ಅಬುಧಾಬಿ: ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡ ಪ್ಲೇ ಆಫ್ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ.
ಈ ನಡುವೆ ರುತುರಾಜ್ ಗಾಯಕ್ವಾಡ್ ಅವರ ಉತ್ತಮ ಬ್ಯಾಟಿಂಗ್ನಿಂದ ಧೋನಿ ನೇತೃತ್ವದ ಸಿಎಎಸ್ಕೆ ಕೊನೆಯ ಮೂರು ಪಂದ್ಯಗಳನ್ನು ಗೆದ್ದಿದೆ. ಭಾನುವಾರ ಕೊನೆಯ ಪಂದ್ಯ ಗೆದ್ದ ಬಳಿಕ ಸ್ಪಿನ್ನರ್ ಇಮ್ರಾನ್, ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ನೀಡಿದ್ದು, ನಿಮ್ಮ ಪ್ರೀತಿ, ಬೆಂಬಲಕ್ಕೆ ಧನ್ಯವಾದಗಳು ಎಂದಿದ್ದಾರೆ.
-
Good finish at the end but a heavy feeling in the heart not to get to the play offs.Sorry fans if you feel I didn’t perform the way you all expected.If given a chance will try and do better next year.Thanks a lot for your love and continued support #Yellove
— Imran Tahir (@ImranTahirSA) November 1, 2020 " class="align-text-top noRightClick twitterSection" data="
">Good finish at the end but a heavy feeling in the heart not to get to the play offs.Sorry fans if you feel I didn’t perform the way you all expected.If given a chance will try and do better next year.Thanks a lot for your love and continued support #Yellove
— Imran Tahir (@ImranTahirSA) November 1, 2020Good finish at the end but a heavy feeling in the heart not to get to the play offs.Sorry fans if you feel I didn’t perform the way you all expected.If given a chance will try and do better next year.Thanks a lot for your love and continued support #Yellove
— Imran Tahir (@ImranTahirSA) November 1, 2020
ಈ ವರ್ಷದ ಐಪಿಎಲ್‌ನಲ್ಲಿ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ತಾಹಿರ್ಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಆದರೆ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕ್ರಿಸ್ ಗೇಲ್ನಂತಹ ಆಟಗಾರನನ್ನು ಔಟ್ ಮಾಡುವ ಮೂಲಕ ಸಿಎಸ್ಕೆ ಗೆಲುವಿಗೆ ತಾಹಿರ್ ನೆರವಾಗಿದ್ದರು.
ಉತ್ತಮ ಫಿನಿಶಿಂಗ್ ಮಾಡಿದ್ದೇವೆ. ಆದರೆ ಕೊನೆಯಲ್ಲಿ ಪ್ಲೇ ಆಫ್ಗೆ ಹೋಗಲು ಸಾಧ್ಯವಾಗಿಲ್ಲ ಎಂಬ ನೋವಿದೆ. ಕ್ಷಮಿಸಿ ಅಭಿಮಾನಿಗಳೇ, ನೀವು ನಿರೀಕ್ಷಿಸಿದ ರೀತಿಯಲ್ಲಿ ನನಗೆ ಪ್ರದರ್ಶನ ನೀಡಲು ಆಗಿಲ್ಲ. ಮುಂದಿನ ವರ್ಷ ಮತ್ತೆ ಅವಕಾಶ ಕೊಟ್ಟರೆ ಉತ್ತಮ ಪ್ರದರ್ಶನ ನೀಡುತ್ತೇನೆ. ನಿಮ್ಮ ಪ್ರೀತಿ, ಬೆಂಬಲಕ್ಕೆ ಧನ್ಯವಾದಗಳು ಎಂದು ತಾಹಿರ್ ಟ್ವೀಟ್ ಮಾಡಿದ್ದಾರೆ.
ಅಬುಧಾಬಿಯ ಶೈಖ್ ಜಾಯಿದ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಗಾಯಕ್ವಾಡ್ ಮತ್ತು ಫಾಫ್ ಡು ಪ್ಲೆಸಿಸ್ ಕ್ರಮವಾಗಿ 62 ಮತ್ತು 48 ರನ್ ಗಳಿಸಿದರು. ಈ ಪಂದ್ಯದ ಮೂಲಕ ಸಿಎಸ್ಕೆ ಪ್ಲೇ ಆಫ್ ರೇಸ್ನಿಂದ ಹೊರ ಬಿದ್ದಿದೆ.