ಅಬುಧಾಬಿ: ಹಿಂದಿನ ವರ್ಷದ ಚಾಂಪಿಯನ್ಸ್ ಮುಂಬೈ ಹಾಗೂ ರನ್ನರ್‌ಅಪ್ ಚೆನ್ನೈ ಸೂಪರ್ ಕಿಂಗ್ಸ್ ಇಂದು ಸಂಜೆ 7.30ಕ್ಕೆ ಶೇಕ್ ಜಾಯೀದ್ ಸ್ಟೇಡಿಯಂ ನಡೆಯಲಿರುವ ಐಪಿಎಲ್ 13ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಸೆಣೆಸಾಡಲಿವೆ.
ಐಪಿಎಲ್ ಎರಡು ಬಲಿಷ್ಠ ತಂಡಗಳ ತನ್ನದೇ ಆದ ಬಹುದೊಡ್ಡ ಅಭಿಮಾನಿಗಳ ಬಳಗವನ್ನು ಹೊಂದಿವೆ. ಕೋವಿಡ್-19ನಿಂದಾಗಿ ಪ್ರೇಕ್ಷಕರಿಲ್ಲದೆ ಖಾಲಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿವೆ.
ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹಿಟ್‌ಮ್ಯಾನ್ ರೋಹಿತ್ ಶರ್ಮಾ ಮುಂದಾಳತ್ವದ ಮುಂಬೈ ಇಂಡಿಯನ್ಸ್ ತಂಡಗಳು ಅಭಿಮಾನಗಳು ಕೂಗಾಟ, ಚೀರಾಟ, ಸಿಳ್ಳೆ-ಚಪ್ಪಾಳೆಗಳಿಂದ ವಂಚಿತವಾಗಲಿವೆ.
ಇತ್ತೀಚೆಗಷ್ಟೇ ಸಿಎಸ್‌ಕೆಗೆ 2 ದೊಡ್ಡ ಹೊಡೆತ ಬಿದ್ದಿವೆ. ಸ್ಫೋಟಕ ಆಟಗಾರ ಸುರೇಶ್ ರೈ ಮತ್ತು ಹರ್ಭಜನ್ ಸಿಂಗ್ ವೈಯಕ್ತಿಕ ಕಾರಣಗಳನ್ನು ನೀಡಿ ಟೂರ್ನಿಯನ್ನು ಹೊರಗುಳಿದಿದ್ದಾರೆ. ಕೂಲ್ ಕ್ಯಾಪ್ಟನ್ ಅಂತಲೇ ಖ್ಯಾತಿಗಳಿಸಿರುವ ಎಂಎಸ್ ಧೋನಿ ಇಬ್ಬರು ಆಟಗಾರರ ಅನುಪಸ್ಥತಿಯನ್ನು ಹೇಗೆ ತುಂಬಲಿದ್ದಾರೆ ಎನ್ನೋದನ್ನ ಕಾದುನೋಡಬೇಕಿದೆ.
ಋತುರಾಜ್ ಗಾಯಕ್ವಾಡ್ ಕೂಡ ಕ್ಯಾಂಪೇನ್‌ನಿಂದ ಹೊರಗುಳಿದಿದ್ದಾರೆ. ಕೇದಾರ್ ಜಾಧವ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುವ ಸಾಧ್ಯತೆ ಇದೆ. ಫಾಫ್ ಡುಫ್ಲೆಸೀಸ್ ಮತ್ತು ವಾಟ್ಸನ್ ಆರಂಭಿಕರಾಗಿ ಚೆನ್ನೈ ಪರ ಕಣಕ್ಕಿಳಿಯಲಿದ್ದಾರೆ. ವಿದೇಶಿ ಆಟಗಾರರ ಜೊತೆಗೆ 11ರೊಳಗೆ ಗುರುತಿಸಿಕೊಂಡಿರುವ ಇತರೆ ಆಟಗಾರ ಬ್ಯಾಟಿಂಗ್ ಕ್ರಮಾಂಕವನ್ನು ಟೀಂ ಮ್ಯಾನೇಜ್‌ಮೆಂಟ್ ಬದಲಾಯಿಸಿದರು ಅಚ್ಚರಿ ಪಡಬೇಕಿಲ್ಲ. 11ರ ಬಳಗದಲ್ಲಿ ನಾಲ್ವರು ಮಾತ್ರ ವಿದೇಶಿ ಆಟಗಾರರಿಗೆ ಅವಕಾಶ ಇರುವುದರಿಂದ ಈ ತಂಡದಲ್ಲಿ ಬ್ರಾವೊ ಮತ್ತು ವಾಟ್ಸನ್ ಸ್ಟಾರ್ ಆಟಗಾರರೇ ಆಗಿದ್ದಾರೆ.
