ಅಬುಧಾಬಿ: ಕ್ರಿಸ್ಗೇಲ್ ಮತ್ತು ಕೆ.ಎಲ್ ರಾಹುಲ್ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 185 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮೊದಲನೇ ಓವರ್ನಲ್ಲಿ ಸ್ಫೋಟಕ ಆಟಗಾರ ಮಂದೀಪ್ ಸಿಂಗ್ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು.
ಆದರೆ ಈ ಸಂದರ್ಭದಲ್ಲಿ ನಾಯಕ ಕೆ.ಎಲ್ ರಾಹುಲ್ ಜೊತೆಗೂಡಿದ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ 2ನೇ ವಿಕೆಟ್ಗೆ 121 ರನ್ ಸೇರಿಸಿ ಚೇತರಿಕೆ ನೀಡಿದರು. ರಾಹುಲ್ ಸ್ಟೋಕ್ಸ್ ಬಾಲ್ಗೆ ತೆವಾಟಿಕೆ ಕ್ಯಾಚ್ ನೀಡಿ ಔಟಾಗುತ್ತಿದ್ದಂತೆ ಬಂದ ನಿಕೊಲಸ್ ಪೂರನ್ 10 ಎಸೆತದಲ್ಲಿ 22 ರನ್ಗಳಿಸಿ ಔಟಾದರು. ಕ್ರಿಸ್ ಗೇಲ್ 63 ಎಸೆತಗಳಲ್ಲಿ 8 ಸಿಕ್ಸರ್ ಹಾಗೂ 6 ಬೌಂಡರಿಗಳ ನೆರವಿನಿಂದ 99 ರನ್ಗಳಿಸಿ ಶತಕ ವಂಚಿತರಾದರು. ಇನ್ನು ಮ್ಯಾಕ್ಸ್ವೆಲ್ 6 ಮತ್ತು ದೀಪಕ್ ಹೂಡಾ 1 ರನ್ಗಳಿಸಿ ಅಜೇಯರಾಗಿ ಉಳಿದರು.
ಒಟ್ಟಾರೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 185 ರನ್ಗಳಿಸಿ ರಾಜಸ್ಥಾನ್ ರಾಯಲ್ಸ್ಗೆ 186 ರನ್ಗಳ ಗುರಿ ನೀಡಿದೆ. ರಾಜಸ್ಥಾನ್ ರಾಯಲ್ಸ್ ಪರ ಜೋಫ್ರಾ ಆರ್ಚರ್ ಮತ್ತು ಬೆನ್ ಸ್ಟೋಕ್ಸ್ ತಲಾ 2 ವಿಕೆಟ್ ಪಡೆದು ಮಿಂಚಿದರು.