ದುಬೈ: ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ವಿರುದ್ಧ 10 ವಿಕೆಟ್ಗಳ ಸೋಲು ಕಂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆ.ಎಲ್.ರಾಹುಲ್ ಮತ್ತು ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ಗೆ ಸಿಎಸ್ಕೆ ನಾಯಕ ಎಂ.ಎಸ್.ಧೋನಿ ಸಲಹೆ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಪಂಜಾಬ್ ತಂಡಕ್ಕೆ ಅದ್ಭುತ ಫಾರ್ಮ್ನಲ್ಲಿರುವ ರಾಹುಲ್-ಮಯಾಂಕ್ ಮೊದಲ ವಿಕೆಟ್ಗೆ 61 ರನ್ಗಳ ಜೊತೆಯಾಟ ನೀಡಿದರು. ಈ ಹಂತದಲ್ಲಿ ಮಯಾಂಕ್ ದೊಡ್ಡ ಹೊಡೆತಕ್ಕೆ ಕೈಯಾಕಿ ಚಾವ್ಲಾಗೆ ವಿಕೆಟ್ ನೀಡಿದರು.
ನಂತರ ಬಂದು ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದ ಮಂದೀಪ್ ಸಿಂಗ್ 16 ಎಸೆತಗಳಲ್ಲಿ 2 ಸಿಕ್ಸರ್ ಸಹಿತ 27 ರನ್ ಗಳಿಸಿ ಔಟಾದರು. ನಿಕೋಲಸ್ ಪೂರನ್ 17 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 33 ರನ್ ಗಳಿಸಿ ಔಟಾದರು. ನಾಯಕ ಕೆ.ಎಲ್.ರಾಹುಲ್ 52 ಎಸೆತಗಳಲ್ಲಿ 7 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 63 ರನ್ ಗಳಿಸಿ ತಂಡ ಉತ್ತಮ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು.
-
Can there be a better person than #MSDhoni to analyse the game. We absolutely love these post-match interactions. #Dream11IPL #KXIPvCSK pic.twitter.com/a2foU7eyGx
— IndianPremierLeague (@IPL) October 4, 2020 " class="align-text-top noRightClick twitterSection" data="
">Can there be a better person than #MSDhoni to analyse the game. We absolutely love these post-match interactions. #Dream11IPL #KXIPvCSK pic.twitter.com/a2foU7eyGx
— IndianPremierLeague (@IPL) October 4, 2020Can there be a better person than #MSDhoni to analyse the game. We absolutely love these post-match interactions. #Dream11IPL #KXIPvCSK pic.twitter.com/a2foU7eyGx
— IndianPremierLeague (@IPL) October 4, 2020
179 ರನ್ಗಳ ಗುರಿ ಬೆನ್ನತ್ತಿದ ಸಿಎಸ್ಕೆ ಪರ ಅನುಭವಿಗಳಾದ ಶೇನ್ ವಾಟ್ಸನ್ ಹಾಗೂ ಪ್ಲೆಸಿಸ್ ಪಂಜಾಬ್ ಬೌಲರ್ಗಳನ್ನು ಮನಬಂದಂತೆ ದಂಡಿಸಿ ಬೌಂಡರಿ-ಸಿಕ್ಸರ್ಗಳ ಸುರಿಮಳೆ ಸುರಿಸಿದರು. ಶೇನ್ ವಾಟ್ಸನ್ 53 ಎಸೆತಗಳಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 83 ರನ್ ಸಿಡಿಸಿದರೆ, ಪ್ಲೆಸಿಸ್ 53 ಎಸೆತಗಳಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 87 ರನ್ ಕಲೆಹಾಕಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಪಂದ್ಯದ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಕೆ.ಎಲ್.ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ಗೆ ಕೆಲವು ಸಲಹೆಗಳನ್ನು ನೀಡುತ್ತಿರುವ ವಿಡಿಯೋವನ್ನು ಐಪಿಎಲ್ ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.