ಮುಂಬೈ ತಂಡದ ಸಾಮರ್ಥ್ಯ ನೋಡುವುದಾದರೆ
ರೋಹಿತ್ ಶರ್ಮಾ
4ನೇ ಬಾರಿ ಐಪಿಎಲ್ ವಿನ್ನರ್ ಕ್ಯಾಪ್ಟನ್ ಎಂಬ ಹೆಗ್ಗಳಿಕೆ ಹೊಂದಿರುವ ಹಿಟ್ ಮ್ಯಾನ್ ರೋಹಿತ್ ಮುಂಬೈ ತಂಡದ ಶಕ್ತಿಯಾಗಿದ್ದಾರೆ. ಈಗಾಗಲೇ ರೋಹಿತ್ ಆರಂಭಿಕರಾಗಿ ಕಣಕ್ಕಿಯುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಆರಂಭದಲ್ಲೇ ಅವರು ಅಬ್ಬರಿಸುವ ಮುನ್ಸೂಚನೆ ನೀಡಿದ್ದಾರೆ.
ಜಸ್ಪ್ರೀತ್ ಬುಮ್ರಾ
ಪ್ರಸ್ತುತ ಕ್ರಿಕೆಟ್ ಜಗತ್ತಿನಲ್ಲೇ ಜಸ್ಪ್ರೀತ್ ಬುಮ್ರಾ ಡೆತ್ ಬೌಲರ್ ಎನಿಸಿಕೊಂಡಿದ್ದಾರೆ. ಬುಮ್ರಾ ಅವರ ಒಂದೊಂದು ಎಸೆತವೂ ಮುಂಬೈನ ಫಲಿತಾಂಶ ತಂದುಕೊಡುವಲ್ಲಿ ಯಾವುದೇ ಅನುಮಾನ ಇಲ್ಲ. ಕೇವಲ 77 ಪಂದ್ಯಗಳಲ್ಲಿ 82 ವಿಕೆಟ್‌ಗಳನ್ನು ಪಡೆದಿದ್ದಾರೆ. 7.56ರಷ್ಟು ಸರಾಸರಿಯನ್ನು ಹೊಂದಿದ್ದಾರೆ.
ಹಾರ್ದಿಕ್ ಪಾಂಡ್ಯ
ಕಳೆದೊಂದು ವರ್ಷದಿಂದ ಹಾರ್ದಿಕ್ ಪಾಂಡ್ಯರನ್ನು ಕ್ರಿಕೆಟ್ ಆಂಗಳದಲ್ಲಿ ಕಂಡಿಲ್ಲ. ಆದ್ರೂ ಕೂಟ ಪಾಂಡ್ಯ ಯಾವುದೇ ಕ್ಷಣದಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ತನ್ನ ಆಲ್‌ರೌಂಡ್ ಆಟದ ಮೂಲಕ ಗಮನ ಸೆಳೆಯುವ ಮುಂಬೈಕರ್ ಆಗಿದ್ದಾರೆ. ಐಪಿಎಲ್‌ನಲ್ಲಿ 1066ರನ್ ಗಳಿಸಿ 42 ವಿಕೆಟ್ ಪಡೆದಿದ್ದಾರೆ.
ಕೃನಾಲ್ ಪಾಂಡ್ಯ
ಎಡಗೈ ಬ್ಯಾಟಿಂಗ್ ಹಾಗೂ ಆಲ್‌ರೌಂಡರ್ ಆಗಿರುವ ಕೃನಾಲ್ ಪಾಂಡ್ಯ ಮುಂಬೈ ತಂಡಕ್ಕೆ ಗೆಲುವು ತಂದುಕೊಡಬಲ್ಲ ವಿಶ್ವಾಸರ್ಹ ಆಟಗಾರ. ಉತ್ತಮ ಫೀಲ್ಡಿಂಗ್ ಮತ್ತು ಬೌಲಿಂಗ್ ಮಾಡಲಿದ್ದಾರೆ. ಮುಂಬೈ ಪರ 891 ರನ್‌ಗಳಿಸಿ 40 ವಿಕೆಟ್‌ಗಳನ್ನು ಪಡೆದಿದ್ದಾರೆ.
ಕಿರಾನ್ ಪೊಲಾರ್ಡ್
ಸಿಪಿಎಲ್ ವಿನ್ನಿಂಗ್ ಕ್ಯಾಪ್ಟನ್ ಪೊಲಾರ್ಡ್ ಇದೀಗ ಮುಂಬೈ ತಂಡಕ್ಕೆ ಆಗಮಿಸಿದ್ದಾರೆ. ಈಚೆಗೆ ಮುಕ್ತಾಯವಾದ ಸಿಪಿಎಲ್‌ನಲ್ಲಿ ಉತ್ತಮ ಆಟದ ಮೂಲಕ ಗಮನ ಸೆಳಿದ್ದಾರೆ. ಮುಂಬೈ ತಂಡಕ್ಕೆ ಅತಿ ಮುಖ್ಯವಾಗಿ ಬೇಕಾಗಿರುವ ಫಿನೀಷರ್ ಕೂಡ ಆಗಿದ್ದಾರೆ.
