ಶಾರ್ಜಾ: ಹೊಸ ಬ್ಯಾಟ್ಸ್ಮನ್ಗಳು ಆರಂಭದಿಂದಲೇ ಸ್ಫೋಟಕವಾಗಿ ಆಡುವುದು ಕಷ್ಟ. ಹೀಗಾಗಿ, ಐಪಿಎಲ್ ಸೀಸನ್ಗೂ ಮೊದಲು ಗ್ರೌಂಡ್ ಶಾಟ್ ವಿಚಾರದಲ್ಲಿ ಹೆಚ್ಚು ಬೆವರು ಹರಿಸಿದ್ದೇನೆ ಎಂದು ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಇಶಾನ್ ಕಿಶನ್ ಹೇಳಿದ್ದಾರೆ.
ಶುಕ್ರವಾರ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ ಇಶಾನ್ ಕಿಶನ್, 37 ಎಸೆತಗಳಲ್ಲಿ 68 ರನ್ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ನಿರ್ಣಾಯಕ ಆಟಗಾರ ಎನಿಸಿದರು.
-
Second of the season 🔥💙
— Mumbai Indians (@mipaltan) October 23, 2020 " class="align-text-top noRightClick twitterSection" data="
Live Updates: https://t.co/SVUhVfVOt3
Ball-by-ball: https://t.co/aJuTSdmoS2#OneFamily #MumbaiIndians #MI #Dream11IPL #CSKvMI @ishankishan51 pic.twitter.com/2cLkeBvSrC
">Second of the season 🔥💙
— Mumbai Indians (@mipaltan) October 23, 2020
Live Updates: https://t.co/SVUhVfVOt3
Ball-by-ball: https://t.co/aJuTSdmoS2#OneFamily #MumbaiIndians #MI #Dream11IPL #CSKvMI @ishankishan51 pic.twitter.com/2cLkeBvSrCSecond of the season 🔥💙
— Mumbai Indians (@mipaltan) October 23, 2020
Live Updates: https://t.co/SVUhVfVOt3
Ball-by-ball: https://t.co/aJuTSdmoS2#OneFamily #MumbaiIndians #MI #Dream11IPL #CSKvMI @ishankishan51 pic.twitter.com/2cLkeBvSrC
ಪಂದ್ಯ ಮುಗಿದ ಬಳಿಕ ಮಾತನಾಡಿದ ಕಿಶನ್, "ನಾನು ಸಕಾರಾತ್ಮಕವಾಗಿರಲು ಪ್ರಯತ್ನಿಸುತ್ತಿದ್ದೆ. ಈ ರೀತಿಯ ಮೊತ್ತ ಚೇಸ್ ಮಾಡುವುದು ಕೆಲವೊಮ್ಮೆ ಜಟಿಲವಾಗುತ್ತದೆ. ಕ್ವಿಂಟನ್ ಜೊತೆ ಬ್ಯಾಟಿಂಗ್ ಮಾಡಲು ಸಂತೋಷವಾಗುತ್ತದೆ. ಅವರಿಂದ ಕಲಿಯಲು ತುಂಬಾ ಇದೆ" ಎಂದರು.
ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ 10 ಪಂದ್ಯಗಳಿಂದ 14 ಅಂಕಗಳೊಂದಿಗೆ ಪಾಯಿಂಟ್ ಟೇಬಲ್‌ನಲ್ಲಿ ಅಗ್ರಸ್ಥಾನ ಪಡೆದುಕೊಂಡಿತು. ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿಎಸ್ಕೆ ತಂಡ 10 ವಿಕೆಟ್ಗಳಿಂದ ಸೋಲು ಕಂಡಿತು.