ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ನ ಇಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗುತ್ತಿದ್ದು, ಟಾಸ್ ಗೆದ್ದಿರುವ ಸ್ಟೀವ್ ಸ್ಮಿತ್ ಪಡೆ ಬ್ಯಾಟಿಂಗ್ ಆಯ್ದುಕೊಂಡಿದೆ.
ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ. ಬೆಂಗಳೂರು ತಂಡದಲ್ಲಿ ಕೇವಲ ಒಂದು ಬದಲಾವಣೆ ಮಾಡಲಾಗಿದೆ.ಆರ್ಸಿಬಿ ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಪಂದ್ಯ ಗೆದ್ದಿರುವ ಬೆಂಗಳೂರು ತಂಡ ಉತ್ತಮ ಸ್ಥಿತಿಯಲ್ಲಿದೆ. ರಾಜಸ್ಥಾನ ಕೂಡ ಆಡಿರುವ 3 ಪಂದ್ಯಗಳಲ್ಲಿ ಎರಡಲ್ಲಿ ಗೆಲುವು ಸಾಧಿಸಿದ್ದು, ಕಳೆದ ಪಂದ್ಯದಲ್ಲಿ ಕೋಲ್ಕತ್ತಾ ವಿರುದ್ಧ ಸೋಲು ಕಂಡಿತ್ತು.
-
Steve Smith wins the toss and elects to bat first against #RCB.#Dream11IPL #RCBvRR pic.twitter.com/ZYLtMIVYQG
— IndianPremierLeague (@IPL) October 3, 2020 " class="align-text-top noRightClick twitterSection" data="
">Steve Smith wins the toss and elects to bat first against #RCB.#Dream11IPL #RCBvRR pic.twitter.com/ZYLtMIVYQG
— IndianPremierLeague (@IPL) October 3, 2020Steve Smith wins the toss and elects to bat first against #RCB.#Dream11IPL #RCBvRR pic.twitter.com/ZYLtMIVYQG
— IndianPremierLeague (@IPL) October 3, 2020
ಇನ್ನು ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು 21 ಬಾರಿ ಮುಖಾಮುಖಿಯಾಗಿದ್ದು, 10 ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್ ಜಯ ಗಳಿಸಿದ್ರೆ, 8 ಪಂದ್ಯಗಳಲ್ಲಿ ಆರ್ಸಿಬಿ ಗೆಲುವು ಕಂಡಿದ್ದು, ಮೂರು ಪಂದ್ಯಗಳು ಫಲಿತಾಂಶ ಕಂಡಿಲ್ಲ.
ಉಭಯ ತಂಡಗಳು ಇಂತಿವೆ
ಬೆಂಗಳೂರು: ದೇವದತ್ ಪಡಿಕ್ಕಲ್, ಆ್ಯರೊನ್ ಫಿಂಚ್,ವಿರಾಟ್ ಕೊಹ್ಲಿ(ಕ್ಯಾಪ್ಟನ್), ಎಬಿ ಡಿವಿಲಿಯರ್ಸ್(ವಿ.ಕೀ), ಶಿವಂ ದುಬೆ,ಗುರುಕೀರತ್ ಸಿಂಗ್, ವಾಷಿಂಗ್ಟನ್ ಸುಂದರ್,ಇರುಸು ಉದಾನ್,ನವದೀಪ್ ಸೈನಿ, ಆಡಂ ಜಂಪಾ, ಯಜುವೇಂದ್ರ ಚಹಾಲ್,
ರಾಜಸ್ಥಾನ ತಂಡ: ಜೋಸ್ ಬಟ್ಲರ್(ವಿ.ಕೀ),ಸ್ಟೀವ್ ಸ್ಮಿತ್(ಕ್ಯಾಪ್ಟನ್), ಸಂಜು ಸ್ಯಾಮ್ಸನ್, ರಾಬಿನ್ ಉತ್ತಪ್ಪ, ಪರಾಗ್, ರಾಹುಲ್ ತೆವಾಟಿಯಾ,ಮಹಿಪಾಲ್, ಟಾಮ್ ಕರನ್, ಶ್ರೇಯಸ್ ಗೋಪಾಲ್, ಜೋಪ್ರಾ ಆರ್ಚರ್, ಉನ್ಕಾದತ್