ETV Bharat / sports

‘ಐಪಿಎಲ್​​​​ನಲ್ಲಿ ನನ್ನ ಪಾತ್ರ ಏನೆಂಬುದೇ ಗೊತ್ತಾಗುತ್ತಿಲ್ಲ’: ಮ್ಯಾಕ್ಸ್​ವೆಲ್ ಬೇಸರ

ಐಪಿಎಲ್​​​ನಲ್ಲಿ ನನ್ನ ಪಾತ್ರವು ಎಲ್ಲ ಆಟಗಳಿಗೂ ಬದಲಾಗುತ್ತದೆ. ಎಲ್ಲ ತಂಡಗಳು ತಮ್ಮ ಆಟಗಾರರನ್ನು ಬದಲಾಯಿಸುತ್ತವೆ. ಆದರೆ, ಆಸ್ಟ್ರೇಲಿಯಾ ತಂಡದಲ್ಲಿ ಹಲವು ಮ್ಯಾಚ್​​​​, ಸರಣಿಗಳಿಗೆ ಅದೇ ಆಟಗಾರರು ಮುಂದುವರಿಯುತ್ತಿದ್ದರು. ಅಲ್ಲಿ ನಮ್ಮ ಪಾತ್ರಗಳನ್ನು ನಾವು ಚೆನ್ನಾಗಿ ಅರಿತಿದ್ದೆವು ಎಂದಿದ್ದಾರೆ.

glenn-maxwell
ಕಿಂಗ್ಸ್​ ಇಲೆವೆನ್ ತಂಡದ ಆಟಗಾರ ಗ್ಲೇನ್ ಮ್ಯಾಕ್ಸ್​ವೆಲ್​​
author img

By

Published : Oct 14, 2020, 8:41 AM IST

ಹೈದರಾಬಾದ್: ಈ ಬಾರಿಯ ಐಪಿಎಲ್​ನಲ್ಲಿ ದಿಗ್ಗಜ ಬ್ಯಾಟ್ಸ್​​ಮನ್​​ಗಳು ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲ. ಬದಲಾಗಿ ಯುವಕರು ಮಾತ್ರ ವಿಶ್ವ ಅಗ್ರ ಬ್ಯಾಟ್ಸ್​​​ಮನ್​​ಗಳಿಗೆ ಸೆಡ್ಡು ಹೊಡೆಯುವಂತೆ ಬ್ಯಾಟ್​​ ಬೀಸುತ್ತಿದ್ದಾರೆ.

ಇನ್ನು ಕಿಂಗ್ಸ್ ಇಲೆವೆನ್ ಪಂಜಾಬ್​ ತಂಡದ ಸಿಕ್ಸ್​​ರ್ ಕಿಂಗ್​ ಅಂತಾನೆ ಕರೆಸಿಕೊಳ್ಳುತ್ತಿದ್ದ ಗ್ಲೇನ್ ಮ್ಯಾಕ್ಸ್​ವೆಲ್​ ಈ ಬಾರಿಯ ಐಪಿಎಲ್​ನಲ್ಲಿ ಅಬ್ಬರಿಸದೇ ಮಂಕಾಗಿದ್ದಾರೆ. ಐಪಿಎಲ್​​​​​​ಗೂ ಮುನ್ನಾ ಇಂಗ್ಲೆಂಡ್ ವಿರುದ್ಧದ ಸರಣಿಯ ಮ್ಯಾಚ್​​ನಲ್ಲಿ 90 ಎಸೆತದಲ್ಲಿ 108ರನ್ ಬಾರಿಸಿ ಮಿಂಚಿದ್ದರು. ಆದರೆ, ಐಪಿಎಲ್ ಟೂರ್ನಿಯಲ್ಲಿ ಫಾರ್ಮ್ ಕಳೆದುಕೊಂಡಿದ್ದು, ತಂಡಕ್ಕೆ ಅಗತ್ಯ ರನ್​ಗಳ ಕೊಡುಗೆ ನೀಡುವಲ್ಲಿ ವಿಫಲರಾಗುತ್ತಿದ್ದಾರೆ.

