ದುಬೈ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಂಡು ವಾರ ಕಳೆದಿದೆ. ವಿವಿಧ ತಂಡಗಳಲ್ಲಿರುವ ಪ್ಲೇಯರ್ಸ್ ಬ್ಯಾಟಿಂಗ್, ಬೌಲಿಂಗ್ ಅಬ್ಬರ ಜೋರಾಗಿದೆ. 2020ನೇ ಸಾಲಿನಲ್ಲಿ ಇದೀಗ ಅತಿ ಹೆಚ್ಚು ರನ್ ಹಾಗೂ ಹೆಚ್ಚು ವಿಕೆಟ್ ಪಡೆದ ಪ್ಲೇಯರ್ಸ್ ಕ್ರಮವಾಗಿ ಆರೇಂಜ್ ಹಾಗೂ ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದಾರೆ.
![du Plessis](https://etvbharatimages.akamaized.net/etvbharat/prod-images/eiivs0qu0aaka1s-1_2609newsroom_1601113779_1012.jpeg)
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಪು ಡುಪ್ಲೆಸಿ ಅತಿ ಹೆಚ್ಚು ರನ್ಗಳಿಕೆ ಮಾಡಿದ್ದು ಅವರಿಗೆ ಆರೇಂಜ್ ಕ್ಯಾಪ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಗಿಸೋ ರಬಾಡಾ ಅತಿ ಹೆಚ್ಚು ವಿಕೆಟ್ ಪಡೆದುಕೊಂಡಿದ್ದರಿಂದ ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದಾರೆ.
![Rabada gets Purple Cap](https://etvbharatimages.akamaized.net/etvbharat/prod-images/000_1f37ta_2609newsroom_1601113779_1076.jpg)
ಮೂರು ಪಂದ್ಯಗಳಿಂದ ಡುಪ್ಲೆಸಿ 173ರನ್ಗಳಿಕೆ ಮಾಡಿ ಟಾಪ್ ಸ್ಕೋರ್ ಮಾಡಿದ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ. ಇನ್ನು ಕಿಂಗ್ಸ್ ಪಂಜಾಬ್ ತಂಡದ ಕ್ಯಾಪ್ಟನ್ ಎರಡು ಪಂದ್ಯಗಳಿಂದ 153ರನ್ಗಳಿಕೆ ಮಾಡಿದ್ದಾರೆ. ಜತೆಗೆ ಕನ್ನಡಿಗ ಮಯಾಂಕ್ ಅಗರವಾಲ್ 115ರನ್ಗಳಿಸಿ ನಂತರದ ಸ್ಥಾನಗಳಲ್ಲಿದ್ದಾರೆ.
![Purple Cap](https://etvbharatimages.akamaized.net/etvbharat/prod-images/copy-of-ruthless-rahul_2609newsroom_1601113779_521.jpg)
ಬೌಲಿಂಗ್ ವಿಭಾಗದಲ್ಲಿ ಎರಡು ಪಂದ್ಯಗಳಿಂದ ರಬಾಡ 5ವಿಕೆಟ್ ಪಡೆದುಕೊಂಡಿದ್ದಾರೆ. ಸಿಎಸ್ಕೆ ತಂಡದ ಸ್ಯಾಮ್ ಕರ್ರನ್ ಮೂರು ಪಂದ್ಯಗಳಿಂದ 5ವಿಕೆಟ್ ಪಡೆದುಕೊಂಡಿದ್ದಾರೆ. ಕಿಂಗ್ಸ್ ಪಂಜಾಬ್ ತಂಡದ ಶಮಿ 4 ಹಾಗೂ ಆರ್ಸಿಬಿ ತಂಡದ ಚಹಾಲ್ ತಲಾ 4ವಿಕೆಟ್ ಪಡೆದುಕೊಂಡಿದ್ದಾರೆ. ಇನ್ನು ಡೆಲ್ಲಿ ಎರಡು ಪಂದ್ಯಗಳಲ್ಲಿ ಗೆದ್ದು ಮೊದಲ ಸ್ಥಾನದಲ್ಲಿದ್ದು, ಪಂಜಾಬ್ ಎರಡು ಪಂದ್ಯಗಳಲ್ಲಿ 1 ಗೆದ್ದು ಎರಡನೇ ಸ್ಥಾನ, ಮುಂಬೈ ಎರಡಲ್ಲಿ ಒಂದು ಗೆದ್ದು ಮೂರನೇ ಸ್ಥಾನದಲ್ಲಿವೆ. ಉಳಿದಂತೆ ರಾಜಸ್ಥಾನ, ಚೆನ್ನೈ, ಬೆಂಗಳೂರು, ಹೈದರಾಬಾದ್, ಕೋಲ್ಕತ್ತಾ ನಂತರದ ಸ್ಥಾನದಲ್ಲಿವೆ.