ, ಜೋಫ್ರಾ ಆರ್ಚರ್​​, ಶ್ರೇಯಸ್​ ಗೋಪಾಲ್​, ವರುಣ್​ ಅರೋನ್​​, ಕಾರ್ತಿಕ್​ ತ್ಯಾಗಿ.

ಕಿಂಗ್ಸ್​ ಇಲೆವೆನ್​​ ಪಂಜಾಬ್​​:

ಕೆ.ಎಲ್​ ರಾಹುಲ್​(ವಿ,ಕೀ/ಕ್ಯಾಪ್ಟನ್​), ಮನ್​ದೀಪ್​ ಸಿಂಗ್​​, ಕ್ರಿಸ್​ ಗೇಲ್​, ನಿಕೊಲಸ್​ ಪೂರನ್​, ಮ್ಯಾಕ್ಸ್​ವೆಲ್​, ದೀಪಕ್​ ಹೂಡಾ, ಮುರುಗನ್​​ ಅಶ್ವಿನ್​​, ಕ್ರಿಸ್ ಜೋರ್ಡನ್​, ರವಿ ಬಿಸ್ನೋಯ್​, ಮೊಹಮ್ಮದ್​ ಶಮಿ, ಅರ್ಷದೀಪ್ ಸಿಂಗ್​​.

Last Updated : Oct 30, 2020, 7:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.