ETV Bharat / sports

ಆ್ಯಂಡ್ರೆ ರಸೆಲ್​ ವಿಶ್ವಕಪ್​​ನ ಡಾರ್ಕ್​ ಹಾರ್ಸ್​... ಇದು ಈ ಲೆಜೆಂಡ್​ ಭವಿಷ್ಯ - Etv Bharat,kannada news,news kannada,Sports News,Cricket,Andre Russell,West Indies,World Cup,Chris Gayle,Sourav Ganguly,England,ವೆಸ್ಟ್ ಇಂಡೀಸ್,ವಿಶ್ವ ಕಪ್​,ಕ್ರಿಸ್​ ಗೇಲ್,ಕ್ರಿಕೆಟ್​,ಇಂಗ್ಲೆಂಡ್​,ಕ್ರೀಡಾ ಸುದ್ದಿ,​

ಕೆಎಲ್​ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್​ ಇಳಿಸುವ ಬಗ್ಗೆ ತಾವೇನೂ ಹೇಳಲು ಬಯಸಲ್ಲ, ಏಕೆಂದರೆ ಈಗಾಗಲೇ ಟಾಪ್​ ಆರ್ಡರ್​ನಲ್ಲಿ ಶಿಖರ್​, ಶರ್ಮಾ ಹಾಗೂ ಕೊಹ್ಲಿ ಇರುವುದರಿಂದ ಆ ಪ್ರಶ್ನೆ ಉದ್ಬವಿಸಲ್ಲ: ಸೌರವ್​

ಆ್ಯಂಡ್ರೆ ರಸೆಲ್: ಸಂಗ್ರಹ ಚಿತ್ರ
author img

By

Published : May 1, 2019, 11:22 AM IST

ಚೆನ್ನೈ: ಇಂದು ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ದೆಹಲಿ ಕ್ಯಾಪಿಟಲ್ಸ್​ ವಿರುದ್ಧ ಇಂದು ಮಹತ್ವದ ಪಂದ್ಯ ನಡೆಯಲಿದೆ. ಈ ನಡುವೆ, ದೆಹಲಿ ಕ್ಯಾಪಿಟಲ್ಸ್​ ತಂಡದ ಮೆಂಟರ್​​ ಆಗಿರುವ ಮಾಜಿ ನಾಯಕ ಸೌರವ್​ ಗಂಗೂಲಿ, ಮುಂದಿನ ವಿಶ್ವಕಪ್​ ಬಗ್ಗೆ ಮಾತನಾಡಿದ್ದು, ವಿಂಡೀಸ್​ನ ಆ್ಯಂಡ್ರೆ ರಸೆಲ್​ ವಿಶ್ವಕಪ್​ನ ಡಾರ್ಕ್​ ಹಾರ್ಸ್​ ಆಗುವುದು ಪಕ್ಕಾ ಎಂದು ಭವಿಷ್ಯ ನುಡಿದಿದ್ದಾರೆ.

ಇನ್ನು ವಿಶ್ವಕಪ್​ ಟೂರ್ನಿಯಲ್ಲಿ ಭಾರತ ತಂಡದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಯುವ ಆಟಗಾರ ವಿಜಯ್​ ಶಂಕರ್​ ಅತ್ಯುತ್ತಮ ಆಟಗಾರ ಆಗಬಲ್ಲರು ಎಂದಿರುವ ಸೌರವ್ ಗಂಗೂಲಿ, ಈ ಹಿಂದೆ ನ್ಯೂಜಿಲ್ಯಾಂಡ್​, ಆಸ್ಟ್ರೇಲಿಯಾ ನೆಲದಲ್ಲಿ ನಡೆದ ಸರಣಿಯಲ್ಲಿ ಏನೇ ಆಗಿರಲಿ, ವಿಜಯ್​ ಶಂಕರ್​ ಅತ್ಯುತ್ತಮ ತಾಂತ್ರಿಕ ಕೌಸಲ ಹೊಂದಿದ್ದಾನೆ. ಮತ್ತೆ ಇಂಗ್ಲೆಂಡ್​ನಲ್ಲಿ ಆತನ ಬೌಲಿಂಗ್​ ನೆರವಿಗೆ ಬರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ ಗಂಗೂಲಿ

ಇನ್ನು ಕನ್ನಡಿಗ ಕೆಎಲ್​ ರಾಹುಲ್​ ಬಗ್ಗೆ ಮಾತನಾಡಿದ ಗಂಗೂಲಿ, ಕೆಎಲ್​ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್​ ಇಳಿಸುವ ಬಗ್ಗೆ ತಾವೇನೂ ಹೇಳಲು ಬಯಸಲ್ಲ, ಏಕೆಂದರೆ ಈಗಾಗಲೇ ಟಾಪ್​ ಆರ್ಡರ್​ನಲ್ಲಿ ಶಿಖರ್​, ಶರ್ಮಾ ಹಾಗೂ ಕೊಹ್ಲಿ ಇರುವುದರಿಂದ ಆ ಪ್ರಶ್ನೆ ಉದ್ಬವಿಸಲ್ಲ ಎಂದಿದ್ದಾರೆ.

ಈ ಬಾರಿ ವಿಶ್ವಕಪ್​ನಲ್ಲಿ ವಿಂಡೀಸ್ ತಂಡವನ್ನ ಯಾರೂ ಕಡೆಗಣಿಸಲು ಸಾಧ್ಯವಿಲ್ಲ ಎಂದಿರುವ ಭಾರತ ತಂಡದ ಮಾಜಿ ನಾಯಕ ಸೌರವ್​ ಗಂಗೂಲಿ, ರಸಲ್​, ಶಾಯಿ ಹೋಪ್​, ಕ್ರಿಸ್ ಗೇಲ್​, ಓಶ್ನೆ ಥಾಮಸ್​​ ಸೇರಿದಂತೆ ಇತರರು ಅದ್ಬುತ ಪ್ರದರ್ಶನ ತೋರುವ ಎಲ್ಲ ಸಾಧ್ಯತೆಗಳು ಇವೆ. ಹೀಗಾಗಿ ಈ ಬಾರಿ ವಿಶ್ವಕಪ್​ನಲ್ಲಿ ವೆಸ್ಟ್​ಇಂಡೀಸ್ ತಂಡ ಹಾಗೂ ತಂಡದ ಆಟಗಾರರನ್ನು ಡಾರ್ಕ್​ ಹಾರ್ಸ್​​ಗಳೆಂದೇ ಸೌರವ್​ ಗಂಗೂಲಿ ಭವಿಷ್ಯ ನುಡಿದಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.