ETV Bharat / sports

ಇಂದಿನ ಪಂದ್ಯದಲ್ಲಿ ಆರ್​ಸಿಬಿ ಸೋತರೆ ಮುಂದೆ ಏನು? ಇಲ್ಲಿದೆ ಲೆಕ್ಕಾಚಾರ - ಪ್ಲೇ-ಆಫ್ ಲೇಕ್ಕಾಚಾರ

ಸತತ 3 ಪಂದ್ಯಗಳಲ್ಲಿ ಸೋಲು ಕಂಡು ಸಂಕಷ್ಟಕ್ಕೆ ಸಿಲುಕಿರುವ ಆರ್​ಸಿಬಿ ತಂಡ ಪ್ಲೇ-ಆಫ್​ ಸುತ್ತಿಗೆ ಅರ್ಹತೆ ಪರೆಯಲು ಇಂದಿನ ಪಂದ್ಯ ಗೆಲ್ಲಬೇಕಿದೆ ಇಲ್ಲವಾದರೆ, ಮತ್ತೊಬ್ಬರ ಸೋಲಿಗೆ ಬೆಂಗಳೂರು ಅಭಿಮಾನಿಗಳು ಪ್ರಾರ್ಥಿಸಬೇಕಿದೆ..

IPL 2020 Play-offs Qualification Scenarios
ರಾಯಲ್ ಚಾಲೆಂಜರ್ಸ್ ಬೆಂಗಳೂರು
author img

By

Published : Nov 2, 2020, 12:55 PM IST

ಅಬುಧಾಬಿ: ಐಪಿಎಲ್ ಟೂರ್ನಿಯ ಆರಂಭದಿಂದ ಉತ್ತಮ ಪ್ರದರ್ಶನ ತೋರಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂತಿಮ ಹಂತದಲ್ಲಿ ತನ್ನ ಹಳೆಯ ಚಾಳಿ ಮುಂದುವರೆಸಿದೆ. ಸತತ 3 ಪಂದ್ಯಗಳಲ್ಲಿ ಸೋಲು ಕಂಡು ಸಂಕಷ್ಟಕ್ಕೆ ಸಿಲುಕಿದೆ.

ಇಂದಿನ ಪಂದ್ಯ ಕೇವಲ ಆರ್​ಸಿಬಿಗೆ ಮಾತ್ರವಲ್ಲ ಡೆಲ್ಲಿ ತಂಡಕ್ಕೂ ನಿರ್ಣಾಯಕವಾಗಿದೆ. ಯಾವ ತಂಡ ಸೋತರೂ ನಾಳೆ ನಡೆಯುವ ಹೈದರಾಬಾದ್ ಮತ್ತು ಮುಂಬೈ ಪಂದ್ಯದ ಫಲಿತಾಂಶದ ಮೇಲೆ ಪ್ಲೇ-ಆಫ್ ಹಣೆಬರಹ ನಿರ್ಧಾರವಾಗಲಿದೆ.

ಆರ್​ಸಿಬಿ ಮತ್ತು ಡೆಲ್ಲಿ ತಂಡ ತಲಾ 14 ಪಾಯಿಂಟ್ಸ್​ಗಳೊಂದಿಗೆ ಅಂಕಪಟ್ಟಿಯಲ್ಲಿ ಕ್ರಮವಾಗಿ ಎರಡು ಮತ್ತು 3ನೇ ಸ್ಥಾನದಲ್ಲಿವೆ. ಇಂದು ಗೆದ್ದ ತಂಡ 16 ಪಾಯಿಂಟ್ಸ್​ನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆಯಲಿದೆ. ಸೋತ ತಂಡದ ರನ್​ರೇಟ್, ಪ್ಲೇ-ಆಫ್​ ಅರ್ಹತೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.

IPL 2020 Play-offs Qualification Scenarios
ರಾಯಲ್ ಚಾಲೆಂಜರ್ಸ್ ಬೆಂಗಳೂರು

ಆರ್​ಸಿಬಿ ಸೋತರ ಮುಂದೆ ಏನು?

ಒಂದು ವೇಳೆ ಆರ್​ಸಿಬಿ ತಂಡ ಇಂದಿನ ಪಂದ್ಯದಲ್ಲಿ ಸೋಲು ಕಂಡರೆ​ ರನ್​ರೇಟ್ ಆಧಾರದ ಮೇಲೆ ಮೂರು ಅಥವಾ 4ನೇ ಸ್ಥಾನಕ್ಕೆ ಕುಸಿಯಲಿದೆ. ಸೋಲಿನ ಅಂತರ ಕಡಿಮೆಯಾದಷ್ಟೂ ಆರ್​ಸಿಬಿ ತಂಡ ಸೇಫ್​ ಆಗಲಿದೆ. ಒಂದು ವೇಳೆ ಕೋಲ್ಕತ್ತಾ ತಂಡಕ್ಕಿಂತ ಕಳಪೆ ರನ್​ರೇಟ್​ ಹೊಂದಿದ್ರೆ, ಆರ್​ಸಿಬಿ ಅಭಿಮಾನಿಗಳು ಹೈದರಾಬಾದ್​ ಸೋಲಿಗೆ ಪ್ರಾರ್ಥಿಸಬೇಕಾಗುತ್ತದೆ.

ಆರ್​ಸಿಬಿ ಸೋತು, ಹೈದರಾಬಾದ್ ಗೆದ್ದರೆ :

ಇಂದಿನ ಪಂದ್ಯದಲ್ಲಿ ಬೆಂಗಳೂರು ತಂಡ ಸೋಲು ಕಂಡು, ನಾಳಿನ ಪಂದ್ಯದಲ್ಲಿ ಹೈದರಾಬಾದ್​ ಗೆದ್ದರೂ ಆರ್​ಸಿಬಿಗೆ ಫ್ಲೇ-ಆಫ್​ ಸುತ್ತಿನಲ್ಲಿ ಸ್ಥಾನ ಸಿಗಲಿದೆ. ಹೇಗೆ ಅಂದ್ರೆ, ಡೆಲ್ಲಿ ವಿರುದ್ಧ ಕಡಿಮೆ ಅಂತರದಲ್ಲಿ ಪಂದ್ಯ ಸೋಲಬೇಕು. ಕೋಲ್ಕತ್ತಾಗಿಂದ ಉತ್ತಮ ರನ್​ರೇಟ್​ ಹೊಂದಿದ್ರೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಅರ್ಹತೆ ಗಿಟ್ಟಿಸಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.