ETV Bharat / sports

IND v/s SL​ ಸರಣಿ ಮೇಲೆ ಕೋವಿಡ್​ ಕರಿನೆರಳು : ಲಂಕಾ ಬ್ಯಾಟಿಂಗ್ ಕೋಚ್​ಗೆ COVID-19 ದೃಢ

author img

By

Published : Jul 9, 2021, 8:49 AM IST

ಲಂಕಾದ ಇತರ ಆಟಗಾರರಿಗೂ ಕೋವಿಡ್​ ಪರೀಕ್ಷೆ ನಡೆಸಲಾಗಿದ್ದು, ಎಲ್ಲರೂ ಕ್ವಾರಂಟೈನ್​ನಲ್ಲಿದ್ದಾರೆ. ಮುಂಬರುವ ಸರಣಿಯಲ್ಲಿ ಭಾರತ ತಂಡವನ್ನು ಮೊದಲ ಬಾರಿಗೆ ಶಿಖರ್​ ಧವನ್​ ಮುನ್ನಡೆಸುತ್ತಿದ್ದು, ಮೂರು ಏಕದಿನ ಹಾಗೂ 3 ಟಿ-20 ಪಂದ್ಯಗಳಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ..

Sri Lanka batting coach Grant Flower tests positive for COVID-19 ahead of India series
IND vs SL​ ಸರಣಿ ಮೇಲೆ ಕೋವಿಡ್​ ಕರಿನೆರಳು: ಲಂಕಾ ಬ್ಯಾಟಿಂಗ್ ಕೋಚ್​ಗೆ COVID-19 ದೃಢ

ಕೊಲಂಬೊ : ಶ್ರೀಲಂಕಾ ತಂಡದ ಬ್ಯಾಟಿಂಗ್ ಕೋಚ್ ಗ್ರಾಂಟ್ ಫ್ಲವರ್ ಅವರಿಗೆ ಗುರುವಾರ ಕೊರೊನಾ ದೃಢಪಟ್ಟಿದೆ. ಸದ್ಯ ಮುಂಬರುವ ಭಾರತದ ವಿರುದ್ಧದ ಸೀಮಿತ ಓವರ್​ಗಳ ಸರಣಿಯಲ್ಲಿ ಲಂಕಾ ತಂಡ ಭಾಗಿಯಾಗುವ ಹಿನ್ನೆಲೆ ಭೀತಿ ಮೂಡಿಸಿದೆ. ಇಂಗ್ಲೆಂಡ್‌ ಸರಣಿಯಿಂದ ಮರಳಿದ 48 ಗಂಟೆಗಳ ಬಳಿಕ ಕೋವಿಡ್​ ಪರೀಕ್ಷೆಗೆ ಒಳಪಟ್ಟಿದ್ದರು.

ಜುಲೈ 13ರಿಂದ ಪ್ರಾರಂಭವಾಗುವ ಆರು ಪಂದ್ಯಗಳ ವೈಟ್-ಬಾಲ್ ಕ್ರಿಕೆಟ್​ ಸರಣಿಯಲ್ಲಿ ಶ್ರೀಲಂಕಾ ಭಾರತವನ್ನು ಎದುರಿಸಲು ಸಜ್ಜಾಗಿದೆ. ಫ್ಲವರ್​ಗೆ ಪಾಸಿಟಿವ್​ ಕಂಡು ಬಂದ ಹಿನ್ನೆಲೆ ಅವರು ತಂಡದಿಂದ ದೂರವುಳಿದು ಪ್ರತ್ಯೇಕ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಬ್ಯಾಟಿಂಗ್ ಕೋಚ್​ ಗ್ರಾಂಟ್ ಫ್ಲವರ್​ಗೆ ಕೋವಿಡ್​ ತಗುಲಿರುವುದನ್ನು ಶ್ರೀಲಂಕಾ ಕ್ರಿಕೆಟ್ (SLC) ಖಚಿತಪಡಿಸಿದೆ.

ಇದನ್ನೂ ಓದಿ: "ಕನ್ನಡ್ ಅಲ್ಲ, ಕನ್ನಡ..." ಮಹಾರಾಷ್ಟ್ರ ಕ್ರಿಕೆಟಿಗನಿಗೆ ಕನ್ನಡ ಮೇಷ್ಟ್ರಾದ ಕೆ.ಗೌತಮ್‌- ವಿಡಿಯೋ ನೋಡಿ..

ಪಿಸಿಆರ್​(PCR) ಪರೀಕ್ಷೆ ವೇಳೆ ಸೋಂಕು ತಗುಲಿರುವುದು ತಿಳಿದು ಬಂದಿದೆ. ತಕ್ಷಣ ಅವರು ಪ್ರತ್ಯೇಕವಾಗಿ ಉಳಿದುಕೊಂಡಿದ್ದಾರೆ. ಇಂಗ್ಲೆಂಡ್​ನಿಂದ ಮರಳಿರುವ ಇತರ ಆಟಗಾರರು ಸದ್ಯ ಕೋಚ್​ ಸಂಪರ್ಕದಲ್ಲಿಲ್ಲ ಎಂದು ಎಸ್​ಎಲ್​ಸಿ ತಿಳಿಸಿದೆ.

ಲಂಕಾದ ಇತರ ಆಟಗಾರರಿಗೂ ಕೋವಿಡ್​ ಪರೀಕ್ಷೆ ನಡೆಸಲಾಗಿದ್ದು, ಎಲ್ಲರೂ ಕ್ವಾರಂಟೈನ್​ನಲ್ಲಿದ್ದಾರೆ. ಮುಂಬರುವ ಸರಣಿಯಲ್ಲಿ ಭಾರತ ತಂಡವನ್ನು ಮೊದಲ ಬಾರಿಗೆ ಶಿಖರ್​ ಧವನ್​ ಮುನ್ನಡೆಸುತ್ತಿದ್ದು, ಮೂರು ಏಕದಿನ ಹಾಗೂ 3 ಟಿ-20 ಪಂದ್ಯಗಳಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ.

ಇದನ್ನೂ ಓದಿ: SL vs IND: ಸರಣಿ ಆಯೋಜನೆಯಿಂದ ಶ್ರೀಲಂಕಾಗೆ 89.7 ಕೋಟಿ ರೂ. ಆದಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.