ಇನ್ನು ಈ ಕುರಿತು ಮಾತನಾಡಿರುವ ಗ್ಲೇನ್ ಮ್ಯಾಕ್ಸ್​ವೆಲ್​, ಆಸ್ಟ್ರೇಲಿಯಾದಲ್ಲಿ ಆಡುವಾಗಿನ ಸಾಮರ್ಥ್ಯ ಹಾಗೂ ಐಪಿಎಲ್​​ ಬ್ಯಾಟಿಂಗ್ ಕುರಿತು ವಿವರಿಸಿದ್ದಾರೆ. ‘ನಾನು ಐಪಿಎಲ್ ಹಾಗೂ ಅಂತಾ ರಾಷ್ಟ್ರೀಯ ಕ್ರಿಕೆಟ್​ ಜೀವನಕ್ಕೆ ಹೋಲಿಕೆ ಮಾಡುವುದಿಲ್ಲ. ನಾನು ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ರೀತಿ ಅದು ಹೆಚ್ಚು ಸ್ಪಷ್ಟವಾಗಿದೆ ಎಂದಿದ್ದಾರೆ.

ಐಪಿಎಲ್​​​ನಲ್ಲಿ ನನ್ನ ಪಾತ್ರವು ಎಲ್ಲಾ ಆಟಗಳಿಗೂ ಬದಲಾಗುತ್ತದೆ. ಎಲ್ಲ ತಂಡಗಳು ತಮ್ಮ ಆಟಗಾರರನ್ನು ಬದಲಾಯಿಸುತ್ತವೆ. ಆದರೆ ಆಸ್ಟ್ರೇಲಿಯಾ ತಂಡದಲ್ಲಿ ಹಲವು ಮ್ಯಾಚ್​​​​, ಸರಣಿಗಳಿಗೆ ಅದೇ ಆಟಗಾರರು ಮುಂದುವರಿಯುತ್ತಿದ್ದರು. ಅಲ್ಲಿ ನಮ್ಮ ಪಾತ್ರಗಳನ್ನು ನಾವು ಚೆನ್ನಾಗಿ ಅರಿತಿದ್ದೆವು. ಐಪಿಎಲ್​​​​ನಲ್ಲಿ ನನ್ನ ಪಾತ್ರ ಏನೆಂಬುದೇ ಗೊತ್ತಾಗುತ್ತಿಲ್ಲ ಎಂದಿದ್ದಾರೆ.

ನೀವು ಐಪಿಎಲ್​ನಲ್ಲಿ ಒಂದು ಸಮತೋಲನವಾದ ತಂಡವನ್ನು ರಚಿಸಲು ಯತ್ನಿಸುತ್ತೀರಿ. ಇಲ್ಲಿ ಆಟಗಾರರ ಬದಲಾವಣೆ, ತಂಡದಿಂದ ಕೈಬಿಡುವುದು ನಡೆದಿರುತ್ತದೆ. ಪಂದ್ಯಾವಳಿಯ ಆರಂಭದಲ್ಲಿ ನೀವು ಆರಿಸಿದ ತಂಡ ಟೂರ್ನಿ ಪ್ರಗತಿಯಲ್ಲಿದ್ದಾಗ ನೀವು ಯೋಚಿಸದಷ್ಟು ಸಮತೋಲನದಿಂದ ಇರುವುದಿಲ್ಲ ಎಂದಿದ್ದಾರೆ.

ಕಳೆದ ವರ್ಷ ಮಾನಸಿಕ ಸಮಸ್ಯೆ ಎದುರಿಸುತ್ತಿದ್ದ ಮಾಕ್ಸಿ ಬಳಿಕ ಚೇತರಿಸಿಕೊಂಡು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದರು. ಇನ್ನು 13ನೇ ಆವೃತ್ತಿಯ ಐಪಿಎಲ್​​​ನಲ್ಲಿ ಈವರೆಗೆ ಆಡಿದ 7 ಪಂದ್ಯಗಳಲ್ಲಿ 14.50ರ ಸರಾಸರಿಯಲ್ಲಿ 58 ರನ್​​ ಗಳಿಸಿದ್ದಾರೆ.

ಆಸ್ಟ್ರೇಲಿಯಾ ತಂಡದಲ್ಲಿನ ಅವರ ಅಬ್ಬರದ ಆಟ ಕಂಡು ಐಪಿಎಲ್​​ ಹರಾಜಿನಲ್ಲಿ ಭರವಸೆ ಮೂಡಿಸಿದ್ದರು. ಇದಲ್ಲದೇ ಇತ್ತೀಚಿಗೆ ನಡೆದ ಕೆಎಕ್ಸ್​​​​​ಐಪಿ ಹರಾಜಿನಲ್ಲಿ 10.75 ಕೋಟಿ ರೂಪಾಯಿಗೆ ಹರಾಜಾಗಿ ಅಚ್ಚರಿ ಸಹ ಮೂಡಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.