ETV Bharat / sports

ಐಪಿಎಲ್​ ರಂಗು ಹೆಚ್ಚಿಸಿದ ಟ್ವಿಟರ್ ಇಂಡಿಯಾ: 6 ಭಾಷೆಗಳಲ್ಲಿ ತಂಡದ ಎಮೋಜಿ ಬಿಡುಗಡೆ - 6 ಭಾಷೆಗಳಲ್ಲಿ ತಂಡದ ಎಮೋಜಿ ಬಿಡುಗಡೆ

ಮುಂಬರುವ ಐಪಿಎಲ್​ ಟೂರ್ನಿಗಾಗಿ ಟ್ವಿಟರ್​ ಇಂಡಿಯಾ ಇಂಗ್ಲಿಷ್ ಮತ್ತು ಆರು ಭಾರತೀಯ ಭಾಷೆಗಳಲ್ಲಿ ಇಮೋಜಿಗಳನ್ನು ಬಿಡುಗಡೆ ಮಾಡಿದೆ.

Twitter launched team emojis in 6 languages for IPL fans to support their teams
6 ಭಾಷೆಗಳಲ್ಲಿ ತಂಡದ ಎಮೋಜಿ ಬಿಡುಗಡೆ
author img

By

Published : Sep 14, 2020, 2:34 PM IST

Updated : Sep 25, 2020, 5:59 PM IST

ನವದೆಹಲಿ: 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಉದ್ಘಾಟನಾ ಪಂದ್ಯಕ್ಕೆ ಕೆಲ ದಿನಗಳಷ್ಟೇ ಬಾಕಿ ಉಳಿದಿದ್ದು, ಕ್ರಿಕೆಟ್ ಅಭಿಮಾನಿಗಳಿಗಾಗಿ ಟ್ವಿಟರ್ ಇಂಡಿಯಾ​ ತಂಡದ ಎಮೋಜಿಗಳನ್ನು ಬಿಡುಗಡೆ ಮಾಡಿದೆ.

ಈ ಇಮೋಜಿಗಳನ್ನು ಇಂಗ್ಲಿಷ್ ಮತ್ತು ಆರು ಭಾರತೀಯ ಭಾಷೆಗಳಲ್ಲಿ ಹ್ಯಾಶ್‌ಟ್ಯಾಗ್‌ಗಳಿಂದ ಸಕ್ರಿಯಗೊಳಿಸಬಹುದು. ಈ ಎಮೋಜಿಗಳ ಮೂಲಕ ಅಭಿಮಾನಿಗಳು ತಮ್ಮ ನೆಚ್ಚಿನ ತಂಡಕ್ಕೆ ತ್ವರಿತವಾಗಿ ಬೆಂಬಲವನ್ನು ತೋರಿಸಲು ಸಾಧ್ಯವಾಗುತ್ತದೆ.

ವಿಶೇಷ ಅಂದರೆ ಈ ಆರು ಭಾರತೀಯ ಭಾಷೆಗಳ ಪೈಕಿ ಕನ್ನಡದಲ್ಲೂ ಹ್ಯಾಶ್‌ಟ್ಯಾಗ್‌ ಮಾಡಲಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು #ನಮ್ಮ RCB ಎಂದು ಹ್ಯಾಶ್‌ಟ್ಯಾಗ್‌ ಬಳಸಿ ಟ್ವೀಟ್ ಮಾಡಬಹುದಾಗಿದೆ.

Twitter launched team emojis in 6 languages for IPL fans to support their teams
ಟ್ವಿಟರ್ ಇಂಡಿಯಾ ಬಿಡುಗಡೆ ಮಾಡಿರುವ ಹ್ಯಾಶ್‌ಟ್ಯಾಗ್​ಗಳು

ಇದೇ ಸೆಪ್ಟೆಂಬರ್​ 19ರಂದು ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಸೆ. 21ರಂದು ಆರ್​ಸಿಬಿ ತಂಡ ಹೈದರಾಬಾದ್ ತಂಡದ ವಿರುದ್ಧ ಮೊದಲ ಪಂದ್ಯ ಆಡಲಿದೆ.

Last Updated : Sep 25, 2020, 5:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.