ETV Bharat / sports

ಕ್ರಿಕೆಟ್ ಆಡುವ ಅವಕಾಶ ಸಿಕ್ಕಿದ್ದಕ್ಕೆ ಧವನ್ ಖುಷ್​: ಬಿಸಿಸಿಐ ಪ್ರಯತ್ನಕ್ಕೆ ಅಶ್ವಿನ್ ಮೆಚ್ಚುಗೆ - ಶಿಖರ್ ಧವನ್ ಲೇಟೆಸ್ಟ್ ನ್ಯೂಸ್

ಐಪಿಎಲ್ ಟೂರ್ನಿ ಮುಕ್ತಾಯವಾಗುತ್ತಿದ್ದಂತೆ ಟೀಂ ಇಂಡಿಯಾ ಆಟಗಾರರು ಆಸ್ಟ್ರೇಲಿಯಾಕ್ಕೆ ತೆರಳಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್​ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

Dhawan after IPL final
ಶಿಖರ್ ಧವನ್
author img

By

Published : Nov 12, 2020, 7:49 AM IST

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ 13 ನೇ ಆವೃತ್ತಿಯು ಮುಕ್ತಾಯಗೊಳ್ಳುತ್ತಿದ್ದಂತೆ, ಕ್ರಿಕೆಟ್ ಆಡಲು ಸಾಧ್ಯವಾಗಿದ್ದಕ್ಕೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಆಟಗಾರ ಶಿಖರ್ ಧವನ್ ಹರ್ಷ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್​ನ ಫೈನಲ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ಐದನೇ ಬಾರಿಗೆ ಪ್ರಶಸ್ತಿಯನ್ನು ಎತ್ತಿ ಹಿಡಿದಿದೆ.

ಆರಂಭದಲ್ಲಿ, ಐಪಿಎಲ್ ಟೂರ್ನಿಯನ್ನು ಮಾರ್ಚ್‌ನಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲಾಯಿತು. ಹಲವಾರು ಮಾರ್ಗಸೂಚಿಗಳೊಂದಿಗೆ, ಸೆಪ್ಟೆಂಬರ್ 19 ರಂದು ಯುಎಇಯಲ್ಲಿ ಟೂರ್ನಿ ಪ್ರಾರಂಭವಾಯಿತು.

  • The experience in UAE was made better by a fantastic bunch of people by my side. Grateful for the opportunity to go out there and play cricket again. Thank you to everyone involved at @DelhiCapitals - my teammates, coaches, management, and fans 🙏💙 pic.twitter.com/1a87lmx8Ue

    — Shikhar Dhawan (@SDhawan25) November 11, 2020 " class="align-text-top noRightClick twitterSection" data=" ">

"ನನ್ನ ಜೊತೆಯಲ್ಲಿದ್ದ ಅತ್ಯುತ್ತಮ ವ್ಯಕ್ತಿಗಳಿಂದಾಗಿ ಯುಎಇ ಅನುಭವ ಉತ್ತಮವಾಗಿತ್ತು. ಯುಎಇಗೆ ಹೋಗಿ ಕ್ರಿಕೆಟ್ ಆಡುವ ಅವಕಾಶಕ್ಕಾಗಿ ಕೃತಜ್ಞನಾಗಿರುತ್ತೇನೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸದಸ್ಯರು, ತರಬೇತುದಾರರು, ಮ್ಯಾನೇಜ್ಮೆಂಟ್​ ಮತ್ತು ಅಭಿಮಾನಿಗಳಿಗೆ ಧನ್ಯವಾದಗಳು" ಎಂದು ಶಿಖರ್ ಧವನ್ ಟ್ವೀಟ್ ಮಾಡಿದ್ದಾರೆ.

ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಪಂದ್ಯಾವಳಿಯನ್ನು ನಡೆಸಿದ್ದಕ್ಕೆ ಡೆಲ್ಲಿ ಕ್ಯಾಪಿಟಲ್ಸ್​ ಆಟಗಾರ ರವಿಚಂದ್ರನ್ ಅಶ್ವಿನ್, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಪ್ರಯತ್ನವನ್ನು ಶ್ಲಾಘಿಸಿದ್ದರು.

  • It wasn’t our night!! @DelhiCapitals
    Well done @mipaltan , deserved winners and so clinical through the tournament. @ImRo45 @ShreyasIyer15
    Last but definitely not the least, it was a terrific effort by the @IPL @BCCI to pull off a tournament like this during these tough times.

    — Ashwin 🇮🇳 (@ashwinravi99) November 11, 2020 " class="align-text-top noRightClick twitterSection" data=" ">

ಫೈನಲ್​ ಪಂದ್ಯದ ಸೋಲಿನ ಬಳಿಕ ಟ್ವೀಟ್ ಮಾಡಿದ್ದ ಅಶ್ವಿನ್, "ಇದು ನಮ್ಮ ದಿನವಲ್ಲ, ಮುಂಬೈ ಈ ಗೆಲುವಿಗೆ ಅರ್ಹವಾಗಿದೆ. ಕಠಿಣ ಸಮಯದಲ್ಲಿ ಈ ರೀತಿಯ ಪಂದ್ಯಾವಳಿಯನ್ನು ನಡಸಿದ ಬಿಸಿಸಿಐ ಪ್ರಯತ್ನ ಅದ್ಭುತವಾಗಿದೆ" ಎಂದು ಅಶ್ವಿನ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.