ETV Bharat / sports

ಟೂರ್ನಿಯ ದ್ವಿತಿಯಾರ್ಧದಲ್ಲಿ ಆರ್​ಸಿಬಿ ಬ್ಯಾಟಿಂಗ್ ವಿಭಾಗ ವಿಫಲ: ಕೋಚ್ ಕ್ಯಾಟಿಚ್​​​ ಬೇಸರ

ಐಪಿಎಲ್ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದ ಬೆಂಗಳೂರು ತಂಡದ ಬ್ಯಾಟಿಂಗ್ ವಿಭಾಗ ದ್ವಿತಿಯಾರ್ಧದಲ್ಲಿ ಸಂಫುರ್ಣ ವೈಫಲ್ಯ ಅನುಭವಿಸಿತು ಎಂದು ಮುಖ್ಯ ಕೋಚ್ ಸೈಮನ್ ಕ್ಯಾಟಿಚ್ ಹೇಳಿದ್ದಾರೆ.

RCB coach Simon Katich
ಸೈಮನ್ ಕ್ಯಾಟಿಚ್
author img

By

Published : Nov 7, 2020, 10:26 AM IST

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ ದ್ವಿತೀಯಾರ್ಧದಲ್ಲಿ ಆರ್​ಸಿಬಿ ಬ್ಯಾಟಿಂಗ್ ವಿಭಾಗ ಕೈಕೊಟ್ಟಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮುಖ್ಯ ಕೋಚ್ ಸೈಮನ್ ಕ್ಯಾಟಿಚ್ ಅಭಿಪ್ರಾಯಪಟ್ಟಿದ್ದಾರೆ.

ಟೂರ್ನಿಯ ಮೊದಲಾರ್ಧದಲ್ಲಿ ಉತ್ತಮ ಪ್ರದರ್ಶನ ತೋರಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟ್ಸ್​ಮನ್​ಗಳು, ಟೂರ್ನಿಯ ಅಂತಿಮ ಹಂತದ ವೇಳೆ ಉತ್ತಮ ಪ್ರದರ್ಶನ ತೋರಲಿಲ್ಲ ಎಂದು ಮುಖ್ಯ ಕೋಚ್ ಕ್ಯಾಟಿಚ್ ಹೇಳಿದ್ದಾರೆ.

ನಾವು ಆಡಿದ ಮೊದಲ 10 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದೆವು. ಆದರೆ, ನಂತರದ 5 ಪಂದ್ಯಗಳಲ್ಲಿ ನಮ್ಮ ತಂಡದ ಬ್ಯಾಟಿಂಗ್ ವಿಭಾಗ ಸಂಪೂರ್ಣ ವೈಫಲ್ಯ ಅನುಭವಿಸಿತು ಎಂದಿದ್ದಾರೆ. ಆರಂಭದಲ್ಲಿ ವಿಕೆಟ್ ಪಡೆದ ಹೈದರಾಬಾದ್ ಬೌಲರ್​ಗಳು ನಮ್ಮ ತಂಡದ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು ಎಂದಿದ್ದಾರೆ.

ನಾವು 150 ರನ್​ಗಳಿಸಿದ್ದೆ ನಿಜಕ್ಕೂ ಪಂದ್ಯದ ಫಲಿತಾಂಶ ಬೇರೆಯೇ ಇರುತ್ತಿತ್ತು. ಕೇವಲ 131 ರನ್ ಗಳಿಸಿದ್ದು ನಿರಾಸೆ ಉಂಟು ಮಾಡಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.​

ಶುಕ್ರವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಮುಗ್ಗರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್​ಗಳಿಂದ ಹೈದರಾಬಾದ್ ವಿರುದ್ಧ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.