ದುಬೈ: ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ 22 ಎಸೆತಗಳಲ್ಲಿ 55 ರನ್ ಗಳಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ (ಆರ್‌ಸಿಬಿ) ಏಳು ವಿಕೆಟ್ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಎಬಿ ಡಿವಿಲಿಯರ್ಸ್ ಅವರು, ನಿಗದಿತ ಗುರಿ ಬೆನ್ನಟ್ಟುವಾಗ 'ತುಂಬಾ ಮಾನಸಿಕ ಒತ್ತಡ' ಅನುಭವಿಸಿದ್ದೆ ಎಂದು ಪಂದ್ಯದ ಬಳಿಕ ಹೇಳಿದರು.
ಆರ್‌ಸಿಬಿಗೆ ಗೆಲ್ಲಲು ಕೊನೆಯ ಎರಡು ಓವರ್‌ಗಳಿಂದ 35 ರನ್‌ಗಳ ಅಗತ್ಯವಿತ್ತು. ಅಂತಿಮ ಓವರ್‌ನ ಆರಂಭದಲ್ಲಿ ಡಿವಿಲಿಯರ್ಸ್ ಮೂರು ಸಿಕ್ಸರ್ ಹೊಡೆದು ಪಂದ್ಯವನ್ನು ತಮ್ಮ ವಶಕ್ಕೆಪಡೆದರು.
ನನಗೆ ತುಂಬಾ ಸಂತೋಷವಾಗಿದೆ. ನಾವು ಚೆನ್ನಾಗಿ ಬೌಲ್ ಮಾಡಿದ್ದೇವೆ. ಆದರೂ ಕೆಲವು ರನ್ಗಳು ಬಿಟ್ಟುಕೊಟ್ಟೆವು. ಸಾಮಾನ್ಯವಾಗಿ ಚಹಾಲ್ ನೋ ಬಾಲ್ಗಳನ್ನು ಎಸೆಯುವುದಿಲ್ಲ. ನಾವು 15 - 20 ರನ್ ಹೆಚ್ಚಿಗೆ ನೀಡಿದ್ದೇವೆ ಎಂಬ ಭಾವನೆಯಿದೆ ಎಂದು ಡಿವಿಲಿಯರ್ಸ್ ಪಂದ್ಯದ ಬಳಿಕ ಹೇಳಿದರು.
ಆದರೆ, ವಿರಾಟ್ ಮತ್ತು ನಾನು ಮಾತನಾಡಿದ್ದು, ನಾವು ಕೆಲ ಜತೆ ಆಟದಲ್ಲಿ ಉತ್ತಮ ರನ್ ಕಲೆಹಾಕಿ ಮುಂದುವರೆಯುವುದು. ಚೇಸಿಂಗ್ ವೇಳೆ ಬೇರೆ ಆಟಗಾರನಂತೆ ನಾನೂ ಕೂಡ ತುಂಬಾ ಒತ್ತಡಕ್ಕೊಳಗಾಗುತ್ತೇನೆ ಎಂದರು.
ಜಯದೇವ್ ಉನಾದ್ಕತ್ 19ನೇ ಓವರ್‌ನಲ್ಲಿ 25 ರನ್ ಬಿಟ್ಟುಕೊಟ್ಟರು. ಆರ್‌ಸಿಬಿಗೆ ಕೊನೆಯ ಆರು ಎಸೆತಗಳಲ್ಲಿ 10 ರನ್ ಬೇಕಾಯಿತು. ಜೋಫ್ರಾ ಆರ್ಚರ್ ಅಂತಿಮ ಓವರ್ ಎಸೆದರು. ಆದರೆ ತಂಡವನ್ನು ಆರ್‌ಸಿಬಿ ಪರ ನಿಲ್ಲುವಂತೆ ಎಬಿಡಿ ಬ್ಯಾಟ್ ಬೀಸಿದರು.
ನಾನು ಯಾವಾಗಲೂ ಬೌಲರ್‌ಗಳನ್ನು ಗೌರವಿಸುತ್ತೇನೆ. ಅವರು ನನಗೆ ಚೆನ್ನಾಗಿ ಬೌಲ್ ಮಾಡಿದರೆ ಮಾತ್ರವೇ ಅವರು ಮೇಲುಗೈ ಸಾಧಿಸುತ್ತಾರೆ. ನಾನು ಅವರಲ್ಲಿ ಒಬ್ಬರನ್ನು ಮಧ್ಯದಲ್ಲಿ ಕೂಡ ಹೊಡೆದಿಲ್ಲ (ಸಿಕ್ಸರ್) ಎಂದು ಡಿವಿಲಿಯರ್ಸ್ ಹೇಳಿದರು.
ಉನಾದ್ಕತ್ ಬೌಲಿಂಗ್ ಮಾಡುವಾಗ, ನಾನು ಲೆಗ್ ಸೈಡ್ ಹೊಡೆಯಲು ಎದುರು ನೋಡುತ್ತಿದ್ದೆ. ಆದರೆ, ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಅದನ್ನು ಇನ್ನೂ ಚೆನ್ನಾಗಿ ಹೊಡೆಯಬೇಕಾಗಿತ್ತು. ಅದೃಷ್ಟವಶಾತ್ ನಾನು ಸ್ವಲ್ಪ ದೂರದಲ್ಲಿದ್ದೆ ಎಂದರು.
ನಾನು ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡಲು ಬಯಸುತ್ತೇನೆ. ನಾನೊಂದು ಒಳ್ಳೆಯ ಕಾರಣಕ್ಕಾಗಿ ಇಲ್ಲಿದ್ದೇನೆ ಎಂದು ಮಾಲೀಕರಿಗೆ ತೋರಿಸುತ್ತೇನೆ. ನನ್ನ ಕುಟುಂಬ, ಅಭಿಮಾನಿಗಳು ಮತ್ತು ನನಗಾಗಿ ಆಡುತ್ತೇನೆ. ಈ ಹಿಂದಿನ ಕೊನೆಯ ಪಂದ್ಯದಲ್ಲಿ ನಾನು ನನ್ನ ಪಾತ್ರವನ್ನು ನಿರ್ವಹಿಸಲು ಆಗಲಿಲ್ಲ. ಆದರೆ ಈ ಸಮಯದಲ್ಲಿ ನಾನು ಅದನ್ನು ಮಾಡಿದ್ದೇನೆ. ಇದು ಬೆಕ್ಕು ಮತ್ತು ಇಲಿ ಆಟ ಎಂದು ಡಿವಿಲಿಯರ್ಸ್ ಹೇಳಿದರು.