ದುಬೈ: ದೆಹಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ 44 ರನ್ಳಿಂದ ಸೋಲು ಅಭವಿಸಿದ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅಂಬಟಿ ರಾಯುಡು ಅವರ ಅನುಪಸ್ಥಿತಿ ಬಗ್ಗೆ ಮಾತನಾಡಿದ್ದಾರೆ.
ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಸಿಎಸ್ಕೆ ಐದು ವಿಕೆಟ್ಗಳ ಜಯ ದಾಖಲಿಸಿತ್ತು. ಈ ಪಂದ್ಯದಲ್ಲಿ ರಾಯುಡು 48 ಎಸೆತಗಳಲ್ಲಿ 71 ರನ್ ಗಳಿಸಿದರು. ಆದರೆ ಮಂಡಿ ಗಾಯದಿಂದಾಗಿ ರಾಯುಡು ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ.
ಪಂದ್ಯದ ಬಳಿಕ ಮಾತನಾಡಿರುವ ನಾಯಕ ಎಂ.ಎಸ್.ಧೋನಿ, 'ಅಂಬಟಿ ರಾಯುಡು ಅನುಪಸ್ಥಿತಿಯಿಂದಾಗಿ ಬ್ಯಾಟಿಂಗ್ ವಿಭಾಗದಲ್ಲಿ ಉತ್ಸಾಹ ಕಾಣಿಸುತ್ತಿಲ್ಲ,’ ಎಂದಿದ್ದಾರೆ.
ನಾವು ಹಳಿಗೆ ಮರಳಬೇಕಾಗಿದೆ. ಉತ್ತಮ ಬ್ಯಾಟಿಂಗ್ ಸಂಯೋಜನೆಯನ್ನು ಎದುರು ನೋಡುತ್ತಿದ್ದೇವೆ. ಮುಂದಿನ ಪಂದ್ಯದಲ್ಲಿ ರಾಯಡು ಹಿಂತಿರುಗಿದರೆ ತಂಡದಲ್ಲಿ ಸಮತೋಲನ ಸಾಧಿಸಬಹುದು ಎಂದು ಮುಂದಿನ ಪಂದ್ಯಕ್ಕೆ ರಾಯುಡು ಲಭ್ಯವಾಗುವ ಭರವಸೆ ವ್ಯಕ್ತಪಡಿಸಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ತರಬೇತುದಾರ ಸ್ಟೀಫನ್ ಫ್ಲೆಮಿಂಗ್, ನಾವು ಕೆಲವು ಪ್ರಮುಖ ಆಟಗಾರರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಬ್ಯಾಟಿಂಗ್ ಲೈನಪ್ನಲ್ಲಿ ಅಂಬಾಟಿ ರಾಯುಡು ಮತ್ತು ಸುರೇಶ್ ರೈನಾ ಇಲ್ಲದಿರುವುದು ದೊಡ್ಡ ನಷ್ಟವಾಗಿದೆ. ಆಟಗಾರರನ್ನು ಹೇಗೆ ಬಳಸುವುದು ಎಂಬುದರ ಕುರಿತು ನಾವು ಇನ್ನಷ್ಟು ಪ್ರಯತ್ನ ನಡೆಸಬೇಕಿದೆ. ಸಿಎಸ್ಕೆ ತನ್ನ ರನ್ ಚೇಸ್ ಮಾಡುವಲ್ಲಿ ಎಲ್ಲೋ ಒಂದು ಕಡೆ ತಪ್ಪು ಮಾಡಿದೆ ಎಂದಿದ್ದಾರೆ.