ಚೆನ್ನೈ ತಂಡದ 'ಸೂಪರ್ ಕಿಂಗ್ಸ್' ಇವರು
ಎಂ.ಎಸ್.ಧೋನಿ
ಐಪಿಲ್‌ನಲ್ಲಿ ಯಶಸ್ವಿನಾಯಕರಲ್ಲಿ ಎಂಎಸ್ ಧೋನಿ ಕೂಡ ಒಬ್ಬರು. ಸುರೈಶ್ ರೈನಾ ಅವರು ಅನುಪಸ್ಥಿತಿಯಿಂದಾಗಿ ಸಿಎಸ್‌ಕೆಗೆ ಅತಿ ದೊಡ್ಡ ಬಲವೇ ಧೋನಿ. ಮಧ್ಯಮ ಕ್ರಮಾಂಕದಲ್ಲಿ ರೈನಾ ಅವರ ಕೊರೆತೆಯನ್ನು ಕೂಲ್ ಕ್ಯಾಪ್ಟನ್ ನೀಗಿಸುವ ಭರವಸೆ ಈ ತಂಡಕ್ಕಿದೆ.
ಶೇನ್ ವ್ಯಾಟ್ಸನ್
ಸಿಎಸ್‌ಕೆ ತಂಡದ ಪರ ಶೇನ್ ವ್ಯಾಟ್ಸನ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕಪ್ ಜಯಿಸಲು ವ್ಯಾಟ್ಸನ್ ಪಾತ್ರ ಮಹತ್ವದಾಗಿದೆ. ಈತನ ಬ್ಯಾಟಿಂಗ್ ಮೇಲೆ ಧೋನಿ ಪಡೆ ಹೆಚ್ಚು ಅವಲಂಬಿಸಿದೆ ಎಂದರೆ ತಪ್ಪಾಗಲಾರದರು.
ಇಮ್ರಾನ್ ತಾಹೀರ್
ಯುಎಇಯಲ್ಲಿನ ಪಿಚ್‌ಗಳು ಸ್ಪಿನ್ನರ್‌ಗಳಿಗೆ ಅನುಕೂಲರವಾಗಿವೆ. ಹೀಗಾಗಿ ಸಿಎಸ್‌ಕೆ ಪರ ಕಣಕ್ಕಿಳಿಯಲಿರುವ ತಾಹೀರ್ ಹೆಚ್ಚು ವಿಕೆಟ್‌ಗಳನ್ನು ತರಬಲ ಆಟಗಾರ. ಹರ್ಭಜನ್ ಸಿಂಗ್ ಅನುಪಸ್ಥಿತಿ ತಾಹೀರ್ ಮೇಲೆ ಒತ್ತಡ ಹೆಚ್ಚಲಿದೆ ಎನ್ನಲಾಗಿದೆ. ಈಗಾಗಲೇ 7.88 ಸರಾಸರಿಯಲ್ಲಿ 79 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಡ್ವೇನ್ ಬ್ರಾವೊ
ಸಿಪಿಎಲ್ ವಿನ್ನಿಂಗ್ ತಂಡದ ಸದಸ್ಯನಾಗಿರುವ ಡ್ವೇನ್ ಬ್ರಾವೊ ಉತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರು. ಐಪಿಎಲ್‌ನಲ್ಲಿ 147 ವಿಕೆಟ್ ಉರುಳಿಸಿ 1483ರನ್ ಗಳಿಸಿದ್ದಾರೆ.
ರವೀಂದ್ರ ಜಡೇಜಾ
ಜಡೇಜಾ ಅವರ ಸ್ಪಿನ್ ಬೌಲಿಂಗ್ ಸಿಎಸ್‌ಕೆ ತಂಡಕ್ಕೆ ವಿಕೆಟ್ ತಂದುಕೊಡಬಲ್ಲದು. ಈಗಾಗಲೇ ಐಪಿಎಲ್‌ನಲ್ಲಿ 108 ವಿಕೆಟ್ ಪಡೆದು, 1927 ರನ್ ಗಳಿಸಿ ಗಮನ ಸೆಳೆದಿದ್ದಾರೆ.
ಒಟ್ಟಾರೆ ಉಭಯ ತಂಡಗಳು ಬಲಿಷ್ಠವಾಗಿದ್ದು, ಇಂದಿನ ಉದ್ಘಾಟನಾ ಪಂದ್ಯದಲ್ಲಿ ಯಾರು ಗೆಲುವಿನೊಂದಿಗೆ ಟೂರ್ನಿ ಆರಂಭಿಸಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಿದೆ.